Amazon Great Republic Day sale: ರೆಫ್ರಿಜಿರೇಟರ್‌ಗಳ ಮೇಲೆ 45% ವರೆಗೆ ಡಿಸ್ಕೌಂಟ್ ಲಭ್ಯ!
ಮಕರ ಸಂಕ್ರಾಂತಿ ಹಬ್ಬಕ್ಕೂ ಒಂದು ದಿನ ಮುಂಚಿತವಾಗಿಯೇ ಅಮೆಜಾನ್ (Amazon)ತಾಣದಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಲೈವ್ ಆಗಿದೆ. ಈ ಮೂಲಕ ಹೊಸ ವರ್ಷದ ಮೊದಲ ಮನೆಗೆ ಏನಾದರೂ ಖರೀದಿಸಬೇಕೆಂದು ಕೊಂಡವರಿಗೆ ಸಿಹಿಸುದ್ದಿ ಸಿಕ್ಕಿದೆ. ಏಕೆಂದರೆ ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಎಲ್ಲಾ ರೀತಿಯ ಪ್ರಾಡಕ್ಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗ್ತಿದೆ.
ಹೌದು, ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ವ್ಯಾಪಕ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳು ಲಭ್ಯವಿವೆ. ಇದರಲ್ಲಿ ನೀವು ಉತ್ತಮ ಗುಣಮಟ್ಟದ ರೆಫ್ರಿಜರೇಟರ್ ಖರೀದಿಸಬೇಕೆಂದುಕೊಂಡಿದ್ದರೆ ನಿಮಗೆ ಅತ್ಯಾಕಷ್ಕ ಡಿಸ್ಕೌಂಟ್ ದೊರೆಯಲಿದೆ. ಹಾಗಾದ್ರೆ ಅಮೆಜಾನ್ ತಾಣದಲ್ಲಿ ಡಿಸ್ಕೌಂಟ್ ಪಡೆದುಕೊಂಡಿರುವ ರೆಫ್ರಿಜರೆಟರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

LG 655 L ಫ್ರಾಸ್ಟ್-ಫ್ರೀ ಇನ್ವರ್ಟರ್ Wi-Fi ಸೈಡ್-ಬೈ-ಸೈಡ್ ರೆಫ್ರಿಜರೇಟರ್
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ LG 655 L ಫ್ರಾಸ್ಟ್-ಫ್ರೀ ಇನ್ವರ್ಟರ್ Wi-Fi ಸೈಡ್-ಬೈ-ಸೈಡ್ ರೆಫ್ರಿಜರೇಟರ್ 40% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ 1,50,699ರೂ M.R.P. ಹೊಂದಿರುವ ರೆಫ್ರಿಜಿರೇಟರ್ ಕೇವಲ 90,990ರೂ ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ರೆಫ್ರಿಜರೇಟರ್ ಸೈಡ್-ಬೈ ಸೈಡ್ ರೆಫ್ರಿಜರೇಟರ್ ಟೆಂಪರ್ಡ್ ಗ್ಲಾಸ್ ಶೆಲ್ಫ್‌ಗಳೊಂದಿಗೆ ಬರುತ್ತದೆ. ಇದು ವೈಫೈ ಸಂಪರ್ಕ, ಡಿಯೋಡರೈಸರ್ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಗೋದ್ರೇಜ್ 564 ಎಲ್ ಫ್ರಾಸ್ಟ್ ಫ್ರೀ ಮಲ್ಟಿ ಏರ್ ಫ್ಲೋ ಸಿಸ್ಟಮ್ ಸೈಡ್-ಬೈ-ಸೈಡ್ ರೆಫ್ರಿಜರೇಟರ್
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಗೋದ್ರೇಜ್ 564 ಎಲ್ ಫ್ರಾಸ್ಟ್ ಫ್ರೀ ಮಲ್ಟಿ ಏರ್ ಫ್ಲೋ ಸಿಸ್ಟಮ್ ಸೈಡ್-ಬೈ-ಸೈಡ್ ರೆಫ್ರಿಜರೇಟರ್ 39% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ 90,000ರೂ ಎಂ.ಅರ್.ಪಿ ಬೆಲೆಯ ರೆಫ್ರಿಜಿರೇಟರ್ ಕೇವಲ 54,990ರೂ ಬೆಲೆಗೆ ದೊರೆಯಲಿದೆ. ಇನ್ನು ಈ ರೆಫ್ರಿಜಿರೇಟರ್ ಮಲ್ಟಿ ಏರ್‌ಫ್ಲೋ ಫೀಚರ್ಸ್‌ನೊಂದಿಗೆ ಬರಲಿದೆ. ಇದು ಗಾಳಿಯು ಸಮವಾಗಿ ವಿತರಿಸಲ್ಪಟ್ಟಿದೆ ಎಂದು ಖಚಿತಪಡಿಸುತ್ತದೆ. ಜೊತೆಗೆ ಎಲ್ಇಡಿ ಡಿಸ್‌ಪ್ಲೇ ಕಂಟ್ರೋಲ್ ಪ್ಯಾನಲ್ ನೊಂದಿಗೆ ಬರುತ್ತದೆ.

