ಅಮೆಜಾನ್‌ ಸೇಲ್‌ನಲ್ಲಿ ಇಯರ್‌ಬಡ್ಸ್‌ಗಳ ಮೇಲೆ ಭಾರಿ ಡಿಸ್ಕೌಂಟ್‌!

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕಾಗಿಯೇ ಸಾಕಷ್ಟು ರಿಯಾಯಿತಿಗಳನ್ನ ನೀಡಲಿವೆ. ಹಬ್ಬದ ಸೀಸನ್‌ನಲ್ಲಿ ತಮ್ಮದೇ ಆದ ಫೆಸ್ಟಿವಲ್‌ ಸೇಲ್‌ ಅನ್ನು ನಡೆಸುವ ಮೂಲಕ ವಿಶೇಷ ಆಫರ್‌ ಹಾಗೂ ಸೇಲ್‌ ಅನ್ನು ನಡೆಸುತ್ತವೆ. ಇದೀಗ ಇ-ಕಾಮರ್ಸ್‌ ದೈತ್ಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ 2020 ಯನ್ನು ಪ್ರಾರಂಭಿಸಿದೆ. ಇದು ಇನ್ನು ಒಂದು ತಿಂಗಳು ಕಾಲ ಮುಂದುವರೆಯಲಿದ್ದು, ಆನ್‌ಲೈನ್‌ ಗ್ರಾಹಕರಿಗೆ ರಿಯಾಯಿತಿ ಧರದಲ್ಲಿ ಸ್ಮಾರ್ಟ್‌ಫೋನ್‌, ಹೆಡ್‌ಫೋನ್‌, ಸೇರಿದಂತೆ ಎಲೆಕ್ಟ್ರಾನಿಕ್ಸ್‌ ಉತ್ಫನ್ನಗಳನ್ನ ಖರೀದಿಸಬಹುದಾಗಿದೆ.

ಹೆಡ್‌ಫೋನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಇಂದಿನಿಂದ ಶುರುವಾಗಿದೆ. ಈ ಸೇಲ್‌ನಲ್ಲಿ ಸಾಕಷ್ಟು ರಿಯಾಯಿತಿಒ ಆಫರ್‌ಗಳನ್ನ ನೀಡಲಾಗಿದೆ. ಸ್ಮಾರ್ಟ್‌ಫೋನ್‌ಗಳ ಮೇಲೆ 40% ವರೆಗೆ, ಹೆಡ್‌ಫೋನ್‌ಗಳ ಮೇಲೆ ಕೂಡ ಸಾಕಷ್ಟು ರಿಯಾಯಿತಿಯನ್ನ ನೀಡಲಾಗಿದೆ. ಹಾಗಾದ್ರೆ ಈ ಭಾರಿಯ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಇಯರ್‌ಬಡ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಜಬ್ರಾ ಎಲೈಟ್ 65T

ಜಬ್ರಾ ಎಲೈಟ್ 65T

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಜಬ್ರಾ ಎಲೈಟ್ 65T ಇಯರ್‌ಬಡ್ಸ್‌ 68% ನಷ್ಟು ದೊಡ್ಡ ರಿಯಾಯಿತಿಯನ್ನು ಹೊಂದಿದೆ. ಇದರ ಮೂಲ ಬೆಲೆ 15,499 ರೂ ಆಗಿದ್ದು, ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ 4,999 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ವಾಯರ್‌ಲೆಸ್‌ ಇಯರ್‌ಬಡ್ಸ್‌ 15 ಗಂಟೆಗಳ ಬ್ಯಾಟರಿ ಬಾಳಿಕೆ, ವಾಟರ್‌ ಮತ್ತು ಧೂಳಿನ ಪ್ರತಿರೋಧಕ್ಕಾಗಿ ಐಪಿ55 ರೇಟಿಂಗ್ ಅನ್ನು ಹೊಂದಿದೆ.

ಸೋನಿ WF-1000XM3

ಸೋನಿ WF-1000XM3

ಸೋನಿ WF-1000XM3 ವಾಯರ್‌ಲೆಸ್ ಇಯರ್‌ಬಡ್‌ ಮೂಲಬೆಲೆ 19,990 ರೂ ಆಗಿದ್ದು, ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 14,990 ರೂಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದು 32 ಗಂಟೆಗಳ ಬ್ಯಾಟರಿ ಬಾಳಿಕೆ, ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌, ಪ್ಲೇಸ್‌ ಡಿಟೇಕ್ಷನ್‌ ಮತ್ತು ಅಮೆಜಾನ್ ಅಲೆಕ್ಸಾ ಬೆಂಬಲವನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್

ಸ್ಯಾಮ್‌ಸಂಗ್‌ ಸಂಸ್ಥೆಯ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಲ ಮೇಲೂ ಸಹ 13% ರಿಯಾಯಿತಿಯನ್ನ ನೀಡಲಾಗಿದೆ. ಸದ್ಯ 15,990 ರೂ ಮೂಲಬೆಲೆಯನ್ನು ಹೊಂದಿರುವ ಗ್ಯಾಲಕ್ಸಿ ಬಡ್ಸ್ ಲೈವ್ ಅನ್ನು ರಿಯಾಯಿತಿ ದರದಲ್ಲಿ 13,990 ರೂಗಳಿಗೆ ಪಡೆಯಬಹುದಾಗಿದೆ. ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌, ಎಕೆಜಿ ವಾಯ್ಸ್‌, ಸ್ಪಾಟಿಫೈ ಟಚ್ ಕಂಟ್ರೋಲ್‌, ಮತ್ತು ವಾಯರ್‌ಲೆಸ್ ಚಾರ್ಜಿಂಗ್ ಕೇಸ್‌ ಅನ್ನು ಹೊಂದಿದೆ.

ಬೋಸ್ ಸೌಂಡ್‌ಸ್ಪೋರ್ಟ್ ಫ್ರೀ

ಬೋಸ್ ಸೌಂಡ್‌ಸ್ಪೋರ್ಟ್ ಫ್ರೀ

ಬೋಸ್ ಸೌಂಡ್‌ಸ್ಪೋರ್ಟ್ ಫ್ರೀ ವಾಯರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಸಹ ಈ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 18,990 ರೂ ಆಗಿದ್ದು, ಅಮೆಜಾನ್ ಸೇಲ್‌ನಲ್ಲಿ 13,768 ರೂಗಳಿಗೆ ಖರೀದಿಸಬಹುದಾಗಿದೆ. ಇದು ಕಪ್ಪು, ಕಿತ್ತಳೆ ಮತ್ತು ನೀಲಿ / ಸಿಟ್ರಾನ್‌ನ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.

Most Read Articles
Best Mobiles in India

Read more about:
English summary
Jabra Elite 65t, Samsung Galaxy Buds Live and more wireless earbuds are available with discounts on Amazon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X