ನಾಳೆಯಿಂದ ಮತ್ತೆ ಅಮೆಜಾನ್ 'ಗ್ರೇಟ್ ಇಂಡಿಯನ್ ಫೆಸ್ಟಿವಲ್' ಆರಂಭ!

|

ಅಮೆಜಾನ್ ಕಳೆದ ವಾರವಷ್ಟೇ ಆಯೋಜಿಸಿದ್ದ "ಗ್ರೇಟ್ ಇಂಡಿಯನ್ ಫೆಸ್ಟಿವಲ್" ಮಾರಾಟದ ಸಮಯವನ್ನು ಮತ್ತಷ್ಟು ವಿಸ್ತರಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 13 ರಿಂದ ಅಕ್ಟೋಬರ್ 17 ರವರೆಗೆ ಅಮೆಜಾನಿನ ಮತ್ತೊಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ತೆರೆದುಕೊಳ್ಳುತ್ತಿದ್ದು, ಈ ಸೇಲ್ ಅಕ್ಟೋಬರ್ 12 ರಿಂದ ಮಧ್ಯರಾತ್ರಿ ಪ್ರೈಮ್ ಸದಸ್ಯರಿಗೆ ಮೊದಲು ಖರೀದಿಸಲು ಅವಕಾಶವನ್ನು ಕಲ್ಪಿಸಿದೆ. ಇನ್ನು ಬಾರಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್‌ ಬಳಕೆದಾರರಿಗೆ 10% ತ್ವರಿತ ರಿಯಾಯಿತಿಯನ್ನು ಅಮೆಜಾನ್ ಒದಗಿಸುತ್ತಿದೆ.

ಅಮೆಜಾನ್‌ನ ಕೊಡುಗೆ

ಅಮೆಜಾನ್‌ನ ಕೊಡುಗೆಗಳಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳ ಮೇಲೆ ಬೋನಸ್ ಕೊಡುಗೆಯೊಂದಿಗೆ 10% ತ್ವರಿತ ರಿಯಾಯಿತಿ, ಇಎಂಐ ವಹಿವಾಟುಗಳು, ವಿನಿಮಯ ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳು, ಡಬಲ್ ಡೇಟಾ ಕೊಡುಗೆಗಳು ಮತ್ತು ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳು ಸೇರಿದೆ. ಇಷ್ಟು ಮಾತ್ರವಲ್ಲದೇ, ಕೆಲವು ಡೆಬಿಟ್ ಕಾರ್ಡ್‌ಗಳ ಮೇಲೆ 1 ಲಕ್ಷ ರೂ.ಗಳ ವರೆಗೆ ಸಾಲವನ್ನು ನೀಡಲಾಗುತ್ತಿದೆ. ಇನ್ನುಳಿದಂತೆ ಬಜಾಜ್ ಫಿನ್‌ಸರ್ವ್ ಕಾರ್ಡ್ ಬಳಸುವಾಗ 100 ಆಫರ್ ಮತ್ತು ವಿಮಾನ ಕಾಯ್ದಿರಿಸುವಾಗ 250 ಕ್ಯಾಶ್‌ಬ್ಯಾಕ್ ಸಿಗಲಿದೆ.

60% ವರೆಗೆ ರಿಯಾಯಿತಿ

ಕೆಲವು ಟಿವಿಗಳು ಮತ್ತು ಉಪಕರಣಗಳಲ್ಲಿ ಬಳಕೆದಾರರು 60% ವರೆಗೆ ರಿಯಾಯಿತಿ ಪಡೆಯುತ್ತಾರೆ ಎಂದು ಅಮೆಜಾನ್ ತಿಳಿಸಿದೆ. ನೀವು ಒನ್‌ಪ್ಲಸ್ (55) 4 ಕೆ ಕ್ಯೂಎಲ್‌ಇಡಿ ಟಿವಿಯನ್ನು 69,899.ರೂ.ಗೆ ಪಡೆಯಬಹುದಾಗಿದ್ದು, ರೆಫ್ರಿಜರೇಟರ್‌ಗಳು, ವಾಷಿಂಗ್ ಮಷಿನ್ ಮತ್ತು ಮನೆಉ ಇತರೆ ಉತ್ಪನ್ನಗಳು ರಿಯಾಯಿತಿ ದರ ಆಯ್ಕೆಗಳಲ್ಲಿ ಲಭ್ಯವಿದೆ. ಕಡಿಮೆ ಬೆಲೆ ಆಯ್ಕೆಗಳಲ್ಲಿ ನೀವು 30,000 ಕ್ಕಿಂತ ಹೆಚ್ಚು ದೈನಂದಿನ ಅಗತ್ಯಗಳನ್ನು ಹೊಂದಬಹುದು. ಫ್ಯಾಷನ್ ಉತ್ಪನ್ನಗಳಿಗೆ ಬಳಕೆದಾರರು 90% ರಿಯಾಯಿತಿ ಪಡೆಯುತ್ತಾರೆ ಎಂದು ಅಮೆಜಾನ್ ಹೇಳಿಕೊಂಡಿದೆ.

ಗೇಮಿಂಗ್ ಮತ್ತು ಆಟಿಕೆ

ಗೇಮಿಂಗ್ ಮತ್ತು ಆಟಿಕೆಗಳನ್ನು 70% ವರೆಗೆ ರಿಯಾಯಿತಿ, ಅಮೆಜಾನ್ ಎಕೋ ಗ್ಯಾಜೆಟ್‌ಗಳಲ್ಲಿ 60% ವರೆಗೆ ರಿಯಾಯಿತಿ ನೀಡುತ್ತಿರುವುದಾಗಿ ಅಮೆಜಾನ್ ತಿಳಿಸಿದೆ. ಹಲವಾರು ಅಮೆಜಾನ್ ಎಕೋ ಗ್ಯಾಜೆಟ್‌ಗಳಲ್ಲಿ ಬಳಕೆದಾರರು 60% ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ನೀವು ಫೈರ್ ಟಿವಿ ಸ್ಟಿಕ್ ಅನ್ನು ಅದರ ಕಡಿಮೆ ಬೆಲೆಯ ಆಯ್ಕೆಯಲ್ಲಿ ಮತ್ತು ವಿಶೇಷ ಬೆಲೆ ಅಂಕಿ ಅಂಶದಲ್ಲಿ ವಿಪ್ರೋ ಸ್ಮಾರ್ಟ್ ಬಲ್ಬ್ ಜೊತೆಗೆ ಎಕೋ ಡಾಟ್ ಅನ್ನು ಹೊಂದಬಹುದು. ಕೆಲವು ಅಮೆಜಾನ್ ಬ್ರಾಂಡ್‌ಗಳಲ್ಲಿ 80% ವರೆಗೂ ರಿಯಾಯಿತಿ ಪಡೆಯುವುದನ್ನು ಅಮೆಜಾನ್ ಖಚಿತಪಡಿಸಿದೆ.

Best Mobiles in India

English summary
Amazon has extended its sale called the "Great Indian Festival" further more. As per the new schedule, the scheme will start from October 13 which will exist till October 17, 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X