ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಪ್ರೈಮ್‌ ಸದಸ್ಯರಿಗೆ ಇಂದಿನಿಂದಲೇ ಲೈವ್‌!

|

ಬಹು ನಿರೀಕ್ಷಿತ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2022 ಈಗ ಪ್ರೈಮ್‌ ಸದಸ್ಯರಿಗೆ ಲೈವ್ ಆಗಿದೆ. ಅಮೆಜಾನ್‌ ಪ್ರೈಮ್‌ ಸದಸ್ಯರು ಇಂದಿನಿಂದಲೇ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನ ಡಿಸ್ಕೌಂಟ್‌ ಪಡೆಯುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ಅಮೆಜಾನ್‌ ತಾಣದಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಟಿವಿಗಳು, ಕಂಪ್ಯೂಟರ್ ಪೆರಿಫೆರಲ್ಸ್ ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳನ್ನು ಆಫರ್‌ನಲ್ಲಿ ಖರೀದಿಸಬಹುದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಪ್ರೈಮ್‌ ಸದಸ್ಯರಿಗೆ ಲೈವ್‌ ಆಗಿದೆ. ಪ್ರೈಮ್‌ ಅಲ್ಲದ ಸದಸ್ಯರಿಗೆ ನಾಳೆಯಿಂದ (ಸೆ.23) ಪ್ರವೇಶ ಸಿಗಲಿದೆ. ಸದ್ಯ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಅನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ M ಸರಣಿ ಮತ್ತು ಐಕ್ಯೂ ಬ್ರ್ಯಾಂಡ್‌ ಪ್ರಾಯೋಜಕತ್ವವನ್ನು ವಹಿಸಿವೆ. ಆದರಿಂದ ಈ ಬ್ರ್ಯಾಂಡ್‌ಗಳ ಪ್ರಾಡಕ್ಟ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ಗಳನ್ನು ನಿರೀಕ್ಷಿಸಬಹುದಾಗಿದೆ. ಹಾಗಾದರೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಇಂದು ಪ್ರೈಮ್‌ ಸದಸ್ಯರಿಗೆ ಏನೆಲ್ಲಾ ಆಫರ್‌ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಪ್ರೈಮ್‌ ಸದಸ್ಯರು ಇದೀಗ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಡೀಲ್‌ಗಳಿಗೆ ಪ್ರವೇಶಿಸಬಹುದಾಗಿದೆ. ಪ್ರೈಮ್‌ ಸದಸ್ಯರಾಗಿರುವ ಗ್ರಾಹಕರು ಪ್ರತಿ 6 ಗಂಟೆಗಳಿಗೊಮ್ಮೆ ಹೊಸ ಆಫರ್‌ಗಳನ್ನು ಪಡೆದುಕೊಳ್ಳುವ ಮೂಲಕ ಆರಂಬಿಕ ದಿನದ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್‌ನ ಅಂತಿಮ ದಿನಾಂಕವನ್ನು ಇನ್ನು ಬಹಿರಂಗವಾಗಿಲ್ಲವಾದರಿಂದ ಈ ತಿಂಗಳ ಅಂತ್ಯದವರೆಗೂ ನಡೆಯುವ ಸಾದ್ಯತೆಯಿದೆ.

ಏನೆಲ್ಲಾ ಆಫರ್‌ ಲಭ್ಯ?

ಏನೆಲ್ಲಾ ಆಫರ್‌ ಲಭ್ಯ?

ಇನ್ನು ಈಗಾಗಲೇ ಅಮೆಜಾನ್‌ ಬಹಿರಂಗ ಪಡಿಸಿರುವಂತೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2022ರ ಸಮಯದಲ್ಲಿ, SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು 10% ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಸೇಲ್‌ ಮುಗಿಯುವ ತನಕ ಆಯ್ದ ಪ್ರಾಡಕ್ಟ್‌ಗಳ ಮೇಲೆ ಸೀಮಿತ ಅವಧಿಯ ಲೈಟ್ನಿಂಗ್‌ ಡೀಲ್ಸ್‌ಗಳನ್ನು ಸಹ ನೀಡಲಾಗುವುದು ಎಂದು ಹೇಳಲಾಗಿದೆ.

