ಡಿಸ್ಕೌಂಟ್ ಬೆಲೆಯಲ್ಲಿ ಸ್ಮಾರ್ಟ್‌ಟಿವಿ ಖರೀದಿಸಲು ಇದುವೇ ಸೂಕ್ತ ಸಮಯ!
ಇ-ಕಾಮರ್ಸ್ ದೈತ್ಯ ಆನ್‌ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ಪ್ಲಾಟ್‌ಫಾರ್ಮ್ ಎನಿಸಿಕೊಂಡಿದೆ. ತನ್ನ ಆನ್‌ಲೈನ್ ಗ್ರಾಹಕರಿಗಾಗಿ ಒಂದಲ್ಲ ಒಂದು ರೀತಿಯ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಹಬ್ಬದ ದಿನಗಳಲ್ಲಿ ಡಿಸ್ಕೌಂಟ್ ಮೇಳಗಳನ್ನು ನಡೆಸುವ ಮೂಲಕ ಗ್ರಾಹಕರಿಗೆ ಬಿಗ್ ಆಫರ್ ನೀಡುತ್ತಲೇ ಬಂದಿದೆ. ಸದ್ಯ ಇದೀಗ ನವರಾತ್ರಿಯ ಸಮಯದಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ನಡೆಸುತ್ತಿದೆ. ಈ ಬಾರಿಯ ಸೇಲ್‌ನಲ್ಲಿ ಪ್ರತಿನಿತ್ಯವೂ ಬಿಗ್ ಡಿಸ್ಕೌಟ್ ದೊರೆಯುತ್ತಿದ್ದು ಸಾಕಷ್ಟು ಸೌಂಡ್ ಮಾಡ್ತಿದೆ.

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ಸೇಲ್ ಆಕ್ಟೋಬರ್ 3ರಿಂದ ಶುರುವಾಗಿದ್ದು, ಬಿಗ್ ಡಿಸ್ಕೌಂಟ್‌ನಿಂದ ಗಮನ ಸೆಳೆದಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡಲಾಗ್ತಿದೆ. ಜೊತೆಗೆ ಸ್ಮಾರ್ಟ್‌ಟಿವಿಗಳ ಮೇಲೂ ಬಿಗ್ ಡಿಸ್ಕೌಂಟ್ ನೀಡಲಾಗ್ತಿದೆ. ಹಾಗಾದ್ರೆ ಅಮೆಜಾನ್ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳನ್ನು ಡಿಸ್ಕೌಂಟ್‌ನಲ್ಲಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ UA32T4340AKXXL
ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿಯ ಸ್ಯಾಮ್‌ಸಂಗ್ UA32T4340AKXXL ಸ್ಮಾರ್ಟ್‌ಟಿವಿ ಡಿಸ್ಕೌಂಟ್ ಪಡೆದುಕೊಂಡಿದೆ. ಇದು 19,990ರೂ ಮೂಲ ಬೆಲೆ ಹೊಂದಿದ್ದು, ಅಮೆಜಾನ್ ಸೇಲ್‌ನಲ್ಲಿ 17,490ರೂ ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 1,366x768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದೆ. ಇದು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಡಾಲ್ಬಿ ಡಿಜಿಟಲ್ ಪ್ಲಸ್ ಆಡಿಯೊದೊಂದಿಗೆ ಬರುವ 20W ಸ್ಪೀಕರ್‌ಗಳೊಂದಿಗೆ ಜೋಡಿಯಾಗಿದೆ. ಈ ಟಿವಿಯ ಇತರ ಸ್ಮಾರ್ಟ್ ಫೀಚರ್ಸ್‌ಗಳಲ್ಲಿ ಸ್ಕ್ರೀನ್ ಶೇರ್ ಮತ್ತು ಮ್ಯೂಸಿಕ್ ಸಿಸ್ಟಂ ಕೂಡ ಸೇರಿವೆ.

