Home
ಸುದ್ದಿಜಾಲ

ಅಮೆಜಾನ್‌ ಸೇಲ್‌ನಲ್ಲಿ 20,000ರೂ ಒಳಗೆ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು!

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ಆನ್‌ಲೈನ್‌ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ಅಮೆಜಾನ್‌ ಆಯೋಜಿಸುತ್ತಲೇ ಬಂದಿದೆ. ಇದೀಗ ಮತ್ತೊಮ್ಮೆ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ಅನ್ನು ಹೊತ್ತು ತಂದಿದೆ. ಇನ್ನು ಈ ಸೇಲ್‌ ಇದೇ ಅಕ್ಟೋಬರ್ 4 ರಿಂದ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ 75,000 ಕ್ಕೂ ಹೆಚ್ಚು ಲೋಕಲ್‌ ಸ್ಟೋರ್‌ಗಳನ್ನು ಭಾಗವಹಿಸಲಿವೆ ಅನ್ನೊದನ್ನ ಅಮೆಜಾನ್ ಸಂಸ್ಥೆ ಹೇಳಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2021 ಸೇಲ್‌ ಡೇಟ್‌ ಬಹಿರಂಗವಾಗಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ ಸೇರಿದಂತೆ ಹಲವು ಗ್ಯಾಜೆಟ್ಸ್‌ಗಳ ಮೇಳೆ ಬಿಗ್‌ ಡಿಸ್ಕೌಂಟ್‌ ಅನ್ನು ಘೋಷಿಸಿದೆ. ಇನ್ನು ನೀವು ಸ್ಮಾರ್ಟ್‌ಟಿವಿಗಳನ್ನು ಖರೀದಿಸಲು ಬಯಸಿದರೆ ಈ ಭಾರಿ ಅಮೆಜಾನ್‌ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ. ರಿಯಲ್‌ಮಿ, ರೆಡ್ಮಿ, ಮೊಟೊರೊಲಾ, ಒನ್‌ಪ್ಲಸ್‌ ಬ್ರಾಂಡ್‌ಗಳು ಲಭ್ಯವಿವೆ. ಜೊತೆಗೆ ಪ್ರೀಮಿಯಂ ಬ್ರಾಂಡ್‌ಗಳಾದ ಸೋನಿ, ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಸ್ಮಾರ್ಟ್‌ಟಿವಿಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ನೀವು 20,000ರೂ ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವ ಓದಿರಿ.

ಅಮೆಜಾನ್‌ ಬೇಸಿಕ್ಸ್‌ 32 ಇಂಚಿನ ಸ್ಮಾರ್ಟ್ ಎಲ್ಇಡಿ ಫೈರ್ ಟಿವಿ

ಅಮೆಜಾನ್‌ ಬೇಸಿಕ್ಸ್‌ 32 ಇಂಚಿನ ಸ್ಮಾರ್ಟ್ ಎಲ್ಇಡಿ ಫೈರ್ ಟಿವಿ

ಅಮೆಜಾನ್ ತನ್ನದೇ ಸ್ಮಾರ್ಟ್‌ಟಿವಿಗಳನ್ನು ಅಮೆಜಾನ್‌ ಬೇಸಿಕ್ಸ್‌ ಬ್ರ್ಯಾಂಡಿಂಗ್ ಹೆಸರಿನಲ್ಲಿ ಸೇಲ್‌ ಮಾಡುತ್ತಿದೆ. 32 ಇಂಚಿನ ಈ ಸ್ಮಾರ್ಟ್‌ಟಿವಿ ಅಮೆಜಾನ್ ನಲ್ಲಿ ನಿಮಗೆ ಕೇವಲ 16,999 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 60hz ರಿಫ್ರೆಶ್ ರೇಟ್‌ ಬೆಂಬಲಿಸುವ ಡಿಸ್‌ಪ್ಲೇ ಹೊಂದಿದೆ. ಇದು 2ಎಚ್‌ಡಿಎಂಐ ಪೋರ್ಟ್‌ಗಳನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸೆಟ್ ಟಾಪ್ ಬಾಕ್ಸ್, ಬ್ಲೂ-ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್, ಹಾರ್ಡ್ ಡ್ರೈವ್‌ಗಳನ್ನು ಕನೆಕ್ಟ್‌ ಮಾಡಲು 2 ಯುಎಸ್‌ಬಿ ಪೋರ್ಟ್‌ಗಳು ಮತ್ತು ಸೌಂಡ್‌ಬಾರ್‌ಗಳನ್ನು ಬೆಂಬಲಿಸಲಿದೆ.

ಮಿ 80 cm ಹೆಚ್‌ಡಿ ರೆಡಿ ಆಂಡ್ರಾಯ್ಡ್ ಸ್ಮಾರ್ಟ್ LED TV 4A PRO

ಮಿ 80 cm ಹೆಚ್‌ಡಿ ರೆಡಿ ಆಂಡ್ರಾಯ್ಡ್ ಸ್ಮಾರ್ಟ್ LED TV 4A PRO

ಶಿಯೋಮಿ ಸಂಸ್ಥೆ ಕೂಡ 20,000ರೂ ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಟಿವಿಗಳಲ್ಲಿ ಕೆಲವು ಉತ್ತಮ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ Mi ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿ ಟಿವಿ 4A ಪ್ರೊ ಸ್ಮಾರ್ಟ್‌ಟಿವಿ 16,999ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿ 32-ಇಂಚಿನ ಡಿಸ್‌ಪ್ಲೇ ಹೊಂದಿದ್ದು, 60hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ 3 ಹೆಚ್‌ಡಿಎಂಐ ಪೋರ್ಟ್‌ಗಳನ್ನು ಹೊಂದಿದ್ದು, ಸೆಟ್ ಟಾಪ್ ಬಾಕ್ಸ್, ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್ ಇತರ ಯುಎಸ್‌ಬಿ ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲಿದೆ.

