Amazon Great Indian Festival Sale: ಲ್ಯಾಪ್‌ಟಾಪ್‌ಗಳ ಮೇಲೆ ಬರೋಬ್ಬರಿ 40% ಡಿಸ್ಕೌಂಟ್!
ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಸುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಲ್ಯಾಪ್‌ಟಾಪ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಲ್ಯಾಪ್‌ಟಾಪ್‌ಗಳ ಮೇಲೆ 40% ಆಫರ್ ನೀಡಿದೆ.
ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival Sale)ನಲ್ಲಿ ಲ್ಯಾಪ್‌ಟಾಪ್‌ಗಳಿಗೆ ಬಿಗ್ ಆಫರ್ ಲಭ್ಯವಾಗ್ತಿದೆ. ಸೇಲ್‌ನ ಎರಡನೇ ದಿನವಾದ ಇಂದು ಕೂಡ ವಯ್ಆಪಕ ಶ್ರೇಣಿಯ ಡಿವೈಸ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ದೊರೆಯುತ್ತಿದೆ. ಈ ಸಮಯದಲ್ಲಿ ನೀವು ಲ್ಯಾಪ್‌ಟಾಪ್ ಖರೀದಿಸಿದರೆ 40% ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ. ಹಾಗಾದ್ರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿರುವ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3
ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3 ಲ್ಯಾಪ್‌ಟಾಪ್ ಗೇಮಿಂಗ್ ಪ್ರಿಯರಿಗೆ ಸೂಕ್ತವಾದ ಲ್ಯಾಪ್‌ಟಾಪ್ ಆಗಿದೆ. ಡಿಸ್ಕೌಂಟ್ ಬೆಲೆಯಲ್ಲಿ ಗೇಮಿಂಗ್ ಲ್ಯಾಪ್‌ಟಾಪ್ ಹುಡುಕುತ್ತಿರುವವರಿಗೆ ಅಮೆಜಾನ್ ಭಾರಿ ರಿಯಾಯಿತಿ ನೀಡಿದೆ. 75,000ರೂ ಮೂಲ ಬೆಲೆಯ ಈ ಲ್ಯಾಪ್‌ಟಾಪ್ ಇದೀಗ ಅಮೆಜಾನ್‌ನಲ್ಲಿ ಕೇವಲ 64,490ರೂ ಬೆಲೆಗೆ ಲಭ್ಯವಾಗಲಿದೆ. ಇದಲ್ಲದೆ ಎಸ್‌ಬಿಐ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದರೆ 1,500ರೂ ಹೆಚ್ಚುವರಿ ರಿಯಾಯಿತಿ ಕೂಡ ದೊರೆಯಲಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇದು AMD Ryzen 6600H ಪ್ರೊಸೆಸರ್‌ನೊಂದಿಗೆ ಬರುತ್ತದೆ.
ಹಾನರ್ ಮ್ಯಾಜಿಕ್‌ಬುಕ್ X14
ಹಾನರ್ ಮ್ಯಾಜಿಕ್‌ಬುಕ್ X14 ಲ್ಯಾಪ್‌ಟಾಪ್ ಅಮೆಜಾನ್ ಸೇಲ್‌ನಲ್ಲಿ ಬಿಗ್ ಆಫರ್ ಪಡೆದಿದೆ. 74,999ರೂ ಬೆಲೆಯ ಈ ಲ್ಯಾಪ್‌ಟಾಪ್ ಇದೀಗ ಡಿಸ್ಕೌಂಟ್‌ನಲ್ಲಿ ಕೇವಲ 41,990ರೂ. ಬೆಲೆಗೆ ದೊರೆಯಲಿದೆ. ಇದು 12 ನೇ ತಲೆಮಾರಿನ ಇಂಟೆಲ್ ಕೋರ್ i5-12450H CPU ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 60Wh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಸಿಂಗಲ್ ಚಾರ್ಜ್‌ನಲ್ಲಿ 12 ಗಂಟೆಗಳ ಪ್ಲೇಟೈಮ್ ಅನ್ನು ನೀಡಲಿದೆ ಎಂದು ಹೇಳಲಾಗುತ್ತದೆ. ಇದು TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣ ಮತ್ತು ಫ್ಲಿಕರ್ ಉಚಿತ ಪ್ರಮಾಣೀಕರಣದೊಂದಿಗೆ ಫುಲ್‌ವ್ಯೂ ಪೂರ್ಣ HD IPS ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ.
ಆಸುಸ್ ಜೆನ್‌ಬುಕ್ 14X
ಆಸುಸ್ ಜೆನ್‌ಬುಕ್ 14X ಲ್ಯಾಪ್‌ಟಾಪ್ 14 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 12ನೇ Gen Intel Core i5-12500H ಪ್ರೊಸೆಸರ್‌ನೊಂದಿಗೆ ಬರಲಿದೆ. ಈ ಲ್ಯಾಪ್‌ಟಾಪ್ ಇದು ಫಿಂಗರ್‌ಪ್ರಿಂಟ್ ರೀಡರ್ ಅನ್ನು ಹೊಂದಿದೆ. ಸಿಂಗಲ್ ಚಾರ್ಜ್‌ನಲ್ಲಿ ಎಂಟು ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇನ್ನು ಈ ಲ್ಯಾಪ್‌ಟಾಪ್ 98,990ರೂ ಬೆಲೆಯನ್ನು ಹೊಂದಿದ್ದು, ಅಮೆಜಾನ್ ಸೇಲ್‌ನಲ್ಲಿ 69,990ರೂ .ಗಳಿಗೆ ಲಭ್ಯವಾಗಲಿದೆ.
HP 15s ಲ್ಯಾಪ್‌ಟಾಪ್
HP 15s ಲ್ಯಾಪ್‌ಟಾಪ್ 11 ನೇ Gen Intel Core i5 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದರ ಮೂಲ ಬೆಲೆ 45,557ರೂ ಆಗಿದ್ದು, ಅಮೆಜಾನ್ ಸೇಲ್‌ನಲ್ಲಿ 35,990ರೂ ಬೆಲೆಗೆ ದೊರೆಯಲಿದೆ. ಹಾಗೆಯೇ 8GB DDR4 RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ ವಿಂಡೋಸ್ 11 ಹೋಮ್ ಅನ್ನು ರನ್ ಆಗಲಿದೆ. ಇದು HP ಟ್ರೂ ವಿಷನ್ 720p HD ವೆಬ್ ಕ್ಯಾಮೆರಾದೊಂದಿಗೆ ಬರಲಿದೆ.
MSI ಮಾಡರ್ನ್ 14
MSI ಮಾಡರ್ನ್ 14 ಲ್ಯಾಪ್‌ಟಾಪ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 49,990ರೂ.ಬೆಲೆಗೆ ಬರಲಿದೆ. ಇದರ ಮೂಲ ಬೆಲೆ 78,990ರೂ ಆಗಿದ್ದು, ಬರೋಬ್ಬರಿ 11,700ರೂ ರಿಯಾಯಿತಿ ಪಡೆದುಕೊಂಡಿದೆ. ಇದಲ್ಲದೆ, ಬ್ಯಾಂಕ್ ಆಧಾರಿತ ರಿಯಾಯಿತಿಗಳು ಸಹ ಇವೆ. ಈ ಲ್ಯಾಪ್‌ಟಾಪ್ 12 ನೇ ಜನ್ ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 16GB RAM ಮತ್ತು 512GB SSD ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.


Click it and Unblock the Notifications








