Home
ಸುದ್ದಿಜಾಲ

ಅಮೆಜಾನ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿದರೆ ಸಿಗಲಿದೆ ನಿರೀಕ್ಷೆಗೂ ಮೀರಿದ ಡಿಸ್ಕೌಂಟ್‌!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗಾಗಿ ವಿಶೇಷ ಸೇಲ್‌ಗಳನ್ನು ನಡೆಸುತ್ತಲೇ ಬಂದಿದೆ. ಇದೀಗ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಆಯೋಜಿಸಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಬಂದಿರುವ ಈ ರಿಯಾಯಿತಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸೋರಿಗೆ ಬಂಫರ್‌ ಆಫರ್‌ಗಳನ್ನು ನೀಡಲಾಗ್ತಿದೆ.

ಹೌದು, ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಇದೀಗ ಲೈವ್‌ ಆಗಿದೆ. ಈ ಸೇಲ್‌ ಆಗಸ್ಟ್‌ 8 ರವೆರೆಗೆ ನಡೆಯಲಿದೆ. ಈ ಸಮಯದಲ್ಲಿ ಪ್ರಮುಖ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ವಿಶೇಷ ಡಿಸ್ಕೌಂಟ್‌ ನೀಡುತ್ತಿವೆ. ಇದಲ್ಲದೆ ಬ್ಯಾಂಕ್‌ ಆಫರ್‌ಗಳು ಕೂಡ ದೊರೆಯುತ್ತಿವೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ನಲ್ಲಿ ಫೋನ್‌ ಖರೀದಿಸಿದರೆ ಸಿಗಲಿದೆ ನಿರೀಕ್ಷೆಗೂ ಮೀರಿದ ಡಿಸ್ಕೌಂಟ್‌

ಐಫೋನ್ 14
ಐಫೋನ್ 14 ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ದರದಲ್ಲಿ ಕೇವಲ 66,999ರೂ. ಬೆಲೆಗೆ ದೊರೆಯಲಿದೆ. ಇದರ ಮೂಲ ಬೆಲೆ 79,900ರೂ ಇದೆ ಅನ್ನೊದನ್ನ ಗಮನಿಸಬೇಕಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ 12,901ರೂ. ಗಳ ರಿಯಾಯಿತಿ ಲಭ್ಯವಾಗಲಿದೆ. ಇದಲ್ಲದೆ ಬ್ಯಾಂಕ್‌ ಆಫರ್‌ ಕೂಡ ಲಭ್ಯವಾಗಲಿದ್ದು, ಇದರಿಂದ ಐಫೋನ್ 14 ಅನ್ನು ನೀವು 66,249 ರೂ.ಗೆ ಖರೀದಿಸಬಹುದಾಗಿದೆ.

ಒನ್‌ಪ್ಲಸ್‌ ನಾರ್ಡ್‌ CE 3
ಒನ್‌ಪ್ಲಸ್‌ ನಾರ್ಡ್‌ CE 3 ಸ್ಮಾರ್ಟ್‌ಫೋನ್‌ ಕೂಡ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ರಿಯಾಯಿತಿ ಪಡೆದಿದೆ. ಇದರ ಪರಿಣಾಮ ಈ ಸ್ಮಾರ್ಟ್‌ಫೋನ್‌ ಅನ್ನು ನೀವು 24,999ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಪಡೆದಿದೆ. ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 782G SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಅದರೊಂದಿಗೆ ಅಡ್ರಿನೋ 642L GPU ಬೆಂಬಲವನ್ನು ಪಡೆದುಕೊಂಡಿದೆ.

ರೆಡ್ಮಿ 12 5G
ರೆಡ್ಮಿ 12 5G ಸ್ಮಾರ್ಟ್‌ಫೋನ್‌ ಕೂಡ ಅಮೆಜಾನ್‌ ಸೇಲ್‌ನಲ್ಲಿ ಕೇವಲ 10,999ರೂ. ಬೆಲೆಗೆ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ 6.79 ಇಂಚಿನ FHD ಡಿಸ್‌ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 4 ಜನವರಿ 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ 50 ಮೆಗಾಪಿಕ್ಸೆಲ್‌ ಪ್ರೈಮರಿ ಶೂಟರ್‌, 2 ಮೆಗಾಪಿಕ್ಸೆಲ್‌ ಡೆಪ್ಟ್‌ ಸೆನ್ಸಾರ್‌ ಆಯ್ಕೆಯಾಗಿದೆ. ಜೊತೆಗೆ 5,000 mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಫೋನ್ ಅನ್ನು ಆಯ್ಕೆ ಮಾಡಿದೆ, ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 5 5G
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 5 5G ಸ್ಮಾರ್ಟ್‌ಫೋನ್ 512GB ಸ್ಟೋರೇಜ್ ಮಾದರಿಯು ಅಮೆಜಾನ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 7.6 ಇಂಚಿನ ಇನರ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಕವರ್‌ ಡಿಸ್‌ಪ್ಲೇ 6.2 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಆಗಿದೆ. ಜೊತೆಗೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 13-ಆಧಾರಿತ One UI 5.1.1 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್‌ ಅನ್ನು ನೀವು ಅಮೆಜಾನ್‌ ಸೇಲ್‌ನಲ್ಲಿ ಕೇವಲ 12,490ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಎಕ್ಸಿನೋಸ್‌ 1330 ಆಕ್ಟಾ ಕೋರ್ SoC ಪ್ರೊಸೆಸರ್ ಹೊಂದಿದ್ದು, 6000 mAh ಬ್ಯಾಟರಿ ಬ್ಯಾಕ್‌ಅಪ್‌ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಈ ಫೋನ್ 4GB RAM + 128 GB ವೇರಿಯಂಟ್‌ ಜೊತೆಗೆ 6GB RAM ಮತ್ತು 128 GB ಸ್ಟೋರೇಜ್‌ ಆಯ್ಕೆಯಲ್ಲಿಯೂ ಖರೀದಿಸಬಹುದಾಗಿದೆ.

Best Mobiles in India

English summary
Amazon Great Freedom Festival sale: Massive Discount on iPhone 14, OnePlus Nord CE 3, and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+