ಒನ್‌ಪ್ಲಸ್ ವೈ ಸರಣಿ

ಒನ್‌ಪ್ಲಸ್ ವೈ ಸರಣಿ

ಒನ್‌ಪ್ಲಸ್ ಭಾರತದಲ್ಲಿ ಪರಿಚಯಿಸಿರುವ ಜನಪ್ರಿಯ ಸ್ಮಾರ್ಟ್‌ಟಿವಿ ಸರಣಿಗಳಲ್ಲಿ ವೈ ಸರಣಿ ಕೂಡ ಒಂದಾಗಿದೆ. ಇನ್ನು ಒನ್‌ಪ್ಲಸ್ ವೈ ಸರಣಿಯಲ್ಲಿ ಹೆಚ್‌ಡಿ ರೆಡಿ ಟಿವಿ 32 ಇಂಚಿನ ಸ್ಕ್ರೀನ್ ಗಾತ್ರದಲ್ಲಿ ನೀಡಲಾಗಿದೆ. ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಒನ್‌ಪ್ಲಸ್ ಕನೆಕ್ಟ್, ಗೂಗಲ್ ಅಸಿಸ್ಟೆಂಟ್ ಮತ್ತು ಹೆಚ್ಚಿನವುಗಳಿಗೆ ಬೆಂಬಲವನ್ನು ನೀಡಲಿದೆ. ಈ ಟಿವಿ ಸೆಟ್-ಟಾಪ್ ಬಾಕ್ಸ್ ಕನೆಕ್ಟ್‌ ಮಾಡಲು 2 HDMI ಪೋರ್ಟ್‌ಗಳು, ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್, ಹಾರ್ಡ್ ಡ್ರೈವ್‌ಗಳನ್ನು ಬೆಂಬಲಿಸಲಿದೆ. ಜೊತೆಗೆ ಇತರ USB ಸಾಧನಗಳನ್ನು ಸಂಪರ್ಕಿಸಲು 2 USB ಪೋರ್ಟ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿಯನ್ನು ಅಮೆಜಾನ್‌ನಲ್ಲಿ ನೀವು 18,999 ರೂಗಳಿಗೆ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್ ವಂಡರ್ ಟೈನ್ಮೆಂಟ್ ಸರಣಿ

ಸ್ಯಾಮ್‌ಸಂಗ್ ವಂಡರ್ ಟೈನ್ಮೆಂಟ್ ಸರಣಿ

ಸ್ಯಾಮ್‌ಸಂಗ್ ಬ್ರಾಂಡ್‌ನ ಸ್ಮಾರ್ಟ್‌ಟಿವಿ ಖರೀದಿಸಲು ಬಯಸುವವರು ಕೂಡ 20,000 ಕ್ಕಿಂತ ಕಡಿಮೆ ಬೆಲೆಯನ್ನು ಹಲವು ಆಯ್ಕೆಯ ಸ್ಮಾರ್ಟಟಿವಿ ಖರೀದಿಸಬಹುದು. ಇದರಲ್ಲಿ ಸ್ಯಾಮ್‌ಸಂಗ್ ವಂಡರ್‌ಟೈನ್‌ಮೆಂಟ್ ಸೀರೀಸ್ ಕೂಡ ಒಂದಾಗಿದೆ. ಈ ಸರಣಿಯಲ್ಲಿ ನೀವು 32 ಇಂಚಿನ ಆಯ್ಕೆಯ ಸ್ಮಾರ್ಟ್‌ಟಿವಿಯನ್ನು 18,290ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದು ಡಾಲ್ಬಿ ಡಿಜಿಟಲ್ ಪ್ಲಸ್ ಬೆಂಬಲಿಸುವ 20 ವ್ಯಾಟ್ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2 HDMI ಪೋರ್ಟ್‌ಗಳು, ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್, ಹಾರ್ಡ್ ಡ್ರೈವ್‌ಗಳನ್ನು ಬೆಂಬಲಿಸಲಿದೆ.

ಎಲ್‌ಜಿ ಸ್ಮಾರ್ಟ್ ಎಲ್ಇಡಿ ಟಿವಿ 32LM563BPTC

ಎಲ್‌ಜಿ ಸ್ಮಾರ್ಟ್ ಎಲ್ಇಡಿ ಟಿವಿ 32LM563BPTC

20,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ಟಿವಿಗಳಲ್ಲಿ ಎಲ್ಜಿ ಸ್ಮಾರ್ಟ್ ಎಲ್ಇಡಿ ಟಿವಿ 32LM563BPTC ಕೂಡ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ಬೆಲೆ ಅಮೆಜಾನ್‌ನಲ್ಲಿ 17,999ರೂ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ ಸ್ಕ್ರೀನ್ ಗಾತ್ರದಲ್ಲಿ ಲಭ್ಯವಾಗಲಿದೆ. ಇದು ಎರಡು 10w ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್‌ಟಿವಿ ಸೆಟ್-ಟಾಪ್ ಬಾಕ್ಸ್ ಕನೆಕ್ಟ್‌ ಮಾಡಲು 2 HDMI ಪೋರ್ಟ್‌ಗಳು, ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್ ಮತ್ತು 1 USB ಪೋರ್ಟ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Here are some of the options you should consider if you are looking to buy a smart TV for under Rs 20,000.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+