ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಈ ಫೋನ್‌ಗಳಿಗೆ ವಿಶೇಷ ಕೊಡುಗೆ!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆಯೋಜಿಸಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಈಗ ಚಾಲ್ತಿಯಲ್ಲಿದ್ದು, ಭರ್ಜರಿ ಆಫರ್‌ಗಳು ಲಭ್ಯ ಇವೆ. ಅದರಲ್ಲೂ ಸ್ಮಾರ್ಟ್‌ಫೋನ್‌, ಐಫೋನ್‌ಗಳನ್ನ ಅಪ್‌ಗ್ರೇಡ್‌ ಮಾಡಬಯಸುವ ಗ್ರಾಹಕರಿಗೆ ಈ ಸೇಲ್‌ ಅತ್ಯುತ್ತಮ ಪ್ಲಾಟ್‌ಫಾರ್ಮ್‌ ಎಂದು ಹೇಳಬಹುದಾಗಿದೆ. ಏಕೆಂದರೇ ಈ ಸೇಲ್‌ನಲ್ಲಿಹೈ ಎಂಡ್‌ ಪ್ರೈಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಕೂಡ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು, ಕೆಲವು ಆಯ್ದ ಫೋನ್‌ಗಳಿಗೆ ಬೆಸ್ಟ್‌ ರಿಯಾಯಿತಿ ಘೋಷಿಸಲಾಗಿದೆ. ಅದರಲ್ಲಿಯೂ ಕೆಲವು ವಿಶೇಷ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರನ್ನು ಸೆಳೆದಿದೆ.

ಸ್ಮಾರ್ಟ್‌ಫೋನ್‌

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಕೂಡ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ರಿಯಾಯಿತಿ ದರವನ್ನು ಹೊಂದಿದೆ. ಅಮೆಜಾನ್‌ ಕಂಪೆನಿ ಹೆಚ್‌ಡಿಎಫ್‌ಸಿ ಬ್ಯಾಂಕಿನೊಂದಿಗೆ ಸಹಭಾಗಿತ್ವದಲ್ಲಿ ತ್ವರಿತ 10% ರಿಯಾಯಿತಿಯನ್ನು 12,000ರೂ ವರೆಗೆ ನೀಡುತ್ತಿದೆ. ನಿರೀಕ್ಷೆಯಂತೆ ಸ್ಮಾರ್ಟ್‌ಫೋನ್‌ಗಳ ಮೇಲೆ ಸಾಕಷ್ಟು ರಿಯಾಯಿತಿ ದರದ್ಲಿ ಲಭ್ಯವಿದ್ದು, ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ರೆಡ್ಮಿ ನೋಟ್ 8

ಶಿಯೋಮಿ ರೆಡ್ಮಿ ನೋಟ್ 8

ಶಿಯೋಮಿ ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನ್‌ ಮೂಲ ಬೆಲೆ 12,999 ರೂ ಆಗಿದ್ದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ 11,499ರೂ ಗಳಿಗೆ ಲಭ್ಯವಾಗುತ್ತಿದೆ. ಇದು 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ ಈ ರಿಯಾಯಿತಿ ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665,ಪ್ರೊಸೆಸರ್‌, 18W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಆಪಲ್ ಐಫೋನ್ 7

ಆಪಲ್ ಐಫೋನ್ 7

ಇನ್ನು ಆಪಲ್‌ ಐಫೋನ್ 7 ಕೇವಲ 24,999ರೂ ಗಳಿಗೆ ಲಭ್ಯವಾಗಲಿದೆ. ಇದರ ಮೂಲಬೆಲೆ 31,500 ರೂ ಆಗಿದೆ. ಇನ್ನು ಈ ಐಫೋನ್‌ 4.7-ಇಂಚಿನ ರೆಟಿನಾ ಹೆಚ್‌ಡಿ ಎಲ್‌ಸಿಡಿ ಮತ್ತು ಆಟೋ ಹೆಚ್‌ಡಿಆರ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವನ್ನು ಸಹ ಹೊಂದಿದೆ.

ಒಪ್ಪೋ A5 2020

ಒಪ್ಪೋ A5 2020

ಒಪ್ಪೋ A5 2020 ಅಮೆಜಾನ್ ಇಂಡಿಯಾದಲ್ಲಿ 9,990 ರೂಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 14,990 ರೂ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು 3 ತಿಂಗಳವರೆಗೆ ನೋ ಕಾಸ್ಟ್‌ ಇಎಂಐ ಆಯ್ಕೆಯಲ್ಲಿ ಸಹ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 10 + ಸ್ಮಾರ್ಟ್‌ಫೋನ್‌ ಮೂಲಬೆಲೆ 79,000 ರೂ ಆಗಿದ್ದು, ಅಮೆಜಾನ್‌ ಸೇಲ್‌ನಲ್ಲಿ 44,990ರೂ ಗೆ ಸೇಲ್‌ ಆಗುತ್ತಿದೆ. ಈ ಪ್ರೀಮಿಯಂ ಫೋನ್‌ನೊಂದಿಗೆ ನೀವು 9 ತಿಂಗಳವರೆಗೆ ನೋ ಕಾಸ್ಟ್‌ ಇಎಂಐ ಆಯ್ಕೆಯನ್ನು ಸಹ ಪಡೆಯಬಹುದು.

Most Read Articles
Best Mobiles in India

English summary
Planning to buy a new smartphone? How about Samsung’s Galaxy S10 Plus or Apple’s classic iPhone 7? Check top smartphone deals on Amazon’s Great Indian Festival.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X