ಅಮೆಜಾನ್ ಸೇಲ್‌ನಲ್ಲಿ 50 ಇಂಚಿನ ಸ್ಮಾರ್ಟ್‌ಟಿವಿಗಳ ಮೇಲೆ 50% ಡಿಸ್ಕೌಂಟ್ ಲಭ್ಯ!
ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ನಡೆಯುತ್ತಿದೆ. ನವರಾತ್ರಿ ಸಮಯದಲ್ಲಿ ನಡೆಯುತ್ತಿರುವ ಈ ಸೇಲ್ ಆನ್‌ಲೈನ್ ಶಾಪಿಂಗ್ ಪ್ರಿಯರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಅಷ್ಟೇ ಅಲ್ಲ ಹಬ್ಬದ ಸಮಯದಲ್ಲಿ ಮನೆಗೆ ಹೊಸ ಉತ್ಪನ್ನಗಳನ್ನು ತರಬೇಕೆಂದುಕೊಂಡವರಿಗೆ ಬಿಗ್ ಡಿಸ್ಕೌಂಟ್ ನೀಡುತ್ತಿದೆ.
ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ವ್ಯಾಪಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್ ನೀಡಲಾಗ್ತಿದೆ. ಇದರಲ್ಲಿ ಸ್ಮಾರ್ಟ್‌ಟಿವಿಗಳ ಲೈನ್‌ಆಪ್ ಕೂಡ ಸೇರಿಕೊಂಡಿದೆ. ಅದರಲ್ಲೂ 50 ಇಂಚಿನ ಸ್ಮಾರ್ಟ್‌ಟಿವಿಗಳ ಮೇಲೆ 50% ತನಕ ರಿಯಾಯಿತಿ ಲಭ್ಯವಾಗ್ತಿದೆ. ಇದರಿಂದ ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಟಿವಿ ಖರೀದಿಸಬೇಕೆಂದುಕೊಂಡವರಿಗೆ ಇದು ಬೆಸ್ಟ್ ಟೈಂ ಎನಿಸಿಕೊಂಡಿದೆ. ಹಾಗಾದ್ರೆ ಅಮೆಜಾನ್ ಸೇಲ್‌ನಲ್ಲಿ ರಿಯಾಯಿತಿ ಪಡೆದುಕೊಂಡಿರುವ 50 ಇಂಚಿನ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ (50 ಇಂಚಿನ) 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಗೂಗಲ್ ಟಿವಿ
ಸೋನಿ ಬ್ರಾವಿಯಾ (50 ಇಂಚಿನ) 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಗೂಗಲ್ ಟಿವಿ ಅಮೆಜಾನ್ ಸೇಲ್‌ನಲ್ಲಿ 32% ರಿಯಾಯಿತಿಯಲ್ಲಿ ಲಭ್ಯವಿದೆ. ಇದರಿಂದ ಸ್ಮಾರ್ಟ್‌ಟಿವಿಯನ್ನು ಮೂಲಬೆಲೆಗಿಂತ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ 77,890ರೂ ಬೆಲೆಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಟಿವಿ ಡಾಲ್ಬಿ ಅಟ್ಮೋಸ್ ಅನ್ನು ಬೆಂಬಲಿಸಲಿದೆ.
LG (50 ಇಂಚು) 4K ಅಲ್ಟ್ರಾ HD ಸ್ಮಾರ್ಟ್ LED TV
LG (50 ಇಂಚು) 4K ಅಲ್ಟ್ರಾ HD ಸ್ಮಾರ್ಟ್ LED TV ಅಮೆಜಾನ್ ಸೇಲ್‌ನಲ್ಲಿ 43% ರಿಯಾಯಿತಿ ಪಡೆದುಕೊಂಡಿದೆ. ಆದರಿಂದ ಸ್ಮಾರ್ಟ್‌ಟಿವಿ ನಿಮಗೆ ಕೇವಲ 39,990ರೂ ಬೆಲೆಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್ ಟಿವಿ WebOS ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ Apple Airplay 2 ಮತ್ತು Homekit ಅನ್ನು ಬೆಂಬಲಿಸುತ್ತದೆ.