Voltas Beko 472 L ಸೈಡ್ ಬೈ ಸೈಡ್ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್
ಅಮೆಜಾನ್ ಸೇಲ್‌ನಲ್ಲಿ Voltas Beko 472 L ಸೈಡ್ ಬೈ ಸೈಡ್ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್ 35% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ 79,990ರೂ M.R.P ಹೊಂದಿರುವ ಈ ಡಿವೈಸ್ 52,000ರೂ ಬೆಲೆಗೆ ಲಭ್ಯವಾಗುತ್ತಿದೆ. ಈ ಪ್ರೀಮಿಯಂ ರೆಫ್ರಿಜರೇಟರ್ ವೇಗವಾದ ಕೂಲಿಂಗ್ ಮತ್ತು ಹೊಂದಾಣಿಕೆಯ ಗಾಜಿನ ಕಪಾಟನ್ನು ಹೊಂದಿದೆ. ಫ್ರಿಜ್ ಮಲ್ಟಿ ಫ್ಲೋ ಏರ್ ಸಿಸ್ಟಮ್, ಡ್ಯುಯಲ್ ಟ್ವಿಸ್ಟ್ ಟ್ರೇಯನ್ನು ಒಳಗೊಂಡಿದೆ.
ಹೈಯರ್ 596L ಫ್ರಾಸ್ಟ್ ಫ್ರೀ ಇನ್ವರ್ಟರ್ ಸೈಡ್ ಬೈ ಸೈಡ್ ರೆಫ್ರಿಜರೇಟರ್
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಹೈಯರ್ 596L ಫ್ರಾಸ್ಟ್ ಫ್ರೀ ಇನ್ವರ್ಟರ್ ಸೈಡ್ ಬೈ ಸೈಡ್ ರೆಫ್ರಿಜರೇಟರ್ 41% ರಿಯಾಯಿತಿಯ ನಂತರ 59,990 ರೂಗಳಲ್ಲಿ ಲಭ್ಯವಿದೆ.
ಹೈಯರ್‌ನ ರೆಫ್ರಿಜರೇಟರ್ ಪರಿಣಿತ ಇನ್ವರ್ಟರ್ ತಂತ್ರಜ್ಞಾನ ಮತ್ತು ದೊಡ್ಡ ತರಕಾರಿ ಬಾಕ್ಸ್‌ನೊಂದಿಗೆ ಬರುತ್ತದೆ. ಇದು ಡಿಯೋ ಫ್ರೆಶ್ ತಂತ್ರಜ್ಞಾನವನ್ನು ಹೊಂದಿದ್ದು, ಆಹಾರವನ್ನು 21 ದಿನಗಳವರೆಗೆ ತಾಜಾವಾಗಿರಿಸುತ್ತದೆ ಎಂದು ಹೇಳುತ್ತದೆ.

ಹಿಸೆನ್ಸ್ 564 L ಇನ್ವರ್ಟರ್ ಫ್ರಾಸ್ಟ್-ಫ್ರೀ ಸೈಡ್-ಬೈ-ಸೈಡ್ ಡೋರ್ ರೆಫ್ರಿಜರೇಟರ್
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಹಿಸೆನ್ಸ್ 564 L ಇನ್ವರ್ಟರ್ ಫ್ರಾಸ್ಟ್-ಫ್ರೀ ಸೈಡ್-ಬೈ-ಸೈಡ್ ಡೋರ್ ರೆಫ್ರಿಜರೇಟರ್ 39% ರಿಯಾಯಿತಿ ಪಡೆದುಕೊಂಡಿದೆ. ಇದರಿಂದ ಕೇವಲ 45,990ರೂಗಳಲ್ಲಿ ಲಭ್ಯವಾಗುತ್ತಿದೆ. ಇನ್ನು ರೆಫ್ರಿಜರೇಟರ್ ಆಟೋ-ಡಿಫ್ರಾಸ್ಟ್ ಕಾರ್ಯವನ್ನು ಹೊಂದಿದೆ.


Click it and Unblock the Notifications








