Home
ಸುದ್ದಿಜಾಲ

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಶುರು: ಮೊಬೈಲ್‌ ಖರೀದಿಸೋರಿಗೆ ರಿಯಾಯಿತಿಗಳ ಹಬ್ಬ!

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಇದೀಗ(ಡಿ.13 ಮಧ್ಯಾಹ್ನ 12 ಗಂಟೆಯಿಂದ ) ಪ್ರೈಮ್ ಸದಸ್ಯರಿಗೆ ಲೈವ್ ಆಗಿದೆ. ಪ್ರೈಮ್‌ ಚಂದಾದಾರಿಕೆಯನ್ನು ಹೊಂದಿರುವ ಗ್ರಾಹಕರು ಇದಿಗ ಅಮೆಜಾನ್‌ ಸೇಲ್‌ಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್‌ನಲ್ಲಿ ವ್ಯಾಪಕ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ಹೌದು, ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಪ್ರಾರಂಭವಾಗಿದೆ. ಈ ಸಮಯದಲ್ಲಿ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಸ್ಮಾರ್ಟ್‌ವಾಚ್ ಅಥವಾ ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್ ಖರೀದಿಸಲು ಬಯಸಿದರೆ ಹಲವು ಆಕರ್ಷಕ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಫ್ಲಾಟ್‌ ರಿಯಾಯಿತಿಯೊಂದಿಗೆ ವಿವಿಧ ಬ್ಯಾಂಕ್ ಕೊಡುಗೆಗಳು ಮತ್ತು ಎಕ್ಸ್‌ಚೆಂಜ್‌ ಆಫರ್‌ಗಳನ್ನು ಸಹ ಪಡೆಯಬಹುದು. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಲಭ್ಯವಾಗುತ್ತಿರುವ ರಿಯಾಯಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಮೊಬೈಲ್‌ ಖರೀದಿಸೋರಿಗೆ ರಿಯಾಯಿತಿಗಳ  ಹಬ್ಬ

ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಆಫರ್‌
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ ಇದೀಗ ಲೈವ್ ಆಗಿದೆ. ಈ ಸೇಲ್‌ನಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯಾಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು. ಇದರಲ್ಲಿ ನೀವು ಪ್ರಮುಖವಾಗಿ ಐಫೋನ್ 13 ಅನ್ನು ರಿಯಾಯಿತಿ ದರದಲ್ಲಿ ಕೇವಲ 48,999ರೂ ಬೆಲೆಗೆ ಖರೀದಿಸಬಹುದಾಗಿದೆ. ಇದು ಬ್ಯಾಂಕ್ ರಿಯಾಯಿತಿಯನ್ನು ಒಳಗೊಂಡಿರುತ್ತದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 3 5G ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ ದರದಲ್ಲಿ ಕೇವಲ 26,999ರೂ ಗಳಿಗೆ ದೊರೆಯುತ್ತಿದೆ. ಜೊತೆಗೆ ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್‌ ಅನ್ನು ವಿವಿಧ ಬ್ಯಾಂಕ್‌ ಕಾರ್ಡ್‌ಗಳ ರಿಯಾಯಿತಿ ಮೂಲಕ ಕೇವಲ 23,999ರೂ ಬೆಲೆಗೆ ಖರೀದಿಸಬಹುದಾಗಿದೆ.

ಲ್ಯಾಪ್‌ಟಾಪ್‌ಗಳಿಗೆ ಭರ್ಜರಿ ಡಿಸ್ಕೌಂಟ್‌
ಹೊಸ ಲ್ಯಾಪ್‌ಟಾಪ್‌ ಖರೀದಿಸುವ ಗ್ರಾಹಕರು ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಅದರಂತೆ Dell Vostro 3510 ಲ್ಯಾಪ್‌ಟಾಪ್‌ ಅನ್ನು ನೀವು ಕೇವಲ 47,490ರೂ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು Lenovo IdeaPad 3 ಲ್ಯಾಪ್‌ಟಾಪ್‌ ನಿಮಗೆ ರಿಯಾಯಿತಿ ದರದಲ್ಲಿ 34,990ರೂ (MRP 35,390ರೂ) ಗಳಿಗೆ ಸಿಗಲಿದೆ. ಇದಲ್ಲದೆ HP 15s (Intel Core i3) ಲ್ಯಾಪ್‌ಟಾಪ್‌ ಅನ್ನು ಕೇವಲ 37,990ರೂ (MRP 39,699ರೂ)ಬೆಲೆಗೆ ಖರೀದಿಸಬಹುದಾಗಿದೆ. ಇದರೊಂದಿಗೆ Asus Vivobook 16X ಲ್ಯಾಪ್‌ಟಾಪ್‌ ಅನ್ನು ಕೇವಲ 49,990ರೂ (MRP 68,990ರೂ)ಬೆಲೆಯಲ್ಲಿ ಲಭ್ಯವಾಗಲಿದೆ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಮೊಬೈಲ್‌ ಖರೀದಿಸೋರಿಗೆ ರಿಯಾಯಿತಿಗಳ  ಹಬ್ಬ

