ಮತ್ತೇ ಬರ್ತಿದೆ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್..! ಜೇಬು ತುಂಬಾ ಹಣ ಉಳಿಸಲು ರೆಡಿಯಾಗಿ..!
ನಾಲ್ಕು ದಿನಗಳ ಹಿಂದಷ್ಟೇ ಒಂದು ಸುತ್ತಿನ ಹಬ್ಬದ ಮಾರಾಟವನ್ನು ಮುಗಿಸಿ ಗ್ರಾಹಕರಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಮತ್ತೇ ಬರುತ್ತಿದೆ. ಭಾರತದಲ್ಲಿ ಹಬ್ಬದ ಸೀಸನ್ ಪ್ರಾರಂಭವಾಗಿದ್ದು, ದೀಪಾವಳಿಯಂತಹ ಪ್ರಮುಖ ಹಬ್ಬಕ್ಕೆ ಅಮೆಜಾನ್ ಮತ್ತೊಂದು ಮಾರಾಟವನ್ನು ಇಟ್ಟುಕೊಂಡಿದೆ.

ಹೌದು, ಇದೇ ಅಂದರೆ ಅಕ್ಟೋಬರ್ 24 ರಿಂದ 28ರವರೆಗೆ ಮತ್ತೆ ಭರ್ಜರಿ ಆಫರ್‌ಗಳನ್ನು ಹೊತ್ತುಕೊಂಡು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ನಿಮ್ಮ ಮುಂದೆ ಬರಲಿದೆ. ಮೊನ್ನೆ ನಡೆದ 5 ದಿನಗಳ ಸೇಲ್ ಮಿಸ್ ಮಾಡಿಕೊಂಡಿದ್ದರೆ ಇದನ್ನು ನೀವು ಮಿಸ್ ಮಾಡಿಕೊಳ್ಳಬೇಡಿ. ಅನೇಕ ವರ್ಗಗಳಲ್ಲಿನ ಉತ್ಪನ್ನಗಳಿಗೆ ಆಫರ್ ಲಭ್ಯವಿದ್ದು, ಇದರಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಪೀಕರ್ ಮತ್ತು ಕ್ಯಾಮೆರಾಗಳ ಮೇಲೆ ಮುಂಬರುವ ಸೇಲ್‌ನಲ್ಲಿ ಭಾರೀ ಆಫರ್ ದೊರೆಯಲಿದೆ. ಆಗಿದ್ದರೆ, ಮುಂದಿನ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಏನೆಲ್ಲಾ ವಿಶೇಷತೆ ಹೊಂದಿರುತ್ತೆ ಎಂಬುದನ್ನು ಮುಂದೆ ನೋಡಿ.

ನೋ ಕಾಸ್ಟ್ EMI
ತನ್ನ ಗ್ರೇಟ್ ಇಂಡಿಯನ್ ಸೇಲ್‌ನ್ನು ಇನ್ನಷ್ಟು ಆಕರ್ಷಕವಾಗಿಸಲು ಗ್ರಾಹಕರಿಗೆ ವಿವಿಧ ರೀತಿಯ ನೋಕಾಸ್ಟ್ EMI ಆಯ್ಕೆಯನ್ನು ಅಮೆಜಾನ್ ನೀಡುತ್ತಿದೆ. ಪ್ರಮುಖ ಕ್ರೆಡಿಟ್ ಕಾರ್ಡ್‌ಗಳಲ್ಲಿ ರೂ. 3000ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುವನ್ನು ಖರೀದಿಸಿದರೆ, ಡೆಬಿಟ್ ಕಾರ್ಡ್‌ಗಳ ಮೂಲಕ ರೂ. 8000ಕ್ಕಿಂತ ಹೆಚ್ಚಿನ ಮೌಲ್ಯದ ವಸ್ತು ಖರೀದಿಗೆ ಮತ್ತು ಬಜಾಜ್ ಫಿನ್‌ಸರ್ವ್ EMI ಕಾರ್ಡ್ ಬಳಕೆದಾರರಿಗೆ ನೋ ಕಾಸ್ಟ್ EMI ಸೌಲಭ್ಯವನ್ನು ಅಮೆಜಾನ್ ನೀಡಲಿದೆ.

ಆಕರ್ಷಕ ಕ್ಯಾಶ್‌ಬ್ಯಾಕ್
ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು ಹಾಗೂ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದ್ದು, ಹೆಚ್ಚಿನ ಕ್ಯಾಶ್‌ಬ್ಯಾಕ್ ಆಫರ್‌ಗಳು ಘೋಷಣೆಯಾಗುವ ಸಾಧ್ಯತೆ ಇದೆ.

ಅಮೆಜಾನ್ ಪೇ ಆಫರ್
ಇನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಸಮಯದಲ್ಲಿ ಅಮೆಜಾನ್ ಪೇಗೆ ನೀವು ರೂ. 5000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಲೋಡ್ ಮಾಡಿದರೆ ಹೆಚ್ಚುವರಿಯಾಗಿ ರೂ. 250 ಪೇ ಖಾತೆಗೆ ಜಮಾ ಆಗುತ್ತದೆ. ಅದಲ್ಲದೇ ಪ್ರೈಮ್ ವಿಡಿಯೋ ಮತ್ತು ಪ್ರೈಮ್ ಮ್ಯೂಸಿಕ್ ಗ್ರಾಹಕರಿಗೆ ಹೆಚ್ಚಿನ ಆಫರ್ ಕೂಡ ಲಭ್ಯವಾಗಲಿದೆ.

