Amazon Sale: ರೆಫ್ರಿಜಿರೇಟರ್ ಖರೀದಿಸುವುದಕ್ಕೆ ಇದಕ್ಕಿಂತ ಬೆಸ್ಟ್ ಟೈಂ ಮತ್ತೊಂದಿಲ್ಲ!
ಇ-ಕಾಮರ್ಸ್ ದೈತ್ಯ ಅಮೆಜಾನ್ ಕಳೆದ ಒಂದು ವಾರದಿಂದ ಭಾರತದಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಸುತ್ತಿದೆ. ಅಮೆಜಾನ್ (Amazon) ತನ್ನ ವಿಶೇಷ ಸೇಲ್‌ನಲ್ಲಿ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ರೆಫ್ರಿಜರೇಟರ್‌ಗಳು ಕೂಡ ಸೇರಿದ್ದು, ಜನಪ್ರಿಯ ಬ್ರ್ಯಾಂಡ್ ಉತ್ಪನ್ನಗಳು ನಿಮಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ.
ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ರೆಫ್ರಿಜಿರೇಟರುಗಳ ಮೇಲೆ ಭರ್ಜರಿ ಆಫರ್ ಲಭ್ಯವಾಗ್ತಿದೆ. ಹೆಚ್ಚು ಕಡಿಮೆ 50% ತನಕ ರಿಯಾಯಿತಿಯನ್ನು ನೀಡುತ್ತಿದೆ. ಇದರಿಂದ ಅತ್ಯುತ್ತಮ ರೆಫ್ರಿಜಿರೇಟರುಗಳ ಬೆಲೆಯಲ್ಲಿ ಭಾರಿ ಇಳಿಕೆಯನ್ನು ಕಾಣಬಹುದಾಗಿದೆ. ಹಾಗಾದ್ರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ರೆಫ್ರಿಜಿರೇಟರುಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ 236L 3 star ಕನ್ವರ್ಟಿಬಲ್ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ 236L 3 star ಕನ್ವರ್ಟಿಬಲ್ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್ ಭಾರಿ ರಿಯಾಯಿತಿ ಪಡೆದುಕೊಂಡಿದೆ. ಇದು ಅಮೆಜಾನ್‌ನಲ್ಲಿ 35% ಡಿಸ್ಕೌಂಟ್ ಪಡೆದುಕೊಂಡಿದೆ. ಆದರಿಂದ 40,990ರೂ ಬೆಲೆಯ ರೆಫ್ರಿಜರೇಟರ್ ನಿಮಗೆ ಕೇವಲ 26,490 ರೂಗಳಲ್ಲಿ ಲಭ್ಯವಿದೆ. ಇದಲ್ಲದೆ SBI ಕಾರ್ಡ್‌ಗಳ ಮೇಲೆ ಖರೀದಿದಾರರು 1,500 ರೂಪಾಯಿಗಳವರೆಗೆ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ.
LG 240L 3 ಸ್ಟಾರ್ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್
LG 240L 3 ಸ್ಟಾರ್ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್ ಅಮೆಜಾನ್‌ನಲ್ಲಿ 30% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಫೋನ್ ನಿಮಗೆ ಕೇವಲ 25,990ರೂ ಬೆಲೆಗೆ ಲಭ್ಯವಾಗ್ತಿದೆ. ಜೊತೆಗೆ SBI ಕಾರ್ಡ್‌ಗಳ ಮೂಲಕ ಖರೀದಿಸುವ ಖರೀದಿದಾರರಿಗೆ ಹೆಚ್ಚುವರಿ ರಿಯಾಯಿತಿಗಳನ್ನು ಸಹ ನೀಡಲಾಗ್ತಿದೆ.

