ಅಮೆಜಾನ್ ಸೇಲ್‌ನಲ್ಲಿ ಸ್ಮಾರ್ಟ್‌ವಾಚ್‌ಗಳ ಮೇಲೆ 80% ಡಿಸ್ಕೌಂಟ್! ಇದಕ್ಕಿಂತ ಬೆಸ್ಟ್ ಆಫರ್ ಬೇಕಾ?
ಸ್ಮಾರ್ಟ್ ಡಿವೈಸ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬೇಕೆಂದುಕೊಂಡವರಿಗೆ ಇದಕ್ಕಿಂತ ಬೆಸ್ಟ್ ಟೈಂ ಇನ್ನೊಂದಿಲ್ಲ. ಈಗಾಗಲೇ ಜನಪ್ರಿಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಪ್ಲಾರ್ಟ್‌ಪಾರ್ಮ್‌ಗಳು ವಿಶೇಷ ರಿಯಾಯಿತಿ ಸೇಲ್‌ಗಳನ್ನು ಆಯೋಜಿಸಿವೆ. ಅದರಲ್ಲೂ ಅಮೆಜಾನ್ ಸೇಲ್‌ನಲ್ಲಿ ಕಂಡುಕೇಳರಿಯದ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ.
ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈಗಾಗಲೇ ಲೈವ್ ಆಗಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ಹಲವು ಆಕರ್ಷಕ ಗ್ಯಾಜೆಟ್ಸ್‌ಗಳ ಮೇಲೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಜೊತೆಗೆ ಸ್ಮಾರ್ಟ್‌ವಾಚ್‌ಗಳ ಮೇಲೆ 80% ವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಹಾಗಾದ್ರೆ ಅಮೆಜಾನ್ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ವಾಚ್‌ಗಳು ಡಿಸ್ಕೌಂಟ್ ಪಡೆದುಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್ ನಾಯ್ಸ್ ಹ್ಯಾಲೊ ಪ್ಲಸ್ ಎಲೈಟ್ ಆವೃತ್ತಿ
ನಾಯ್ಸ್ ನಾಯ್ಸ್ ಹ್ಯಾಲೊ ಪ್ಲಸ್ ಎಲೈಟ್ ಆವೃತ್ತಿಯ ಸ್ಮಾರ್ಟ್‌ವಾಚ್ ಮೇಲೆ ಅಮೆಜಾನ್ 63% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಆದರಿಂದ ಈ ಸ್ಮಾರ್ಟ್‌ವಾಚ್ 8,999ರೂ ಬದಲಿಗೆ ಕೇವಲ 3,299 ರೂ.ಬೆಲೆಯಲ್ಲಿ ಲಭ್ಯವಿದೆ. ಇನ್ನು ಸ್ಮಾರ್ಟ್‌ವಾಚ್ 1.46 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 7 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.
ಬೋಟ್ ಅಲ್ಟಿಮಾ ಕ್ರೋನೋಸ್
ಬೋಟ್ ಅಲ್ಟಿಮಾ ಕ್ರೋನೋಸ್ ಸ್ಮಾರ್ಟ್‌ವಾಚ್ ಅಮೆಜಾನ್‌ನಲ್ಲಿ 76% ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರಿಂದ 9,499ರೂ ಬದಲಿಗೆ 2,299 ರೂ ಗಳಲ್ಲಿ ಲಭ್ಯವಿದೆ. ಇನ್ನು
