Home
ಸುದ್ದಿಜಾಲ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್:ಲ್ಯಾಪ್‌ಟಾಪ್‌ಗಳಿಗೆ ಭಾರಿ ಡಿಸ್ಕೌಂಟ್‌!

ದೇಶದಲ್ಲಿ ಹಬ್ಬದ ಸೀಸನ್‌ ಶುರುವಾಗುತ್ತಿದ್ದಂತೆ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ತಮ್ಮ ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್‌ ಅನ್ನು ನಿಡೋಕೆ ಶುರುಮಾಡಿವೆ. ಅಲ್ಲದೆ ಅನೇಕ ಬ್ರ್ಯಾಂಡ್‌ಗಳು ತಮ್ಮ ವಸ್ತುಗಳಿಗೆ ಆಫರ್‌ ನೀಡುತ್ತಿವೆ ಮತ್ತು ಆನ್‌ಲೈನ್‌ನಲ್ಲಿ ಆಫರ್‌ಗಳ ಸುರಿಮಳೆಯೆ ಆಗುತ್ತಿದೆ. ಇನ್ನು ಆನ್‌ಲೈನ್‌ ಗ್ರಾಹಕರನ್ನ ಸೆಳೆಯುವುದಕ್ಕೆ ಅಮೆಜಾನ್‌ ದಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಅನ್ನು ಆಕ್ಟೋಬರ್‌ 17ಕ್ಕೆ ಶುರು ಮಾಡಲು ಸಿದ್ದತೆ ನಡೆಸಿದೆ. ಇನ್ನು ಈ ಸೇಲ್‌ನಲ್ಲಿ ಅನೇಕ ಆಕರ್ಷಕ ಆಫರ್‌ಗಳನ್ನು ನೀಡಲಾಗ್ತಿದೆ.

ಅಮೆಜಾನ್

ಹೌದು, ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ಹಬ್ಬದ ಸೀಸನ್‌ ಸೇಲ್‌ ಅನ್ನು ಮತ್ತೆ ತಂದಿವೆ. ಇದರಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಅಕ್ಟೋಬರ್ 17 ರಂದು ಪ್ರಾರಂಭವಾಗಲಿದೆ. ಅಲ್ಲದೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ 16 ರಂದು ಪ್ರಾರಂಭವಾಗಲಿದೆ. ಇದರಲ್ಲಿ ಸಾಕಷ್ಟು ರಿಯಾಯಿತಿಗಳು ಮತ್ತು ಆಫರ್‌ಗಳ ಜೊತೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ಮಾರಾಟದ ಸಮಯದಲ್ಲಿ ಹೆಚ್ಚುವರಿ 10% ರಿಯಾಯಿತಿ ಪಡೆಯಬಹುದಾಗಿದೆ. ಇನ್ನು ಈ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳಿಗೂ ಭಾರಿ ರಿಯಾಯಿತಿಯನ್ನು ನೀಡಲಾಗ್ತಿದ್ದು, ರಿಯಾಯಿತಿ ದರದಲ್ಲಿ ಲಭ್ಯವಾಗುವ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲ್ಯಾಪ್‌ಟಾಪ್‌ಗಳು

ಲ್ಯಾಪ್‌ಟಾಪ್‌ಗಳು

ಅಮೆಜಾನ್ ಸೇಲ್‌ನಲ್ಲಿ ಈ ಭಾರಿ ಲ್ಯಾಪ್‌ಟಾಪ್‌ಗಲ ಮೇಲೆ ಭಾರಿ ಡಿಸ್ಕೌಂಟ್‌ ದೊರೆಯಲಿದೆ ಎಂದು ಅಮೆಜಾನ್‌ ಹೇಳಿಕೊಂಡಿದೆ. ಅದರಲ್ಲೂ ಈ ಭಾರಿಯ ಸೇಲ್‌ನಲ್ಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು 35,000 ರೂ.ಗಳವರೆಗೆ ರಿಯಾಯಿತಿಯೊಂದಿಗೆ ನೀಡಲಿದೆ ಎಂದು ಹೇಳಲಾಗಿದೆ. ಇನ್ನು ರಿಯಾಯಿತಿಯಲ್ಲಿ ದೊರೆಯಲಿರುವ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೋ ಡಿಟೇಲ್ಸ್‌ ಇಲ್ಲಿದೆ ಓದಿರಿ.

Asus TUF A15

Asus TUF A15

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ Asus TUF A15 ಗೇಮಿಂಗ್‌ ಲ್ಯಾಪ್‌ಟಾಪ್‌ ಅನ್ನು ರಿಯಾಯಿತಿ ದರದಲ್ಲಿ 62,990 ರೂ.ಗಳಿಗೆ ಖರೀದಿಸಬಹುದು. ಇನ್ನು ಈ ಲ್ಯಾಪ್‌ಟಾಪ್‌ AMDರೈಜೆನ್ 5 4600H ಪ್ರೊಸೆಸರ್ ಹೊಂದಿದ್ದು, ಎನ್‌ವಿಡಿಯಾ ಜೀಫೋರ್ಸ್ GTX1650, 8GB RAM, ಮತ್ತು 512GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

HP Pavilion Gaming DK0268TX

HP Pavilion Gaming DK0268TX

ಇನ್ನು ಅಮೆಜಾನ್‌ ಸೇಲ್‌ನಲ್ಲಿ HP ಪೆವಿಲಿಯನ್ ಗೇಮಿಂಗ್ DK0268TX ಲ್ಯಾಪ್‌ಟಾಪ್ ಸಹ 62,990 ರೂ ಬೆಲೆಯಲ್ಲಿಲಭ್ಯವಿರುತ್ತದೆ. ಈ ಲ್ಯಾಪ್‌ಟಾಪ್ 8GB RAM ಹೊಂದಿದ್ದು, ಇಂಟೆಲ್ I5 9300H ಪ್ರೊಸೆಸರ್ ಹೊಂದಿದೆ.

Acer Nitro 5

Acer Nitro 5

ಏಸರ್ ನೈಟ್ರೋ 5 ಗೇಮಿಂಗ್‌ ಲ್ಯಾಪ್‌ಟಾಪ್‌ ಕೂಡ ಈ ಭಾರಿಯ ಅಮೆಜಾನ್‌ ಸೇಲ್‌ನಲ್ಲಿ 59,794 ರೂಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಇನ್ನು ಈ ಏಸರ್ ನೈಟ್ರೊ 5 ಲ್ಯಾಪ್‌ಟಾಪ್‌ ಇಂಟೆಲ್ ಕೋರ್ ಐ 5-9300 ಹೆಚ್ ಪ್ರೊಸೆಸರ್ ಹೊಂದಿದ್ದು, 32GB RAM ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 58Wh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
Gaming laptops will be available with up to ₹35,000 disocunt during the Great Indian Festival.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+