ಹೈಯರ್ 602L ಡಬಲ್ ಡೋರ್ ಸೈಡ್ ಬೈ ಸೈಡ್ ರೆಫ್ರಿಜರೇಟರ್
ಅಮೆಜಾನ್ ಸೇಲ್‌ನಲ್ಲಿ ಹೈಯರ್ 602L ಡಬಲ್ ಡೋರ್ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಬೆಲೆಯಲ್ಲಿ 41,000ರೂ.ಗಳಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಆದರಿಂದ ಈ ರೆಫ್ರಿಜರೇಟರ್ ಅನ್ನು 62,990 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದರೊಂದಿಗೆ SBI ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಕೂಡ ದೊರೆಯಲಿದೆ.
ಗೋದ್ರೇಜ್ 331 L 2 ಸ್ಟಾರ್ ಫ್ರಾಸ್ಟ್ ಫ್ರೀ ಡಬಲ್ ಡೋರ್ ರೆಫ್ರಿಜರೇಟರ್
ಅಮೆಜಾನ್‌ನಲ್ಲಿ ಈ ರೆಫ್ರಿಜರೇಟರ್ ಮೇಲೆ ಬರೋಬ್ಬರಿ 18,550ರೂಗಳು ರಿಯಾಯಿತಿ ಲಭ್ಯವಿದೆ. ಆದರಿಂದ ಇದನ್ನು ನೀವು ಕೇವಲ 28,990ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ರೆಫ್ರಿಜರೇಟರ್ ಡಬರ್ ಡೋರ್ ಪಡೆದಿರುವುದರಿಂದ ನಿಮಗೆ ಮಲ್ಟಿ ಫಂಕ್ಷನ್‌ಗಳನ್ನು ನೀಡಲಿದೆ. ಇನ್ನು ಈ ರೆಫ್ರಿಜಿರೇಟರ್ ಅನ್ನು SBI ಕಾರ್ಡ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿಗಳನ್ನು ಸಹ ನೀಡಲಾಗ್ತಿದೆ.

Whirlpool 327 L 2 Star IntelliFresh
ಇದು ಕನ್ವರ್ಟಿಬಲ್ ಡಬಲ್ ಡೋರ್ ರೆಫ್ರಿಜರೇಟರ್ ಆಗಿದ್ದು, ಅಮೆಜಾನ್ ಸೇಲ್‌ನಲ್ಲಿ 20,910ರೂ ರಿಯಾಯಿತಿ ಪಡೆದಿದೆ. ಆದರಿಂದ ಈ ರೆಫ್ರಿಜರೇಟರ್ ಅನ್ನು ಮೂಲಬೆಲೆಗೆ ಬದಲಾಗಿ 36,990ರೂ.ಗಳಿಗೆ ಖರೀದಿಸಬಹುದಾಗಿದೆ. ಜೊತೆಗೆ ಬ್ಯಾಂಕ್ ಆಫರ್‌ಗಳ ಮೂಲಕ ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ನೀಡಲಾಗಿದೆ.
ಪ್ಯಾನಾಸೋನಿಕ್ 309 L
ಅಮೆಜಾನ್ ಸೇಲ್‌ನಲ್ಲಿ ಪ್ಯಾನಾಸೋನಿಕ್ 309 L 3 ಸ್ಟಾರ್ 6-ಹಂತದ ಸ್ಮಾರ್ಟ್ ಇನ್ವರ್ಟರ್ ಫ್ರಾಸ್ಟ್-ಫ್ರೀ ಡಬಲ್ ಡೋರ್ ರೆಫ್ರಿಜರೇಟರ್ 32% ಡಿಸ್ಕೌಂಟ್ ಪಡೆದುಕೊಂಡಿದೆ. ಆದರಿಂದ ಇದರ ಮೂಲಬೆಲೆಯಲ್ಲಿ 15,310ರೂ ಗಳಷ್ಟು ಕಡಿತವಾಗಿದೆ. ಇದೇ ಕಾರಣಕ್ಕೆ ಈ ರೆಫ್ರಿಜರೇಟರ್ ಕೇವಲ 27,490ರೂ. ಬೆಲೆಗೆ ಮಾರಾಟವಾಗುತ್ತಿದೆ.


Click it and Unblock the Notifications








