ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್: ಲ್ಯಾಪ್‌ಟಾಪ್‌ಗಳ ಮೇಲೆ ಬಿಗ್ ಆಫರ್!
ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಆಯೋಜಿಸಿದೆ. ಈ ಸೇಲ್‌ನಲ್ಲಿ ಹಲವು ಪ್ರಾಡಕ್ಟ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಲಭ್ಯವಾಗ್ತಿದೆ. ಇನ್ನು ಇದೇ ಸಮಯದಲ್ಲಿ ಲ್ಯಾಪ್‌ಟಾಪ್ ಖರೀದಿಸುವವರಿಗೆ ಇದಕ್ಕಿಂತ ಬೆಸ್ಟ್ ಟೈಂ ಇನ್ನೊಂದಿಲ್ಲ. ಯಾಕಂದ್ರೆ ಲ್ಯಾಪ್‌ಟಾಪ್‌ಗಳ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ರಿಯಾಯಿತಿ ದೊರೆಯಲಿದೆ.
ಹೌದು, ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ 2023ನಲ್ಲಿ ಡೆಲ್, ಲೆನೊವೊ, ಎಚ್‌ಪಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್‌ಗಳಿಗೆ ರಿಯಾಯಿತಿ ಸಿಗುತ್ತಿದೆ. ಈ ಸಮಯದಲ್ಲಿ ಡೆಲ್ ಲ್ಯಾಪ್‌ಟಾಪ್‌ಗಳು 34% ರಿಯಾಯಿತಿಯನ್ನು ಪಡೆದುಕೊಂಡಿವೆ. ಹಾಗಾದ್ರೆ ಅಮೆಜಾನ್ ಸೇಲ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿರುವ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೆಲ್ 14 ಲ್ಯಾಪ್‌ಟಾಪ್ (ಇಂಟೆಲ್ i5 ಪ್ರೊಸೆಸರ್)
ಡೆಲ್ 14 ಲ್ಯಾಪ್‌ಟಾಪ್ ಕೈಗೆಟುಕುವ ಬೆಲೆಯ ಲ್ಯಾಪ್‌ಟಾಪ್ ಆಗಿದ್ದು, ಇದೀಗ ಅಮೆಜಾನ್‌ನಲ್ಲಿ ಇನ್ನಷ್ಟು ಬೆಲೆ ಕಡಿತವನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ ಮೂಲಬೆಲೆ 69,211ರೂ. ಆಗಿದ್ದು, 45,990ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್ 11 ನೇ ಜನ್ ಇಂಟೆಲ್ ಕೋರ್ i5-11357G ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 8GB RAM ಮತ್ತು 512GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು I/O ಪೋರ್ಟ್‌ಗಳಲ್ಲಿ HDMI ಪೋರ್ಟ್, 3 USB ಪೋರ್ಟ್‌ಗಳು, 1 ಹೆಡ್‌ಸೆಟ್ ಜ್ಯಾಕ್, 1 HDMI ಪೋರ್ಟ್ ಮತ್ತು SD 3.0 ಕಾರ್ಡ್ ಸ್ಲಾಟ್ ಬೆಂಬಲಿಸಲಿದೆ.
ಲೆನೊವೊ ಐಡಿಯಾಪ್ಯಾಡ್ 3 AMD Ryzen 5
ಲೆನೊವೊ ಐಡಿಯಾಪ್ಯಾಡ್ 3 AMD Ryzen 5 ಲ್ಯಾಪ್‌ಟಾಪ್ 15.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 5ನೇ Gen AMD Ryzen 5 5500U ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB LPDDR4 RAM ಮತ್ತು 512GB SSD ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಲ್ಯಾಪ್‌ಟಾಪ್ 45W ವೇಗದ ಚಾರ್ಜಿಂಗ್ ಬೆಂಬಲಿಸುವ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ WiFi, Bluetooth, USB, 3.5mm ಹೆಡ್‌ಫೋನ್/ಮೈಕ್ ಕಾಂಬೊ ಜ್ಯಾಕ್, HDMI 1.4b ಪೋರ್ಟ್ ಮತ್ತು 4-in-1 ಮೀಡಿಯಾ ರೀಡರ್ ಅನ್ನು ಬೆಂಬಲಿಸುತ್ತದೆ. ಇದನ್ನು ಅಮೆಜಾನ್‌ನಲ್ಲಿ ಡಿಸ್ಕೌಂಟ್ ದರಲ್ಲಿ ಕೇವಲ 40,490ರೂ. ಬೆಲೆಯನ್ನು ಹೊಂದಿದೆ.
ಏಸರ್ ಅಸ್ಪೈರ್ ಲೈಟ್ (11ನೇ Gen Intel Core i3 ಪ್ರೊಸೆಸರ್)
ಏಸರ್ ಅಸ್ಪೈರ್ ಲೈಟ್ 11ನೇ ತಲೆಮಾರಿನ ಇಂಟೆಲ್ ಕೋರ್ i3 ಲ್ಯಾಪ್‌ಟಾಪ್ ಬಜೆಟ್ ಖರೀದಿದಾರರಿಗೆ ಉತ್ತಮವಾಗಿದೆ. ಇದು 15.6 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದನ್ನು ವಿಂಡೋಸ್ 11 ಅನ್ನು OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 45W ಬ್ಯಾಟರಿಯನ್ನು ಬೆಂಬಲಿಸಲಿದೆ. ಇದನ್ನು ರಿಯಾಯಿತಿ ದರದಲ್ಲಿ ಕೇವಲ 29,990ರೂ. ಬೆಲೆಗೆ ಖರೀದಿಸಬಹುದಾಗಿದೆ.
ಆಸುಸ್ ವಿವೋಬುಕ್ 16X ಲ್ಯಾಪ್‌ಟಾಪ್
ಆಸುಸ್ ವಿವೋಬುಕ್ 16X ಲ್ಯಾಪ್‌ಟಾಪ್ 16 ಇಂಚಿನ WUXGA ILS LCD ಡಿಸ್‌ಪ್ಲೇ ಹೊಂದಿದೆ. ಇದು AMD ರೈಜೆನ್ 5 5600H ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಲ್ಯಾಪ್‌ಟಾಪ್ AMD Radeon Vega 7 ಗ್ರಾಫಿಕ್ಸ್ ಕಾರ್ಡ್ ಒಳಗೊಂಡಿದೆ. ಹಾಗೆಯೇ 8GB RAM ಮತ್ತು 512GB SSD ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 50W ಬ್ಯಾಟರಿಯು 8 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ USB ಟೈಪ್-A, USB ಟೈಪ್-B, USB ಟೈಪ್-C, HDMI 1.4, ಮತ್ತು ಆಡಿಯೋ ಜ್ಯಾಕ್ ಬೆಂಬಲವನ್ನು ಒಳಗೊಂಡಿದೆ. ಇದನ್ನು ಅಮೆಜಾನ್‌ನಲ್ಲಿ ಡಿಸ್ಕೌಂಟ್ ದರದಲ್ಲಿ ಕೇವಲ 46,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








