ಅಮೆಜಾನ್‌ನಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿಗಳ ಮೇಲೆ 51% ಡಿಸ್ಕೌಂಟ್! ಕೂಡಲೇ ಖರೀದಿಸಿ!
ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆಯೋಜಿಸಿದೆ. ಈಗಾಗಲೇ ಲೈವ್ ಆಗಿರುವ ಈ ಸೇಲ್‌ನಲ್ಲಿ ಶಾಪಿಂಗ್ ಪ್ರಿಯರು ಹಿಂದೆಂದೂ ನಿರೀಕ್ಷಿಸದ ರಿಯಾಯಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ 55 ಇಂಚಿನ ಸ್ಮಾರ್ಟ್‌ಟಿವಿಗಳ ಮೇಲೆ ಬಿಗ್ ಆಫರ್ ನೀಡಲಾಗ್ತಿದೆ.
ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈಗ ಲೈವ್ ಆಗಿದೆ. ಸ್ಮಾರ್ಟ್‌ಟಿವಿಗಳನ್ನು ಖರೀದಿಸಬೇಕೆಂದು ಕೊಂಡವರಿಗೆ ಈ ಸೇಲ್‌ನಲ್ಲಿ ಬಿಗ್ ಆಫರ್ ಲಭ್ಯವಾಗ್ತಿದೆ. ಬಿಗ್ ಡಿಸ್ಕೌಂಟ್ ಹಾಗೂ ಹೆಚ್ಚಿನ ರಿಯಾಯಿತಿ ಬಯಸುವವರಿಗೆ ಇದು ಬೆಸ್ಟ್ ಟೈಂ ಎನಿಸಿಕೊಂಡಿದೆ. ಇವುಗಳಲ್ಲಿ ಸೋನಿ, ಸ್ಯಾಮ್‌ಸಂಗ್, ಎಲ್‌ಜಿ, ಒನ್‌ಪ್ಲಸ್ ಬ್ರ್ಯಾಂಡ್‌ಗಳ ಸ್ಮಾರ್ಟ್‌ಟಿವಿಗಳು ಸೇರಿವೆ. ಸದ್ಯ ಅಮೆಜಾನ್ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳಿಗೆ ಡಿಸ್ಕೌಂಟ್ ಲಭ್ಯವಾಗ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಬ್ರಾವಿಯಾ ಗೂಗಲ್ ಟಿವಿ KD-55X74K
ಸೋನಿ ಬ್ರಾವಿಯಾ ಗೂಗಲ್ ಟಿವಿ KD-55X74K ಸ್ಮಾರ್ಟ್‌ಟಿವಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 47% ರಿಯಾಯಿತಿ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಟಿವಿ ನಿಮಗೆ ಕೇವಲ 52,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿದ್ದು, 3840x2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದು X1 4K ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಟಿವಿ 4K X ರಿಯಾಲಿಟಿ ಪ್ರೊ ಮತ್ತು ಮೋಷನ್ ಫ್ಲೋ XR100 ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಬೆಂಬಲಿಸಲಿದೆ.
LG 4K ಅಲ್ಟ್ರಾ HD ಸ್ಮಾರ್ಟ್ LED TV 55UR7500PSC
LG 4K ಅಲ್ಟ್ರಾ HD ಸ್ಮಾರ್ಟ್ LED TV 55UR7500PSC ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 44% ರಿಯಾಯಿತಿಯೊಂದಿಗೆ ಬರಲಿದೆ. ಇದರಿಂದ ಈ ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಕೇವಲ 39,990 ರೂಗಳಲ್ಲಿ ಲಭ್ಯವಿದೆ. ಇನ್ನು ಸ್ಮಾರ್ಟ್‌ಟಿವಿ ಸ್ಕ್ರೀನ್ 3840x2160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 60Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, 3 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳು, eARC, ಬ್ಲೂಟೂತ್ 5.0 ಮತ್ತು ಈಥರ್ನೆಟ್ ಸೇರಿವೆ. ಇದು 20W, 2.0-ಚಾನೆಲ್ ಸ್ಪೀಕರ್‌ಗಳು, AI ಸೌಂಡ್ ಮತ್ತು AI ಅಕೌಸ್ಟಿಕ್ ಟ್ಯೂನಿಂಗ್ ಅನ್ನು ಪ್ಯಾಕ್ ಮಾಡುತ್ತದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ ಐಸ್ಮಾರ್ಟ್ ಟಿವಿ UA55CUE60AKLXL
ಸ್ಯಾಮ್‌ಸಂಗ್ ಕ್ರಿಸ್ಟಲ್ ಐಸ್ಮಾರ್ಟ್ ಟಿವಿ UA55CUE60AKLXL ಅಮೆಜಾನ್ ಸೇಲ್‌ನಲ್ಲಿ 35% ಡಿಸ್ಕೌಂಟ್ ಪಡೆದುಕೊಂಡಿದೆ. ಆದರಿಂದ ಸ್ಮಾರ್ಟ್‌ಟಿವಿ ನಿಮಗೆ ಕೇವಲ 41,990ರೂ ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸ್ಕ್ರೀನ್ ಮಿರರಿಂಗ್, ಯುನಿವರ್ಸಲ್ ಗೈಡ್, ಮೀಡಿಯಾ ಹೋಮ್, ಟ್ಯಾಪ್ ವ್ಯೂ, ಮೊಬೈಲ್ ಕ್ಯಾಮೆರಾ ಸಪೋರ್ಟ್, AI ಸ್ಪೀಕರ್‌ಗಳನ್ನು ಒಳಗೊಂಡಿದೆ.
ಒನ್‌ಪ್ಲಸ್ Y ಸರಣಿ 55Y1S ಪ್ರೊ
ಒನ್‌ಪ್ಲಸ್ Y ಸರಣಿ 55Y1S ಪ್ರೊ 26% ರಿಯಾಯಿತಿಯನ್ನು ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಟಿವಿಯನ್ನು 36,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 60Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಟಿವಿ ಒನ್‌ಪ್ಲಸ್ ಕನೆಕ್ಟ್ ಎಕೋಸಿಸ್ಟಂ, ಗೂಗಲ್ ಅಸಿಸ್ಟೆಂಟ್, ಕ್ರೋಮ್‌ಕಾಸ್ಟ್, ಮಿರಾಕಾಸ್ಟ್ ಮತ್ತು ಆಟೋ ಲೋ ಲ್ಯಾಟೆನ್ಸಿ ಮೋಡ್ ಅನ್ನು ಒಳಗೊಂಡಿವೆ.


Click it and Unblock the Notifications