ವಿಶೇಷ ಆಫರ್‌ ಏನಿದೆ?

ವಿಶೇಷ ಆಫರ್‌ ಏನಿದೆ?

ಇದಲ್ಲದೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಸಮಯದಲ್ಲಿ ಹೆಚ್ಚುವರಿಯಾಗಿ, ಗ್ರಾಹಕರಿಗೆ ಲೈವ್-ಓನ್ಲಿ ಡಿಸ್ಕೌಂಟ್‌ ಅನ್ನು ಕೂಡ ನೀಡಲಿದೆ. ಇದಕ್ಕಾಗಿ ಲೈವ್‌ಸ್ಟ್ರೀಮ್‌ಗಳನ್ನು ಹೋಸ್ಟ್ ಮಾಡಲು ಅಮೆಜಾನ್‌ 150 ಕ್ಕೂ ಹೆಚ್ಚು ಪ್ರಭಾವಿಗಳ ಜೊತೆಗೆ ಕೈ ಜೋಡಿಸಿದೆ. ಇನ್ನು ಇದೇ ಸಮಯದಲ್ಲಿ ನೀವು ಸ್ಮಾರ್ಟ್‌ಫೋನ್‌ಗಳು ಹಾಗೂ ಆಕ್ಸಿಸರೀಸ್‌ಗಳ ಮೇಲೆ 40% ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್‌ಗಳಿಗೆ ಏನೆಲ್ಲಾ ಡಿಸ್ಕೌಂಟ್‌ ಲಭ್ಯ?

ಸ್ಮಾರ್ಟ್‌ಫೋನ್‌ಗಳಿಗೆ ಏನೆಲ್ಲಾ ಡಿಸ್ಕೌಂಟ್‌ ಲಭ್ಯ?

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್‌, ಐಕ್ಯೂ, ಆಪಲ್‌, ರಿಯಲ್‌ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಆಫರ್‌ ಲಭ್ಯವಾಗಲಿದೆ. ಇನ್ಸಟಂಟ್‌ ಡಿಸ್ಕೌಂಟ್‌ ಜೊತೆಗೆ ನೋ ಕಾಸ್ಟ್‌ EMI ಮತ್ತು ಎಕ್ಸ್‌ಚೇಂಜ್‌ ಆಫರ್‌ ಅನ್ನು ಕೂಡ ದೊರೆಯಲಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳ ಮೇಲೆ 75% ಡಿಸ್ಕೌಂಟ್‌ ನೀಡುವುದಾಗ ಅಮೆಜಾನ್‌ ಹೇಳಿಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M33 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M33 5G

ಅಮೆಜಾನ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ 11,999 ರೂ.ಗಳಿಗೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ ಇನ್ಫಿನಿಟಿ V ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ 5nm ಎಕ್ಸಿನೋಸ್‌ ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ 32,999ರೂ. ಬದಲಿಗೆ 19,999ರೂ. ಬೆಲೆಯಲ್ಲಿ ಸೇಲ್‌ ಆಗಲಿದೆ ಎಂದು ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ 6.7-ಇಂಚಿನ ಫುಲ್‌ HD+ ಇನ್ಫಿನಿಟಿ ಒ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಅಪರ್ಚರ್ ಲೆನ್ಸ್‌ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಐಕ್ಯೂ Z6 ಪ್ರೊ 5G

ಐಕ್ಯೂ Z6 ಪ್ರೊ 5G

ಐಕ್ಯೂ Z6 ಪ್ರೊ 5G ಸ್ಮಾರ್ಟ್‌ಫೋನ್‌ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 17,990ರೂ. ಬೆಲೆಯಲ್ಲಿ ಮಾರಾಟಕ್ಕೆ ಬರಲಿದೆ. ಈ ಸ್ಮಾರ್ಟ್‌ಫೋನ್‌ 6.44 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಕೂಡ ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ಫ್ಲ್ಯಾಶ್‌ಚಾರ್ಜ್ ಬೆಂಬಲಿಸಲಿದೆ.

Best Mobiles in India

English summary
Amazon Great Indian Festival Sale 2022 is now live for Prime members

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X