Home
ಸುದ್ದಿಜಾಲ

Amazon ಗ್ರೇಟ್ ಇಂಡಿಯನ್ ಸೇಲ್ ಗೆ ಕ್ಷಣಗಣನೆ

By Gizbot Bureau

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿದೆ. ಭರ್ಜರಿ ಆಫರ್ ಗಳ ಸುರಿಮಳೆಯೇ ಹರಿಯಲಿದೆ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದಕ್ಕೆ ಅಮೇಜಾನ್ ನಲ್ಲಿ ಅನೇಕ ಆಫರ್ ಗಳಿದೆ. ಹಬ್ಬದ ಸಮಯಕ್ಕಾಗಿ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಗಳು ಮತ್ತಷ್ಟು ಅಗ್ಗವಾಗುತ್ತಿದ್ದು ಗ್ರಾಹಕರಿಗೆ ಸ್ಮಾರ್ಟ್ ಫೋನ್ ಖರೀದಿಗೆ ಮತ್ತಷ್ಟು ಅವಕಾಶಗಳು ತೆರೆದುಕೊಳ್ಳುತ್ತಿದೆ.

5ಜಿ ಸ್ಮಾರ್ಟ್ ಫೋನ್

ನಾವಿಲ್ಲಿ ವಿವಿಧ ರೇಂಜಿನ ಸ್ಮಾರ್ಟ್ ಫೋನ್ ಗಳನ್ನು ಆಯ್ಕೆ ಮಾಡಿದ್ದು 2020 ರ ಈ ಹಬ್ಬದ ಸೀಸನ್ ನಲ್ಲಿ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ನೀವು ಖರೀದಿಸಬಹುದಾದ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ಕಳೆದ ಕೆಲವೇ ದಿನಗಳ ಮುಂಚೆ 5ಜಿ ಸ್ಮಾರ್ಟ್ ಫೋನ್ ಗಳಿಗೆ 50,000 ರುಪಾಯಿ ವ್ಯಯಿಸಬೇಕಿತ್ತು. ಆದರೆ ಇದೀಗ 5ಜಿ ಸ್ಮಾರ್ಟ್ ಫೋನ್ ಗಳ ಬೆಲೆ ಅದೆಷ್ಟು ಇಳಿಕೆಯಾಗಿದೆ ಎಂದರೆ ಕೇವಲ 27,999 ರುಪಾಯಿ ಬೆಲೆಗೆ 5ಜಿ ಸ್ಮಾರ್ಟ್ ಫೋನ್ ಗಳು ನಿಮ್ಮ ಕೈಸೇರುತ್ತವೆ.

ದೊಡ್ಡ ಬ್ಯಾಟರಿ ಅಂದರೆ 6000 mAh ಮತ್ತು ಇತ್ಯಾದಿ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 8,490 ರುಪಾಯಿಗಳು

ದೊಡ್ಡ ಬ್ಯಾಟರಿ ಅಂದರೆ 6000 mAh ಮತ್ತು ಇತ್ಯಾದಿ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 8,490 ರುಪಾಯಿಗಳು

ಒಮ್ಮೆ ಚಾರ್ಜ್ ಮಾಡಿದರೆ ಒಂದು ಅಥವಾ ಎರಡು ದಿನ ಪೂರ್ತಿ ಬಳಸಲು ಯೋಗ್ಯವಾಗಿರುವ ಫೋನ್ ಖರೀದಿಸಬೇಕಾ? ಹಾಗಾದ್ರೆ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಇದು ನಿಮ್ಮ ಕೈಸೇರುತ್ತದೆ. ಹೌದು 6,000 mAh ವರೆಗಿನ ಬ್ಯಾಟರಿ ಇರುವ ಫೋನ್ ಗಳು ಕೇವಲ ಆರಂಭಿಕ ಬೆಲೆ 8,490 ರುಪಾಯಿಯಿಂದ ಖರೀದಿಸುವುದಕ್ಕೆ ಈ ಸೇಲ್ ನಲ್ಲಿ ಸಿಗುತ್ತದೆ.

ಅನ್ಮೋಲ್ಡ್ ಡಿಸ್ಪ್ಲೇ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 13,999 ರುಪಾಯಿಗಳು

ಅನ್ಮೋಲ್ಡ್ ಡಿಸ್ಪ್ಲೇ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 13,999 ರುಪಾಯಿಗಳು

ಫೋನ್ ನಲ್ಲೇ ಮೂವಿ ನೋಡುವುದು ಎಂದರೆ ನಿಮಗೆ ಇಷ್ಟವೇ? ಹಾಗಾದ್ರೆ ನೀವು AMOLED ಡಿಸ್ಪ್ಲೇ ಇರುವ ಸ್ಮಾರ್ಟ್ ಫೋನ್ ಖರೀದಿಸುವುದು ಸೂಕ್ತ. ಇಂತಹ ಸ್ಮಾರ್ಟ್ ಫೋನ್ ಗಳು ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಕೇವಲ 13,999 ರುಪಾಯಿ ಬೆಲೆಗೆ ಕೈಗೆಟುಕುತ್ತದೆ.