ಒನ್‌ಪ್ಲಸ್ ವೈ ಸರಣಿ (32Y1)
ಒನ್‌ಪ್ಲಸ್ ವೈ ಸಿರೀಸ್ 32Y1 ಸ್ಮಾರ್ಟ್‌ಟಿವಿ ಅಮೆಜಾನ್ ಸೇಲ್‌ನಲ್ಲಿ ಬಿಗ್ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ 60Hz ರಿಫ್ರೆಶ್ ರೇಟ್ ಅನ್ನು ಹೊಂದಿರುವ HD ಡಿಸ್‌ಪ್ಲೇ ಹೊಂದಿದೆ. ಇದು ಡಾಲ್ಬಿ ಆಡಿಯೋ ಬೆಂಬಲದೊಂದಿಗೆ ಬರುವ 20W ಸ್ಪೀಕರ್‌ಗಳನ್ನು ಹೊಂದಿದೆ. ನೀವು ಒನ್‌ಪ್ಲಸ್ ಕನೆಕ್ಟ್, ಗೂಗಲ್ ಅಸಿಸ್ಟೆಂಟ್, ಕ್ರೋಮಾಕಾಸ್ಟ್ ಮತ್ತು OxygenPlay ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ ಟಿವಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 15,990ರೂ.ಬೆಲೆಗೆ ಲಭ್ಯವಾಗಲಿದೆ.

ಒನಿಡಾ ಫೈರ್ ಟಿವಿ 32HIF1
ಒನಿಡಾ ಫೈರ್ ಟಿವಿ 32HIF1 ಸ್ಮಾರ್ಟ್‌ಟಿವಿ ಅಮೆಜಾನ್ ಸೇಲ್‌ನಲ್ಲಿ ಕೇವಲ 15,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 1,366x768 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದು ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು DTS TruSurround ತಂತ್ರಜ್ಞಾನ ಬೆಂಬಲಿಸುವ 20W ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಡ್ಯುಯಲ್ ಬ್ಯಾಂಡ್ ವೈ-ಫೈ, ಅಂತರ್ನಿರ್ಮಿತ ಫೈರ್ ಟಿವಿ ಓಎಸ್ ಮತ್ತು ಅಲೆಕ್ಸಾ ಜೊತೆ ವಾಯ್ಸ್ ರಿಮೋಟ್ ಅನ್ನು ಹೊಂದಿದೆ.

ಮಿ ಟಿವಿ 4A
Mi TV 4A 60Hz ರಿಫ್ರೆಶ್ ರೇಟ್ ಹೊಂದಿರುವ HD ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್ ಟಿವಿ ಗೂಗಲ್ ಅಸಿಸ್ಟೆಂಟ್, ಗೂಗಲ್ ಪ್ಲೇ ಆಕ್ಸೆಸ್, ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್, 5 ಸೆಕೆಂಡುಗಳಲ್ಲಿ ಮಿ ಕ್ವಿಕ್ ವೇಕ್ ಮತ್ತು ಪೇರೆಂಟಲ್ ಲಾಕ್ ಹೊಂದಿರುವ ಕಿಡ್ಸ್ ಮೋಡ್ ಫೀಚರ್ಸ್ ಹೊಂದಿದೆ. ಜೊತೆಗೆ ಮೂರು HDMI ಪೋರ್ಟ್‌ಗಳನ್ನು, ಎರಡು USB ಸ್ಲಾಟ್‌ಗಳನ್ನು ಮತ್ತು ಬ್ಲೂಟೂತ್ v4.1 ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ರಿಯಾಯಿತಿ ದರದಲ್ಲಿ 15,499ರೂ.ಬೆಲೆ ಹೊಂದಿದೆ.

ಕೊಡಕ್ 32HDX7XPRO
ಕೊಡಕ್ 32HDX7XPRO HD LED TV ಅಮೆಜಾನ್ ಸೇಲ್‌ನಲ್ಲಿ 13,999ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 60Hz ರಿಫ್ರೆಶ್ ರೇಟ್ ಹೊಂದಿರುವ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಅಲ್ಟ್ರಾ-ಥಿನ್ ಬೆಜೆಲ್ ಹೊಂದಿದೆ. ಈ ಸ್ಮಾರ್ಟ್‌ಟಿವಿ 24W ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ. ಅಲ್ಲದೆ ಮೂರು ಎಚ್‌ಡಿಎಂಐ ಪೋರ್ಟ್‌ಗಳು ಮತ್ತು ಎರಡು ಯುಎಸ್‌ಬಿ ಸ್ಲಾಟ್‌ಗಳನ್ನು ಒಳಗೊಂಡ ಕನೆಕ್ಟಿವಿಟಿ ಆಯ್ಕೆಗಳೊಂದಿಗೆ ಬರುತ್ತದೆ.


Click it and Unblock the Notifications