ಈ ಸ್ಮಾರ್ಟ್‌ವಾಚ್ DIY ವಾಚ್ ಫೇಸ್ ಸ್ಟುಡಿಯೊದೊಂದಿಗೆ ಬರಲಿದೆ. ಇದು 1.96 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಲ್‌ವೇಸ್ ಆನ್ ಡಿಸ್‌ಪ್ಲೇಯನ್ನು ಹೊಂದಿದ್ದು, ವೇಕ್ ಗೆಸ್ಚರ್ ಅನ್ನು ಒಳಗೊಂಡಿದೆ. ಇದಲ್ಲದೆ ನಿಮ್ಮ ವರ್ಕೌಟ್‌ಗಳಿಂದಾಗಿ ಬೋಟ್ ಕ್ರೆಸ್ಟ್ ಅಪ್ಲಿಕೇಶನ್‌ನಲ್ಲಿ ರಿಡೀಮ್ ಮಾಡಬಹುದಾದ ವೋಚರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ರೆಡ್ಮಿ ವಾಚ್ 3 ಆಕ್ಟಿವ್
ರೆಡ್ಮಿ ವಾಚ್ 3 ಆಕ್ಟಿವ್ ಅಮೆಜಾನ್‌ನಲ್ಲಿ 57% ರಿಯಾಯಿತಿಯಲ್ಲಿ ಲಭ್ಯವಿದೆ. ಆದರಿಂದ ಇದನ್ನು ನೀವು ಕೇವಲ 2,599 ರೂಗಳಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್ 1.83 ಇಂಚಿನ ಬಿಗ್ ಡಿಸ್‌ಪ್ಲೇಯನ್ನು ಹೊಂದಿದ್ದು, 450 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್‌ನಲ್ಲಿ ಬರಲಿದೆ. ಇದು ಬ್ಲೂಟೂತ್ ಕಾಲಿಂಗ್ ಅನ್ನು ಫೀಚರ್ಸ್ ಅನ್ನು ಒಳಗೊಂಡಿದೆ. ನಿಮ್ಮ ತುರ್ತು ಸಂಪರ್ಕ ಸಂಖ್ಯೆಗೆ ಕರೆ ಮಾಡಲು ಸೈಡ್ ಬಟನ್ ಅನ್ನು ಮೂರು ಬಾರಿ ಒತ್ತಿರಿ.
ಅಮಾಜ್‌ಫಿಟ್ ಪಾಪ್3S
ಅಮಾಜ್‌ಫಿಟ್ ಪಾಪ್3S ಸ್ಮಾರ್ಟ್‌ವಾಚ್ ಅಮೆಜಾನ್‌ನಲ್ಲಿ 43% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ವಾಚ್ 6,999 ರೂ ಬರಲಿದೆ ಕೇವಲ 3,999 ರೂಗಳಲ್ಲಿ ಲಭ್ಯವಿದೆ. ಇನ್ನು ಸ್ಮಾರ್ಟ್‌ವಾಚ್ 1.96 ಇಂಚಿನ ಹೆಚ್‌ಡಿ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 304 ಸ್ಟೇನ್‌ಲೆಸ್ ಸ್ಟೀಲ್ ಸ್ಟಾರ್ಪ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ ಕ್ಲಾಸಿಕ್ ಸ್ಕ್ವೇರ್ ವಿನ್ಯಾಸ ಮತ್ತು 304 ಸ್ಟೇನ್‌ಲೆಸ್ ಸ್ಟೀಲ್ ಅನ್ನು ಅಳವಡಿಸಿಕೊಂಡಿದೆ.
ಫಾಸ್ಟ್ರ್ಯಾಕ್ ಲಿಮಿಟ್‌ಲೆಸ್ FS1+
ಫಾಸ್ಟ್ರ್ಯಾಕ್ ಲಿಮಿಟ್‌ಲೆಸ್ FS1+ ಸ್ಮಾರ್ಟ್‌ವಾಚ್ 49% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಕಾರಣಕ್ಕಾಗಿ 3,076 ರೂ. ಬೆಲೆಗೆ ಖರೀದಿಸಬಹುದಾಗಿದೆ. ಇದು 2.01 ಅಲ್ಟ್ರಾವಿಯು ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 950 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಇದಲ್ಲದೆ ಸ್ಮಾರ್ಟ್‌ವಾಚ್ SingleSync BT ಕಾಲ್ ಅನ್ನು ಬೆಂಬಲಿಸಲಿದೆ. ಇದು 10 ನಿಮಿಷಗಳ ಚಾರ್ಜ್‌ನೊಂದಿಗೆ 1 ದಿನದ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್ ಸುಧಾರಿತ 110+ ಸ್ಪೋರ್ಟ್ಸ್ ಮೋಡ್‌ಗಳು, 200+ ವಾಚ್‌ಫೇಸ್‌ಗಳನ್ನು ಸಹ ಹೊಂದಿದೆ.


Click it and Unblock the Notifications








