ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್: ಏನ್ ಸಿಗುತ್ತೇ..? ರಿಯಾಯಿತಿ ಎಷ್ಟು..??
ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ನೀಡುವ ಮೂಲಕ ತನ್ನ ಕಡೆಗೆ ಹೆಚ್ಚಿನ ಗ್ರಾಹಕರನ್ನು ಸೆಳೆದುಕೊಳ್ಳುವ ಪ್ರಯತ್ನವೊಂದನ್ನು ಮಾಡುತ್ತಿದೆ.
ಭಾರತೀಯಾ ಆನ್‌ಲೈನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಪ್ರಮುಖ ಶಾಪಿಂಗ್ ತಾಣ ಅಮೆಜಾನ್ ಈ ಬಾರಿ 'ಗ್ರೇಟ್ ಇಂಡಿಯನ್ ಸೇಲ್' ಆಯೋಜಿಸಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ನೀಡುವುದರೊಂದಿಗೆ ತನ್ನ ಕಡೆಗೆ ಹೆಚ್ಚಿನ ಗ್ರಾಹಕರನ್ನು ಸೆಳೆದುಕೊಳ್ಳುವ ಪ್ರಯತ್ನವೊಂದನ್ನು ಮಾಡುತ್ತಿದ್ದು, ಇದಕ್ಕಾಗಿ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ರಿಯಾಯಿತಿ ಗಳನ್ನ ನೀಡಲು ಮಂದಾಗಿದೆ.

ಫ್ಲಿಪ್ ಕಾರ್ಟ್ 10ನೇ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ಆಯೋಜಿಸಿದೆ. ಫ್ಲಿಪ್ ಕಾರ್ಟ್‌ಗೂ ಮುನ್ನವೇ ಅಂದ್ರೆ ಮೇ 11 ರಿಂದ ಮೇ 14ರ ವರೆಗೆ 3 ದಿನಗಳ ಕಾಲ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್ ಆಫರ್‌ಗಳು:
ಅಮೆಜಾನ್ ಈ ಬಾರಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ನೀಡಲಿದ್ದು, ಟಾಪ್ ಬ್ರಾಂಡ್ ಸ್ಯಾಮ್‌ಸಂಗ್ ಫೋನುಗಳ ಮೇಲೆ 18% ಆಫರ್ ನೀಡಲಿದ್ದು, ಮೊಟೋರೋಲಾ ಕಂಪನಿಯ ಫೋನ್‌ಗಳ ಮೇಲೆ 40% ವರೆಗೂ ರಿಯಾಯಿತಿ ನೀಡುವ ಸಾಧ್ಯತೆ ಇದೆ. ಅಲ್ಲದೇ ಓನ್ ಪ್ಲಸ್ ಖರೀದಿಯ ಮೇಲೆ ನೋ ಕಾಸ್ಟ್ ಇಎಂಐ ಆಫರ್ ನೀಡುತ್ತಿದೆ.

ಕ್ಯಾಷ್ ಬ್ಯಾಕ್ ಆಫರ್:
ಅಮೆಜಾನ್ ಈ ಬಾರಿ ಪ್ರತಿ ಖರೀದಿಯ ಮೇಲೆ 10 % ಕ್ಯಾಷ್ ಬ್ಯಾಕ್ ಆಫರ್ ನೀಡಲಿದೆ. ಇದಲ್ಲದೇ ಇದರೊಂದಿಗೆ ಸಿಟಿ ಬ್ಯಾಂಕ್ ಖರೀದಿಯ ಮೇಲೆ 15% ಹೆಚ್ಚಿನ ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಲಭ್ಯವಿರಲಿದೆ.

80% ಡಿಸ್ಕೌಂಟ್:
ಇದಲ್ಲದೇ ಮೊಬೈಲ್ ಕವರ್‌ಗಳು, ಪವರ್ ಬ್ಯಾಂಕ್‌ಗಳು, ಸ್ಕ್ರಿನ್ ಪ್ರೋಟೆಕ್ಷನ್‌ಗಳು, ಡೇಟಾ ಕೇಬಲ್‌ಗಳ ಮೇಲೆ ಅಮೆಜಾನ್ 80% ಡಿಸ್ಕೌಂಟ್ ಘೋಷಣೆ ಮಾಡಲಿದೆ. ಅಲ್ಲದೇ ಅಮೆಜಾನ್ ಸ್ಟಿಕ್ ಕೇವಲ 500 ರೂ.ಗೆ ದೊರೆಯಲಿದೆ.

ಅಮೆಜಾನ್ ಆಪ್ ಆಫರ್:
ಇದಲ್ಲದೇ ಅಮೆಜಾನ ಆಪ್ ಹೊಂದಿರುವ ಗ್ರಾಹಕರಿಗೆ ಬೇರೆ-ಬೇರೆ ಆಫರ್ ನೀಡಲು ಅಮೆಜಾನ್ ಮುಂದಾಗಿದ್ದು, ಆಪ್ ಗ್ರಾಹಕರಿಗೆ ಅತೀ ಹೆಚ್ಚಿನ ಲಾಭ ದೊರೆಯಲಿದೆ ಎನ್ನಲಾಗಿದೆ. ಅನೇಕ ಮೊಬೈಲ್‌ಗಳು ಅತೀ ಕಡಿಮೆ ಬೆಲೆಗೆ ಇಲ್ಲಿ ದೊರೆಯಲಿದೆ.


Click it and Unblock the Notifications