ಕ್ವಾಡ್ ಕ್ಯಾಮರಾ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 9,999 ರುಪಾಯಿಗಳು

ಕ್ವಾಡ್ ಕ್ಯಾಮರಾ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 9,999 ರುಪಾಯಿಗಳು

ಒಂದು ವೇಳೆ ನೀವು ಮಲ್ಟಿ ಕ್ಯಾಮರಾ ಸೆಟ್ ಅಪ್ ಇರುವ ಫೋನ್ ನ್ನು ಇಷ್ಟ ಪಡುವವರಾಗಿದ್ದರೆ ಅಂತಹ ಡಿವೈಸ್ ಖರೀದಿಗೆ ಖಂಡಿತ ಇದುವೇ ಸರಿಯಾದ ಸಮಯ. ಇಂತಹ ಸ್ಮಾರ್ಟ್ ಫೋನ್ ಗಳು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2020 ಯಲ್ಲಿ ಕೇವಲ 9,999 ರುಪಾಯಿ ಬೆಲೆಗೆ ಸಿಗುತ್ತದೆ.

ನೂತನ ಪ್ರೊಸೆಸರ್ 720G ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ

ನೂತನ ಪ್ರೊಸೆಸರ್ 720G ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ

ಸ್ನ್ಯಾಪ್ ಡ್ರ್ಯಾಗನ್ 720G ಸದ್ಯ ಇರುವ 4ಜಿ ಪ್ರೊಸೆಸರ್ ಇರುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು. ಅಮೇಜಾನ್ ಈ ಸ್ಮಾರ್ಟ್ ಫೋನ್ ಗಳಿಗೂ ರಿಯಾಯಿತಿ ನೀಡುತ್ತಿದ್ದು ಭರ್ಜರಿ ರಿಯಾಯಿತಿ ಬೆಲೆಯಲ್ಲಿ ನೀವು ಈ ಡಿವೈಸ್ ಗಳನ್ನು ಖರೀದಿಸುವ ಸದವಕಾಶ ಲಭ್ಯವಿದೆ.

ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಸ್ಮಾರ್ಟ್ ಫೋನ್ 7,499 ರುಪಾಯಿ ಬೆಲೆಗೆ ಸಿಗುತ್ತದೆ

ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಸ್ಮಾರ್ಟ್ ಫೋನ್ 7,499 ರುಪಾಯಿ ಬೆಲೆಗೆ ಸಿಗುತ್ತದೆ

ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್ ಇರುವ ಕೈಗೆಟುಕುವ ಬೆಲೆಯ ಡಿವೈಸೈ ಗಳು ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೀಸನ್ ನಲ್ಲಿ ಆರಂಭಿಕ ಬೆಲೆ ಕೇವಲ 7,499 ರುಪಾಯಿಗೆ ಸಿಗುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಅಲೆಕ್ಸಾ ಬಿಲ್ಟ್ ಇನ್ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 13,999 ರುಪಾಯಿಗಳು

ಅಲೆಕ್ಸಾ ಬಿಲ್ಟ್ ಇನ್ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 13,999 ರುಪಾಯಿಗಳು

ಅಲೆಕ್ಸಾ ಇದೀಗ ಎಲ್ಲಾ ಕಡೆಗಳಲ್ಲೂ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ಗಳು ಇದೀಗ 13,999 ರುಪಾಯಿ ಬೆಲೆಗೆ ಸಿಗುತ್ತದೆ. ಬಿಲ್ಟ್ ಇನ್ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಇರುವ ಡಿವೈಸ್ ಗಳು ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಕಡಿಮೆ ಬೆಲೆಗೆ ಸಿಗಲಿದೆ.

ಫ್ಲ್ಯಾಗ್ ಶಿಪ್ ಕರ್ವ್ಡ್ ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 41,999 ರುಪಾಯಿಗಳು

ಫ್ಲ್ಯಾಗ್ ಶಿಪ್ ಕರ್ವ್ಡ್ ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ 41,999 ರುಪಾಯಿಗಳು

ಸ್ಮಾರ್ಟ್ ಫೋನ್ ಗಳ ಬಗ್ಗೆ ಕ್ರೇಝ್ ಇರುವವರು ನೀವಾಗಿದ್ದರೆ ಖಂಡಿತ 2020 ರ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಗಾಗಿ ಕಾಯಲೇಬೇಕು. ಈ ಸೇಲ್ ನಲ್ಲಿ ಫ್ಲ್ಯಾಗ್ ಶಿಪ್ ಕರ್ವ್ಡ್ಸ್ ಸ್ಮಾರ್ಟ್ ಫೋನ್ ಗಳ ಆರಂಭಿಕ ಬೆಲೆ 41,999 ರುಪಾಯಿಗಳಾಗಿದ್ದು ನಿಮಗೆ ಉತ್ತಮ ಆಫರ್ ನಲ್ಲಿ ಸಿಗುತ್ತದೆ. ಖರೀದಿಗೆ ಇದುವೇ ಸರಿಯಾದ ಸಮಯ.

Best Mobiles in India

English summary
Amazon Great Indian Festival is kickstarting in a few days to offer products at a discounted pricing during this festival season. Smartphones are usually affordable on e-commerce sites like Amazon, whereas this festival season will make then even more affordable.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+