ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್:5,000 ರೂ ಒಳಗೆ ಲಭ್ಯವಾಗುವ ಗ್ಯಾಜೆಟ್ಸ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಇದೇ ಆಕ್ಟೋಬರ್‌ 17 ರಂದು ಪ್ರಾರಂಭಿಸಲಿದೆ. ಅಲ್ಲದೆ ಇಂದಿನಿಂದ ತನ್ನ ಪ್ರೈಮ್ ಸದಸ್ಯರಿಗಾಗಿ ಲೈವ್‌ ಆಗಿದೆ. ಇನ್ನು ಈ ಹಬ್ಬದ ಸೀಸನ್‌ನಲ್ಲಿ ಆನ್‌ಲೈನ್‌ ಗ್ರಾಹಕರಿಗಾಗಿ ಇ-ಕಾಮರ್ಸ್ ಸೈಟ್‌ ಸ್ಮಾರ್ಟ್‌ಫೋನ್‌ಗಳು ಮತ್ತು ಗ್ಯಾಜೆಟ್‌ಗಳಲ್ಲಿ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ಅಲ್ಲದೆ ಮೊಬೈಲ್‌ಗಳು ಮತ್ತು ಪರಿಕರಗಳ ಮೇಲೆ 40% ಮತ್ತು ಎಲೆಕ್ಟ್ರಾನಿಕ್ಸ್‌ಗೆ 60% ರಿಯಾಯಿತಿ ನೀಡುತ್ತಿದೆ. ಜೊತೆಗೆ ಕೈಗೆಟುಕುವ ಗ್ಯಾಜೆಟ್‌ಗಳನ್ನು ತೆಗೆದುಕೊಳ್ಳಲು ಬಯಸುವವರಿಗೆ, ಅಮೆಜಾನ್ ಸೇಲ್‌ನಲ್ಲಿ ಲಭ್ಯವಾಗಲಿದೆ.

ಅಮೆಜಾನ್‌

ಹೌದು, ಈ ಭಾರಿಯ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸಾಕಷ್ಟು ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್‌ಗಳು, ಗ್ಯಾಜೆಟ್‌ಗಳು, ಲ್ಯಾಪ್‌ಟಾಪ್‌ಗಳು, ಸೇರಿದಂತೆ ಹಲವು ಆಕ್ಸಿಸರೀಸ್‌ಗಳನ್ನ ನೀಡುತ್ತಿದೆ. ಇನ್ನು ಈ ಸೇಲ್‌ನಲ್ಲಿ 5,000. ರೂ ಒಳಗೂ ಕೂಡ ನೀವು ಸಾಕಷ್ಟು ಪ್ರಾಡಕ್ಟ್‌ಗಳನ್ನ ಖರೀದಿಸಬಹುದಾಗಿದೆ. ಹಾಗಾದ್ರೆ ಈ ಸೇಲ್‌ನಲ್ಲಿ 5,000ರೂ ಒಳಗೆ ಲಭ್ಯವಾಗುವ ಪ್ರಾಡಕ್ಟ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೈರ್ ಟಿವಿ ಸ್ಟಿಕ್ ಶ್ರೇಣಿ

ಫೈರ್ ಟಿವಿ ಸ್ಟಿಕ್ ಶ್ರೇಣಿ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಪ್ರಯುಕ್ತ ಭಾರತದಲ್ಲಿ ಫೈರ್ ಟಿವಿ ಸ್ಟಿಕ್ ಮಾದರಿಗಳ ಬೆಲೆಯನ್ನು ಕಡಿಮೆ ಮಾಡಿದೆ. ಫೈರ್ ಟಿವಿ ಸ್ಟಿಕ್ ಲೈಟ್‌ನ ಬೆಲೆ ರೂ. 1,999 ರೂ ಆಗಿದೆ. ಆದರೆ ಅಲೆಕ್ಸಾ ವಾಯ್ಸ್ ರಿಮೋಟ್ ಹೊಂದಿರುವ ಹೊಸ ಫೈರ್ ಟಿವಿ ಸ್ಟಿಕ್ ಮಾದರಿಯ ಬೆಲೆ ರೂ. 2,499 (ಮೂಲ ಬೆಲೆ. 4,999ರೂ). ಜೊತೆಗೆ ಫೈರ್ ಟಿವಿ ಸ್ಟಿಕ್ 4K ಅನ್ನು ರಿಯಾಯಿತಿ ದರದಲ್ಲಿ 3,599ರೂ ಗೆ ಖರೀದಿಸಬಹುದಾಗಿದೆ.

