Home
ಸುದ್ದಿಜಾಲ

Amazon Great Republic Day Sale 2025ಕ್ಕೆ ದಿನಾಂಕ ಫಿಕ್ಸ್: ಈ ಫೋನ್‌ಗಳ ಮೇಲೆ ಭರಪೂರ ಆಫರ್.. ಇಲ್ಲಿದೆ ಪಟ್ಟಿ

ಗಣರಾಜ್ಯೋತ್ಸವ ಬರುತ್ತಿದೆ.. ಆಫರ್‌ಗಳ ಸುರಿಮಳೆ ತರುತ್ತಿದೆ! ಅಮೆಜಾನ್‌ ಟೆಕ್ ಪ್ರಿಯರಿಗೆ ಸಾಲು ಸಾಲು ಆಫರ್‌ ಘೋಷಿಸಿದೆ. ಹೌದು, ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2025ರ (Amazon Great Republic Day Sale 2025) ದಿನಾಂಕವನ್ನು ಘೋಷಿಸಲಾಗಿದೆ. ಈ ಮಾರಾಟದ ಭಾಗವಾಗಿ, ಅಮೆಜಾನ್ ಅನೇಕ ಕಂಪನಿಗಳ ಉತ್ಪನ್ನಗಳನ್ನು ದೊಡ್ಡ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದೆ. ಇದಲ್ಲದೆ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಮತ್ತಷ್ಟು ರಿಯಾಯಿತಿಯಲ್ಲಿ ಫೋನ್‌ಗಳನ್ನು ಖರೀದಿ ಮಾಡಬಹುದು. ಹಾಗೆಯೇ, ಅಮೆಜಾನ್ ಪ್ರೈಮ್ (Amazon Prime) ಸದಸ್ಯರು ಕೆಲವು ಹೆಚ್ಚುವರಿ ಪ್ರಯೋಜನ ಪಡೆಯಬಹುದು.

ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಪ್ರತಿ ವರ್ಷದಂತೆ ಈ ವರ್ಷವೂ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ ಘೋಷಿಸಿದೆ. ಈ ವಿಶೇಷ ಮಾರಾಟವು ಜನವರಿ 13 ರಂದು ಮಧ್ಯಾಹ್ನ 12 ಗಂಟೆಗೆ (Amazon sale 2025) ಪ್ರಾರಂಭವಾಗಲಿದೆ. ಆದರೆ, ಪ್ರೈಮ್ ಸದಸ್ಯರು 12 ಗಂಟೆಗಳ ಮುಂಚಿತವಾಗಿ ಮಾರಾಟದಲ್ಲಿ ಭಾಗವಹಿಸಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವ ಗ್ರಾಹಕರು ಶೇ.10 ರಷ್ಟು ರಿಯಾಯಿತಿ ಪಡೆಯಬಹುದು.

Amazon Great Republic Day Sale 2025: ಈ ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್!

ಕಡಿಮೆ ಬೆಲೆಗೆ ಪ್ರಸಿದ್ಧ ಕಂಪನಿಗಳ ಫೋನ್‌ಗಳು!

ಅಮೆಜಾನ್ ಮೈಕ್ರೋ ಸೈಟ್‌ ಪ್ರಕಾರ, ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಆಫರ್ ನೀಡಲಾಗುತ್ತದೆ. ಇದು ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ಪ್ರವೇಶ ಮಟ್ಟವನ್ನು ಒಳಗೊಂಡಿದೆ. ವಿಶೇಷವಾಗಿ ಒನ್‌ಪ್ಲಸ್, ಐಕ್ಯೂ, ಮೊಟೊರೊಲಾ, ಸ್ಯಾಮ್‌ಸಂಗ್, ವಿವೋ, ಹಾನರ್, ಪೊಕೊ, ರೆಡ್ಮಿ, ರಿಯಲ್‌ಮಿ, ಟೆಕ್ನೋ ಸೇರಿದಂತೆ ಪ್ರಸಿದ್ಧ ಕಂಪನಿಯ ಮೊಬೈಲ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ಆದರೆ, ಈ ಫೋನಿನ ಬೆಲೆಗಳನ್ನು ಬಹಿರಂಗಪಡಿಸಿಲ್ಲ.