ರೂ. 5 ಲಕ್ಷ ಗೆಲ್ಲುವ ಅವಕಾಶ
ಗ್ರೇಟ್ ಇಂಡಿಯನ್ ಸೇಲ್ ಸಮಯದಲ್ಲಿ ಗ್ರಾಹಕರು ರೂ. 5 ಲಕ್ಷ ಗೆಲ್ಲುವ ಅವಕಾಶ ಕೂಡ ಹೊಂದಿದ್ದಾರೆ. ಅಮೆಜಾನ್ ಆಪ್ ಜಾಕ್‌ಪಾಟ್ ಮೂಲಕ ಗ್ರಾಹಕರು ರೂ. 5 ಲಕ್ಷ ಗೆಲ್ಲಬಹುದಾಗಿದೆ. ಅದಲ್ಲದೇ ಸ್ವಿಗ್ಗಿ, ಮೇಕ್ ಮೈ ಟ್ರಿಪ್, ಫ್ರೆಶ್‌ಮೆನು ಮತ್ತು ಇಜಿಡಿನ್ನರ್‌ನಂತಹ ಪಾಲುದಾರ ವ್ಯಾಪಾರಿಗಳತ್ತಿರ ರೂ. 2,000 ಮೌಲ್ಯದ ವ್ಯಾಫಾರ ಮಾಡಿಯೂ ಅಮೆಜಾನ್ ಪೇ ಆಫರ್‌ಗಳನ್ನು ಗ್ರಾಹಕರು ಅನ್‌ಲಾಕ್ ಮಾಡಬಹುದಾಗಿದೆ.

ರೆಡ್‌ಮಿ ಫ್ಲಾಶ್‌ಸೇಲ್
ಗ್ರೇಟ್ ಇಂಡಿಯನ್ ಸೇಲ್ ನಡೆಯುವ ಪ್ರತಿದಿನ ರೆಡ್‌ಮಿ 6A ಸ್ಮಾರ್ಟ್‌ಫೋನ್ ಮಧ್ಯಾಹ್ನ 12 ಗಂಟೆಗೆ ಫ್ಲಾಶ್ ಸೇಲ್ ಮೂಲಕ ಮಾರಾಟವಾಗಲಿದೆ. ಅದದಲ್ಲದೇ ಅಮೆಜಾನ್ Fire TV Stick ಮತ್ತು Echo ಉತ್ಪನ್ನಗಳು ಭಾರೀ ರಿಯಾಯಿತಿಯೊಂದಿಗೆ ಮಾರಾಟವಾಗುತ್ತವೆ.

ಮತ್ತೇನು ಆಫರ್
ಅಲೆಕ್ಸಾ ಹೊಂದಿದ ಡಿವೈಸ್‌ಗಳು ಶೇ.70ರಷ್ಟು ರಿಯಾಯಿತಿಯಲ್ಲಿ ಮಾರಾಟವಾಗುತ್ತವೆ. ಕಿಂಡಲ್ ಇಬುಕ್‌ಗಳು ರೂ.19ರಿಂದ ಪ್ರಾರಂಭವಾಗುತ್ತವೆ. ಕೇವಲ ರೂ. 1,499ಕ್ಕೆ ಕಿಂಡಲ್ ಅನ್‌ಲಿಮಿಟೆಡ್‌ಗೆ ಸೈನ್‌ಅಪ್ ಆಗಬಹುದಾಗಿದೆ.

ಬಿಗ್ ಡೀಲ್‌ಗಳು ಇರುವುದು ಪಕ್ಕಾ
ಅಮೆಜಾನ್ ಇಂಡಿಯಾದ ಕ್ಯಾಟಗರಿ ನಿರ್ವಹಣೆಯ ಉಪಾಧ್ಯಕ್ಷ ಮನೀಷ್ ತಿವಾರಿ ಹೇಳುವಂತೆ ಮುಂದಿನ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಬಿಗ್ ಡೀಲ್‌ಗಳು ಇದ್ದೇ ಇರುತ್ತವೆ. ಸ್ಮಾರ್ಟ್‌ಫೋನ್, ಟಿವಿ, ಫ್ಯಾಷನ್, ಗೃಹಪಯೋಗಿ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಗ್ರಾಹಕರಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತವೆ ಎಂದು ತಿವಾರಿ ಹೇಳಿದ್ದಾರೆ.

ಫ್ಲಿಪ್‌ಕಾರ್ಟ್‌ನಿಂದ ಧಮಾಕಾ ಸೇಲ್ ಸಾಧ್ಯತೆ
ಅಮೆಜಾನ್‌ನ ಗ್ರೇಟ್ ಇಂಡಿಯನ್ ಸೇಲ್‌ಗೆ ಎದುರಾಗಿ ಫ್ಲಿಪ್‌ಕಾರ್ಟ್ ಧಮಾಕಾ ಸೇಲ್ ಆಯೋಜಿಸುವ ಸಾಧ್ಯತೆ ನಿಚ್ಚಳವಾಗಿ ಕಾಣುತ್ತಿದೆ. ಇತ್ತೀಚೆಗೆ ತಾನೇ ಎರಡು ಇಕಾಮರ್ಸ್ ಕಂಪನಿಗಳು ಒಂದೇ ಬಾರಿಗೆ ಹಬ್ಬದ ಸೇಲ್ ಇಟ್ಟಿರುವುದು ಎಲ್ಲರಿಗೂ ಗೊತ್ತಿದೆ.


Click it and Unblock the Notifications








