Home
ಸುದ್ದಿಜಾಲ

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026: iQOO ಫೋನ್‌ಗಳಿಗೆ ಭಾರೀ ರಿಯಾಯಿತಿ!

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ಜನವರಿ 16ರಿಂದ ಆರಂಭವಾಗಲಿದ್ದು, ದೇಶಾದ್ಯಂತ ಆನ್‌ಲೈನ್ ಶಾಪಿಂಗ್ ಪ್ರಿಯರಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ. ಪ್ರತಿವರ್ಷದಂತೆ ಈ ಬಾರಿಯೂ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು, ಧರಿಸಬಹುದಾದ ಸಾಧನಗಳು ಹಾಗೂ ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿಗಳು ಲಭ್ಯವಾಗಲಿವೆ. ಸೇಲ್‌ಗೆ ಇನ್ನೂ ಕೆಲ ದಿನಗಳು ಬಾಕಿ ಇರುವಾಗಲೇ, iQOO ಬ್ರಾಂಡ್ ತನ್ನ ಸ್ಮಾರ್ಟ್‌ಫೋನ್‌ಗಳ ವಿಶೇಷ ಸೇಲ್ ದರಗಳನ್ನು ಬಹಿರಂಗಪಡಿಸಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.

iQOO ಭಾರತ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ, ಕಳೆದ ವರ್ಷ ಬಿಡುಗಡೆ ಮಾಡಿದ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ರಿಯಾಯಿತಿ ಬೆಲೆಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಂಡಿರುವುದು iQOO 15 ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್. 2025ರ ನವೆಂಬರ್‌ನಲ್ಲಿ ಬಿಡುಗಡೆಗೊಂಡ ಈ ಸಾಧನವು 6.85 ಇಂಚಿನ ದೊಡ್ಡ ಡಿಸ್ಪ್ಲೇ, 144Hz ರಿಫ್ರೆಶ್ ರೇಟ್ ಹಾಗೂ ಶಕ್ತಿಶಾಲಿ Snapdragon 8 Elite Gen 5 ಪ್ರೊಸೆಸರ್ ಹೊಂದಿದೆ. ಜೊತೆಗೆ, 7,000mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಬೆಂಬಲ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಬಿಡುಗಡೆ ಸಮಯದಲ್ಲಿ ರೂ. 72,999 ದರ ಹೊಂದಿದ್ದ iQOO 15, ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ವೇಳೆ ರೂ. 65,999ಕ್ಕೆ ಲಭ್ಯವಾಗಲಿದೆ. ಈ ದರದಲ್ಲಿ ತೆರಿಗೆಗಳು ಹಾಗೂ ಆಯ್ದ ಆಫರ್‌ಗಳು ಒಳಗೊಂಡಿದ್ದು, ನಿರ್ದಿಷ್ಟ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಉಳಿತಾಯ ಸಾಧ್ಯ. ಪೂರ್ಣ ಮೊತ್ತವನ್ನು ಒಂದೇ ಬಾರಿ ಪಾವತಿಸಲು ಇಚ್ಛಿಸದ ಗ್ರಾಹಕರಿಗಾಗಿ ನೋ-ಕಾಸ್ಟ್ EMI ಆಯ್ಕೆಯನ್ನೂ ನೀಡಲಾಗಿದೆ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026: iQOO ಫೋನ್‌ಗಳಿಗೆ ಭಾರೀ ರಿಯಾಯಿತಿ!

ಮಿಡ್-ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ iQOO Neo 10 ಕೂಡ ಸೇಲ್‌ನಲ್ಲಿ ಗಮನಾರ್ಹ ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ. 2025ರ ಮೇನಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್, 6.78 ಇಂಚಿನ 144Hz ಡಿಸ್ಪ್ಲೇ, Snapdragon 8s Gen 4 ಚಿಪ್‌ಸೆಟ್, 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. 7,000mAh ಬ್ಯಾಟರಿ ಹಾಗೂ 120W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ, ಈ ಫೋನ್ ಈಗ ರೂ. 33,999 ಆರಂಭಿಕ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಇದಕ್ಕೂ ಹೆಚ್ಚಾಗಿ, ಮಾರಾಟದ ಸಮಯದಲ್ಲಿ ಬೆಲೆ ಕಡಿತಕ್ಕೆ ಸಾಕ್ಷಿಯಾಗುವ ಮತ್ತೊಂದು ಫೋನ್ iQOO Neo 10R ಸ್ಮಾರ್ಟ್‌ಫೋನ್. ಈ ಫೋ್ ಇದೀಗ ರೂ. 24,999 ಕ್ಕೆ ದೊರೆಯುತ್ತಿದೆ. ಇದರ ಜೊತೆಗೆ iQOO Z10 ರೂ. 20,499ಕ್ಕೆ ಹಾಗೂ iQOO Z10R ರೂ. 18,499ಕ್ಕೆ ಸೇಲ್‌ನಲ್ಲಿ ಲಭ್ಯವಾಗಲಿದೆ. ಬಜೆಟ್ ಗ್ರಾಹಕರಿಗಾಗಿ iQOO Z10x ಅನ್ನು ರೂ. 13,499ಕ್ಕೆ ಮತ್ತು iQOO Z10 Lite ಅನ್ನು ಕೇವಲ ರೂ. 9,999ಕ್ಕೆ ಖರೀದಿಸುವ ಅವಕಾಶವೂ ಇದೆ ಎಂದು ಕಂಪೆನಿ ತಿಳಿಸಿದೆ.

ಒಟ್ಟಾರೆಯಾಗಿ, ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 iQOO ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಉತ್ತಮ ಅವಕಾಶವಾಗಿದ್ದು, ಫ್ಲ್ಯಾಗ್‌ಶಿಪ್‌ನಿಂದ ಹಿಡಿದು ಬಜೆಟ್ ವಿಭಾಗದವರೆಗೂ ಆಯ್ಕೆಗಳು ಲಭ್ಯವಿವೆ. ಕಳೆದ ವರ್ಷದ ಅಂತ್ಯದಿಂದ RAM ಕೊರತೆ ಮತ್ತು ನಂತರದ ಘಟಕಗಳ ಬೆಲೆ ಏರಿಕೆಯಿಂದಾಗಿ ಸ್ಮಾರ್ಟ್‌ಫೋನ್‌ನ ಬೆಲೆ ಹೆಚ್ಚುತ್ತಲೇ ಇವೆ. ಹಾಗಾಗಿ, ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಜನೆ ಇದ್ದರೆ, ಈ ಸೇಲ್ ಅನ್ನು ನೀವು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Amazon Great Republic Day Sale 2026 starts on January 16 with exciting deals across categories, while iQOO has already revealed special discounted prices on its smartphones ahead of the sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+