ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ಘೋಷಣೆ: ಇಲ್ಲಿದೆ ಫುಲ್ ಡೀಟೇಲ್ಸ್!
ಅಮೆಜಾನ್ ತನ್ನ ಬಹುನಿರೀಕ್ಷಿತ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 (Amazon Great Republic Day Sale 2026) ಅನ್ನು ಭಾರತದಲ್ಲಿ ಜನವರಿ 16 ರಿಂದ ಆರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರಿಗೆ ಭಾರಿ ರಿಯಾಯಿತಿಗಳು ಮತ್ತು ಆಕರ್ಷಕ ಆಫರ್‌ಗಳು ಲಭ್ಯವಾಗಲಿವೆ ಎಂದು ಅಮೆಜಾನ್ ತಿಳಿಸಿದ್ದು, ಕಂಪೆನಿಯು ಬಿಡುಗಡೆ ಮಾಡಿರುವ ವಿಶೇಷ ಮೈಕ್ರೋಸೈಟ್‌ನಲ್ಲಿ ಈಗಾಗಲೇ ಬ್ಯಾಂಕ್ ಆಫರ್‌ಗಳ ಸುಳಿವು ನೀಡಲಾಗಿದೆ. ಇದು ಗ್ರಾಹಕರಲ್ಲಿ ಮುಂಬರುವ ಶಾಪಿಂಗ್ ಉತ್ಸಾಹವನ್ನು ಹೆಚ್ಚಿಸುವಂತಿದೆ.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026!
ಭಾರತದ 77 ನೇ ಗಣರಾಜ್ಯೋತ್ಸವದ ಆಚರಣೆಯ ಭಾಗವಾಗಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ಆರಂಭವಾಗಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್ ಟಿವಿಗಳು, ವಾಷಿಂಗ್ ಮೆಷಿನ್‌ಗಳು, ಫ್ರಿಜ್‌ಗಳು, ಗೇಮಿಂಗ್ ಕನ್ಸೋಲ್‌ಗಳು, ಸ್ಮಾರ್ಟ್ ವಾಚ್‌ಗಳು, ಪ್ರೋಜೆಕ್ಟರ್‌ಗಳು ಹಾಗೂ ಸ್ಮಾರ್ಟ್ ಹೋಮ್ ಉಪಕರಣಗಳು ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಹೊಸ ಸಾಧನಗಳನ್ನು ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸೂಕ್ತ ಸಮಯ ಎಂದು ಕಂಪೆನಿ ತಿಳಿಸಿದೆ.
ಈ ಸೇಲ್‌ನ ಮುಖ್ಯ ಭಾಗವಾಗಿರುವ ಬ್ಯಾಂಕ್ ಆಫರ್‌ಗಳ ಬಗ್ಗೆ ಮಾತನಾಡುವುದಾದರೆ, ಈ ಸೇಲ್‌ನಲ್ಲಿ SBI ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10 ಶೇಕಡಾ ತಕ್ಷಣದ ರಿಯಾಯಿತಿ ಹಾಗೂ ಸುಲಭ EMI ಆಯ್ಕೆಗಳು ಸಿಗಲಿವೆ. ಇದರ ಜೊತೆಗೆ 8 PM Deals, Trending Deals, Blockbuster Deals, Exchange ಜೊತೆಗೆ Blockbuster Deals ಮತ್ತು Top 100 Deals ಎಂಬ ವಿಶೇಷ ವಿಭಾಗಗಳನ್ನು ಅಮೆಜಾನ್ ಪರಿಚಯಿಸಿದ್ದು, ಈ ಡೀಲ್ಸ್‌ಗಳನ್ನು ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಹೆಚ್ಚುವರಿ ಎಕ್ಸ್ಕ್ಲೂಸಿವ್ ಆಫರ್‌ಗಳು ಲಭ್ಯವಾಗುವ ಸಾಧ್ಯತೆ ಇದೆ.

ಪ್ರಸ್ತುತ ಇಷ್ಟು ಮಾಹಿತಿ ಲಭ್ಯವಾಗಿದ್ದು, ಈ ಸೇಲ್‌ನಲ್ಲಿ ಯಾವ ಬ್ರಾಂಡ್‌ಗಳ ಯಾವ ಉತ್ಪನ್ನಗಳು ಭಾರಿ ರಿಯಾಯಿತಿಯಲ್ಲಿ ದೊರೆಯಲಿವೆ ಎಂಬ ಸಂಪೂರ್ಣ ಮಾಹಿತಿ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ. ವೇಗವಾಗಿ ಮತ್ತು ಅಡೆತಡೆಯಿಲ್ಲದೆ ಖರೀದಿ ಮಾಡಲು ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಮುಂಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು, ಆನ್‌ಲೈನ್ ವ್ಯವಹಾರ ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ಮತ್ತು ಡೆಲಿವರಿ ವಿಳಾಸ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅಮೆಜಾನ್ ಸಲಹೆ ನೀಡಿದೆ.
ಇದಕ್ಕೆ ಜೊತೆಗೆಯಾಗಿ, Flipkart ಕಂಪೆನಿ ಕೂಡ ಗಣರಾಜ್ಯೋತ್ಸವದ ಅಂಗವಾಗಿರವ Republic Day Sale 2026 ಅನ್ನು ಆಯೋಜಿಸಿದೆ. ಈ ಸೇಲ್ ಜನವರಿ 17ರಿಂದ ಆರಂಭವಾಗಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಫ್ಲಿಪ್‌ಕಾರ್ಟ್ ಬ್ಲ್ಯಾಕ್ ಸದಸ್ಯರಿಗೆ 24 ಗಂಟೆಗಳ ( ಜನವರಿ 16 ರಿಂದ)ಮುಂಚಿತ ಪ್ರವೇಶ ನೀಡಲಾಗುತ್ತಿದ್ದು, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10 ಶೇಕಡಾ ತಕ್ಷಣದ ರಿಯಾಯಿತಿ ಹಾಗೂ EMI ಸೌಲಭ್ಯಗಳು ಲಭ್ಯವಾಗಲಿವೆ. ಈ ಎರಡು ದೊಡ್ಡ ಸೇಲ್‌ಗಳ ನಡುವೆ ಸ್ಪರ್ಧೆ ಹೆಚ್ಚಾಗಲಿದ್ದು, ಗ್ರಾಹಕರಿಗೆ ಉತ್ತಮ ಬೆಲೆ ಮತ್ತು ಹೆಚ್ಚುವರಿ ಲಾಭ ದೊರೆಯುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಜನವರಿ ತಿಂಗಳು ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಭರ್ಜರಿ ಉಳಿತಾಯ ಮತ್ತು ಹೊಸ ಉತ್ಪನ್ನಗಳ ಖರೀದಿಗೆ ಸುವರ್ಣಾವಕಾಶ ಒದಗಿಸಲಿದೆ. Amazon Great Republic Day Sale 2026 ಮತ್ತು Flipkart Republic Day Sale 2026 ಎರಡೂ ಸೇಲ್‌ಗಳ ಮೂಲಕ ಗ್ರಾಹಕರು ಬಜೆಟ್ ಒಳಗೆ ಪ್ರೀಮಿಯಂ ಉತ್ಪನ್ನಗಳನ್ನು ಖರೀದಿಸುವ ಅವಕಾಶ ಪಡೆಯಲಿದ್ದಾರೆ. ಹಾಗಾಗಿ, ನಿಮ್ಮ ಮುಂದಿನ ಖರೀದಿ ಯಾವುದೆಂದು ಮೊದಲೇ ನಿರ್ಧರಿಸಿ.


Click it and Unblock the Notifications