ಸ್ಯಾಮ್‌ಸಂಗ್ (50 ಇಂಚು) ಕ್ರಿಸ್ಟಲ್ ಐಸ್ಮಾರ್ಟ್ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ LED TV
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಟಿವಿ 32% ರಿಯಾಯಿತಿ ಪಡೆದುಕೊಂಡಿದೆ. ಆದರಿಂದ ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಭಾರಿ ಬೆಲೆ ಇಳಿಕೆಯಾಗಿದ್ದು, ಕೇವಲ 41,990ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸ್ಯಾಮ್‌ಸಂಗ್ ಟಿವಿ ವಾಯರ್‌ಲೆಸ್ DeX ಅನ್ನು ಬೆಂಬಲಿಸುತ್ತದೆ.
ಒನ್‌ಪ್ಲಸ್ (50 ಇಂಚುಗಳು) Y ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ LED TV
ಒನ್‌ಪ್ಲಸ್ (50 ಇಂಚುಗಳು) Y ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ LED TV ಅಮೆಜಾನ್‌ನಲ್ಲಿ 33% ರಿಯಾಯಿತಿ ಪಡೆದಿದೆ. ಆದರಿಂದ ಸ್ಮಾರ್ಟ್‌ಟಿವಿಯನ್ನು ನೀವು 30,870 ರೂ ಗಳಲ್ಲಿ ಖರೀದಿಸಬಹುದು. ಇನ್ನು ಈ ಟಿವಿ ಡಾಲ್ಬಿ ಆಡಿಯೋ ಮತ್ತು ಡಾಲ್ಬಿ ಅಟ್ಮಾಸ್ ಡಿಕೋಡಿಂಗ್ ಎರಡನ್ನೂ ಬೆಂಬಲಿಸುತ್ತದೆ.
ಶಿಯೋಮಿ MI (50 ಇಂಚುಗಳು) X ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ LED TV
ಅಮೆಜಾನ್ ಸೇಲ್‌ನಲ್ಲಿ ಶಿಯೋಮಿ ಕಂಪೆನಿಯ ಈ ಸ್ಮಾರ್ಟ್‌ಟಿವಿ ಮೇಲೆ 33% ರಿಯಾಯಿತಿ ನೀಡಲಾಗ್ತಿದೆ. ಆದರಿಂದ ಸ್ಮಾರ್ಟ್‌ಟಿವಿಯು ನಿಮಗೆ ಕೇವಲ 29,999 ರೂಗಳಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಟಿವಿಯು ಡಾಲ್ಬಿ ವಿಷನ್ ಅನ್ನು ಬೆಂಬಲಿಸಲಿದೆ.
ಹಿಸೆನ್ಸ್ (50 ಇಂಚುಗಳು) ಬೆಜೆಲ್‌ಲೆಸ್ ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್ TV
ಹಿಸೆನ್ಸ್ (50 ಇಂಚುಗಳು) ಬೆಜೆಲ್‌ಲೆಸ್ ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್ TV ಅಮೆಜಾನ್ ಸೇಲ್‌ನಲ್ಲಿ 45% ರಿಯಾಯಿತಿ ಪಡೆದುಕೊಂಡಿದೆ. ಆದರಿಂದ ಇದನ್ನು ನೀವು 30,490 ರೂಗಳಲ್ಲಿ ಖರೀದಿಸಬಹುದು. ಇನ್ನು ಈ ಸ್ಮಾರ್ಟ್‌ಟಿವಿಯು 10-ಬಿಟ್ ಪ್ಯಾನೆಲ್ ಅನ್ನು ಹೊಂದಿದೆ.


Click it and Unblock the Notifications