ಮಿ ಸ್ಮಾರ್ಟ್ ಬ್ಯಾಂಡ್ 5

ಮಿ ಸ್ಮಾರ್ಟ್ ಬ್ಯಾಂಡ್ 5

ನೀವು ಫಿಟ್‌ನೆಸ್ ಬ್ಯಾಂಡ್ ಅನ್ನು ಹುಡುಕುತ್ತಿದ್ದರೆ, ಹೊಸದಾಗಿ ಪ್ರಾರಂಭಿಸಲಾದ ಮಿ ಸ್ಮಾರ್ಟ್ ಬ್ಯಾಂಡ್ 5 ಖರೀದಿಸಲು ಉತ್ತಮ ಆಯ್ಕೆಯಾಗಿದೆ. ಇದರ ಮೂಲ ಬೆಲೆ ರೂ. 2,999 ಆಗಿದ್ದು, ರಿಯಾಯಿತಿ ದರದಲ್ಲಿ 2,498 ರೂಗಳಿಗೆ ಲಭ್ಯವಾಗಲಿದೆ. ಜೊತೆಗೆ ಅಮೆಜಾನ್ ಪ್ರೈಮ್‌ ಸದಸ್ಯರಿಗಾಗಿ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ 5% ಕ್ಯಾಶ್‌ಬ್ಯಾಕ್ ಅನ್ನು ಸಹ ಪಟ್ಟಿ ಮಾಡಿದೆ.

ಅಮಾಜ್‌ಫಿಟ್ ಬಿಪ್ ಯು

ಅಮಾಜ್‌ಫಿಟ್ ಬಿಪ್ ಯು

ಹೊಸದಾಗಿ ಬಿಡುಗಡೆಯಾದ ಅಮಾಜ್‌ಫಿಟ್ ಬಿಪ್ ಯು ಸ್ಮಾರ್ಟ್ ವಾಚ್ ಅನ್ನು ಅಮೆಜಾನ್ ಸೇಲ್‌ನಲ್ಲಿ 3,499 ರೂಗೆ ಖರೀದಿಸಬಹುದಾಗಿದೆ. ಇದರ ಮೂಲ 5,999 ರೂ ಆಗಿದೆ. ಇದಲ್ಲದೆ ಪ್ರೈಮ್‌ ಸದಸ್ಯರಿಗೆ ನೋ ಕಾಸ್ಟ್‌ ಇಎಂಐ ಆಯ್ಕೆಗಳು ಮತ್ತು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ನಲ್ಲಿ ಲಭ್ಯವಾಗಲಿದೆ. ಇದು ಪ್ರಸ್ತುತ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ.

ಒಪ್ಪೋ ಎನ್‌ಕೋ W31TWS ಇಯರ್‌ಬಡ್ಸ್

ಒಪ್ಪೋ ಎನ್‌ಕೋ W31TWS ಇಯರ್‌ಬಡ್ಸ್

ಒಪ್ಪೋ ಎನ್‌ಕೋ W31TWS ಇಯರ್‌ಬಡ್ಸ್ ‌ಗಳನ್ನು ಅಮೆಜಾನ್‌ ಸೇಲ್‌ನಲ್ಲಿ 2,999 ರೂ ಗಳಿಗೆ ಖರೀದಿಸಬಹುದಾಗಿದೆ (ಮೂಲ ಬೆಲೆ 5,999 ರೂ).

ಹಾನರ್ ಮ್ಯಾಜಿಕ್ ವಾಚ್

ಹಾನರ್ ಮ್ಯಾಜಿಕ್ ವಾಚ್

ಹಾನರ್ ಮ್ಯಾಜಿಕ್ ವಾಚ್ ಸ್ಮಾರ್ಟ್ ವಾಚ್ ಸಾರ್ವಕಾಲಿಕ ಕಡಿಮೆ ಬೆಲೆಗೆ ಅಮೆಜಾನ್ ಸೇಲ್‌ನಲ್ಲಿ 4,999 ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 16,999 ರೂ ಆಗೊಇದೆ. ಇದು 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 11 ತಾಲೀಮು ಮೋಡ್‌ಗಳೊಂದಿಗೆ ಬರುತ್ತದೆ ಎಂದು ಹೇಳಿಕೊಂಡಿದೆ.

Most Read Articles
Best Mobiles in India

English summary
The Echo Dot (4th Gen, Black) Combo with Wipro 9W LED Smart Color Bulb is priced at only Rs. 3,299.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X