ಸ್ಮಾರ್ಟ್‌ಟಿವಿ ಖರೀದಿಸೋರಿಗೆ ಗುಡ್‌ನ್ಯೂಸ್‌
ಸ್ಮಾರ್ಟ್‌ಟಿವಿ ಖರೀದಿಸುವುದಕ್ಕೆ ಇದಕ್ಕಿಂತ ಬೆಸ್ಟ್‌ ಟೈಂ ಮತ್ತೆ ಸಿಗೋದಿಲ್ಲ. ಏಕೆಂದರೆ ಅಮೆಜಾನ್‌ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ಆಫರ್‌ ನೀಡಲಾಗುತ್ತಿದೆ. ಅದರಂತೆ ನೀವು ಒನ್‌ಪ್ಲಸ್‌ 43 ಇಂಚಿನ 4K LED TVಯನ್ನು ರಿಯಾಯಿತಿ ದರದಲ್ಲಿ ಕೇವಲ 23,990ರೂ ಬೆಲೆಗೆ ಖರೀದಿಸಬಹುದಾಗಿದೆ. ಅದೇ ರೀತಿ, Vu 55-ಇಂಚಿನ GloLED ಸರಣಿ 4K LED ಟಿವಿ ಪ್ರಸ್ತುತ 36,990ರೂ ಗಳಿಗೆ ದೊರೆಯಲಿದೆ. ಇನ್ನು LG 55-ಇಂಚಿನ 4K ಸ್ಮಾರ್ಟ್ OLED ಟಿವಿಯಂತಹ ದುಬಾರಿ ಮಾದರಿಗಳನ್ನು ಕೇವಲ 84,990ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಮೊಬೈಲ್‌ ಖರೀದಿಸೋರಿಗೆ ರಿಯಾಯಿತಿಗಳ  ಹಬ್ಬ

ಇದಲ್ಲದೆ ನೀವು ಅಮೆಜಾನ್‌ ಎಕೋ ಡಾಟ್ (4 ನೇ ಜನ್, ಗಡಿಯಾರದೊಂದಿಗೆ) ಅನ್ನು ಕೇವಲ 3,749ರೂ ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಕಿಂಡಲ್ ಓಯಸಿಸ್ (10 ನೇ ಜನ್) ಇದೀಗ 21,999ರೂ ಬದಲಿಗೆ 18,999ರೂ ಗಳಿಗೆ ದೊರೆಯಲಿದೆ. ಹಾಗೆಯೆ ಅಲೆಕ್ಸಿಯಾ ವಾಯ್ಸ್ ರಿಮೋಟ್ ಲೈಟ್ ಜೊತೆಗೆ ಫೈರ್ ಸ್ಟಿಕ್ ಲೈಟ್ 3,999ರೂ ಬದಲಿಗೆ 2,599 ರೂ.ಗಳಿಗೆ ಖರೀದಿಸಬಹುದಾಗಿದೆ. ಇದೆಲ್ಲದರ ಜೊತೆಗೆ ಅಮೆಜಾನ್‌ ಸೇಲ್‌ ಸಮಯದಲ್ಲಿ ನೀವು ಅರ್ಹ ಸಾಧನಗಳನ್ನು ವಿನಿಮಯ ಮಾಡಿಕೊಳ್ಳುವಾಗ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Best Mobiles in India

English summary
Amazon Great Republic Day sale is live, you can avail of discounts on several smartphones such as the iPhone 13,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+