OnePlus 13 ಮತ್ತು OnePlus 13R ಫೋನ್‌ ಸಹ ಲಭ್ಯ

ಒನ್‌ಪ್ಲಸ್ ಕಂಪನಿಯ OnePlus Nord 4, OnePlus Nord CE 4, OnePlus Nord CE 4 Lite ಸೇರಿದಂತೆ ನಿನ್ನೆ ಬಿಡುಗಡೆಯಾದ OnePlus 13 ಮತ್ತು OnePlus 13R ಫೋನ್‌ಗಳನ್ನು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಖರೀದಿಸಬಹುದು. ಮತ್ತು IQOO 13, IQOO Neo 9, IQOO Neo 12, IQOO Z9 ಮೊಬೈಲ್‌ಗಳು ಸಹ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಿರುತ್ತವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ, ಗ್ಯಾಲಕ್ಸಿ M15 5G, ಗ್ಯಾಲಕ್ಸಿ M35, ಗ್ಯಾಲಕ್ಸಿ M05, ಮೋಟೋರೋಲಾ ರೇಜರ್ 50 ಅಲ್ಟ್ರಾ, ಹಾನರ್ 200 5G, ಒಪೊ F27 ಪ್ರೊ ಪ್ಲಸ್, ವಿವೋ X200 ಪ್ರೊ 5G, ಶಿಯೋಮಿ 14, ರಿಯಲ್‌ಮಿ ನಾರ್ಜೊ N61, ರಿಯಲ್‌ಮಿ GT 7 ಪ್ರೊ, ರಿಯಲ್‌ಮಿ ನಾರ್ಜೊ 70 ಟರ್ಬೊ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.

Amazon Great Republic Day Sale 2025: ಈ ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್!

ಇವುಗಳಲ್ಲದೆ, ರೆಡ್ಮಿ ನೋಟ್ 14, ರೆಡ್ಮಿ A4 5G, ರೆಡ್ಮಿ 13 5G, ರೆಡ್ಮಿ 13C, ರೆಡ್ಮಿ ನೋಟ್ 13 ಪ್ರೊ, ಟೆಕ್ನೋ ಪೋವಾ 6 ನಿಯೋ, ಟೆಕ್ನೋ ಪಾಪ್ 9 5G, ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ 2, ಟೆಕ್ನೋ ಪಾಪ್ 9 4G, ಪೊಕೊ M6 5G ಇನ್ನಿತರ ಸ್ಮಾರ್ಟ್‌ಫೋನ್‌ಗಳ ಖರೀದಿ ಮೇಲೆ ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆಯಬಹುದು.

ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌ಗಳ ಮೇಲೆಯೂ ಸಖತ್ ಆಫರ್

ಈ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಇಯರ್‌ಬಡ್‌ಗಳು, ಪವರ್ ಬ್ಯಾಂಕ್‌ಗಳು, ಸ್ಮಾರ್ಟ್ ಟಿವಿಗಳು, ಟ್ಯಾಬ್ಲೆಟ್‌ಗಳು, ಹೆಡ್‌ಫೋನ್‌ಗಳು, ಸೌಂಡ್‌ಬಾರ್‌ಗಳು ಮತ್ತು ಕ್ಯಾಮೆರಾಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಅಮೆಜಾನ್ ಮಾರಾಟದ ಭಾಗವಾಗಿ, ನೀವು ಡೆಲ್, ಲೆನೆವೋ, ಹೆಚ್‌ಪಿ ಮತ್ತು ಇನ್ನಿತರ ಕಂಪನಿಗಳ ಉತ್ಪನ್ನಗಳ ಮೇಲೆ ರಿಯಾಯಿತಿ ಸಿಗುತ್ತದೆ.

ಜ.19 ರವರೆಗೆ ಸೇಲ್ ಇರುತ್ತೆ!

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2025 ಜನವರಿ 13 ರಂದು ಪ್ರಾರಂಭವಾಗುತ್ತದೆ. ಜನವರಿ 19 ರವರೆಗೆ ಸೇಲ್ ನಡೆಯುತ್ತದೆ. ಅಂದರೆ ಸುಮಾರು ಒಂದು ವಾರ ಕಾಲ ಈ ಸೇಲ್ ನಡೆಯುತ್ತದೆ. ಈ ಮಾರಾಟದ ಆಫರ್‌ಗಳು ಮತ್ತು ರಿಯಾಯಿತಿಗಳ ಮಾಹಿತಿ ಶೀಘ್ರದಲ್ಲೇ ಬಹಿರಂಗವಾಗಲಿದೆ.

Best Mobiles in India

English summary
Amazon Great Republic Day Sale 2025 starts January 13th: know offers and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+