Home
ಸುದ್ದಿಜಾಲ

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌: ಇಯರ್‌ಬಡ್ಸ್‌ ಮೇಲೆ ಸಿಗಲಿದೆ 80% ಡಿಸ್ಕೌಂಟ್‌!

ನಿಮ್ಮ ಸ್ಮಾರ್ಟ್‌ಫೋನ್‌ ಜೊತೆಗೊಂದು ಇಯರ್‌ಫೋನ್‌ ಖರೀದಿಸಬೇಕೆಂದು ಕೊಂಡಿದ್ದೀರಾ? ಇನ್ಯಾಕೇ ತಡ ಕೂಡಲೇ ಅಮೆಜಾನ್‌ ತಾಣಕ್ಕೆ ಬೇಟಿ ನೀಡಿ. ಯಾಕಂದ್ರೆ ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ನಲ್ಲಿ ಇಯರ್‌ಫೋನ್‌ಗಳಿಗೆ ಬಿಗ್‌ ಆಫರ್‌ ನೀಡಲಾಗ್ತಿದೆ. ಜನಪ್ರಿಯ ಬ್ರ್ಯಾಂಡ್‌ಗಳ ಇಯರ್‌ಬಡ್ಸ್‌ಗಳು ಕೂಡ ಇದೀಗ ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯವಾಗ್ತಿವೆ.

ಹೌದು, ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ನಲ್ಲಿ ಇಯರ್‌ಬಡ್ಸ್‌ಗಳ ಮೇಲೆ ವಿಶೇಷ ಆಫರ್‌ಗಳನ್ನು ನೀಡಲಾಗ್ತಿದೆ. ಅತಿ ಕಡಿಮೆ ಬೆಲೆಗೆ ನಿಮ್ಮ ನೆಚ್ಚಿನ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳನ್ನು ಖರೀದಿಸಬಹುದಾಗಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ನಲ್ಲಿ ವಿಶೇಷ ಆಫರ್‌ ಪಡೆದುಕೊಂಡಿರುವ ಇಯರ್‌ಬಡ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌: ಇಯರ್‌ಬಡ್ಸ್‌ ಮೇಲೆ ಸಿಗಲಿದೆ 80% ಡಿಸ್ಕೌಂಟ್

ಫ್ಲೆಕ್ಸ್‌ನೆಸ್ಟ್ ಫ್ಲೆಕ್ಸ್‌ಬಡ್ಸ್‌

ಫ್ಲೆಕ್ಸ್‌ನೆಸ್ಟ್ ಫ್ಲೆಕ್ಸ್‌ಬಡ್ಸ್‌ ಅಮೆಜಾನ್‌ ತಾಣದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಂಡಿದೆ. ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ನಲ್ಲಿ ಫ್ಲೆಕ್ಸ್‌ನೆಸ್ಟ್ ಫ್ಲೆಕ್ಸ್‌ ಬಡ್ಸ್‌ 80% ಡಿಸ್ಕೌಂಟ್‌ ಪಡೆದುಕೊಂಡಿದ್ದು, ಕೇವಲ 1,999ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಆದರೆ ಈ ಇಯರ್‌ಬಡ್ಸ್‌ ಯಾವುದೇ ಅಪ್ಲಿಕೇಶನ್‌ ಅನ್ನು ಬೆಂಬಲಿಸುವುದಿಲ್ಲ ಎಂದು ಹೇಳಲಾಗಿದೆ.

ಒಪ್ಪೋ ಎನ್ಕೋ ಏರ್‌ 3

ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ ಖರೀದಿಸುವುದಕ್ಕೆ ಇದಕ್ಕಿಂತ ಬೆಸ್ಟ್‌ ಟೈಂ ಇಲ್ಲ. ಯಾಕಂದ್ರೆ ಇ-ಕಾಮರ್ಸ್‌ ತಾಣದಲ್ಲಿ ಒಪ್ಪೋ ಎನ್ಕೋ ಏರ್‌ 3 ಇಯರ್‌ಬಡ್ಸ್‌ ಅತ್ಯಾಕರ್ಷಕ ಆಫರ್‌ನಲ್ಲಿ ಲಭ್ಯವಾಗ್ತಿದೆ. ಇದನ್ನು ನೀವು ಕೇವಲ 2,999 ರೂ. ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶ ಸಿಗಲಿದೆ. ಇನ್ನು ಈ ಇಯರ್‌ಬಡ್ಸ್‌ ಅನ್ನು HeyMelody ಅಪ್ಲಿಕೇಶನ್ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಜೊತೆಗೆ ಈ ಇಯರ್‌ಬಡ್ಸ್‌ ಆಪಲ್ ಏರ್‌ಪಾಡ್‌ಗಳಂತಹ ಹಾರ್ಡ್ ಕೇಸ್ ವಿನ್ಯಾಸವನ್ನು ಪಡೆದಿದೆ.

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌: ಇಯರ್‌ಬಡ್ಸ್‌ ಮೇಲೆ ಸಿಗಲಿದೆ 80% ಡಿಸ್ಕೌಂಟ್

ರಿಯಲ್‌ಮಿ ಬಡ್ಸ್ ಏರ್ 3 ನಿಯೋ

ರಿಯಲ್‌ಮಿ ಬಡ್ಸ್ ಏರ್ 3 ನಿಯೋ ಇಯರ್‌ಬಡ್ಸ್‌ ಅಮೆಜಾನ್‌ ತಾಣದಲ್ಲಿ 46% ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಇದನ್ನು ನೀವು ಕೇವಲ 1,899 ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಉತ್ತಮವಾದ ಇನ್-ಲೈನ್ ಕಂಟ್ರೋಲರ್‌ಗಳನ್ನು ಹೊಂದಿದೆ. ಜೊತೆಗೆ ಯಾವುದೇ ಅಲಂಕಾರಗಳಿಲ್ಲದ ಕಾರ್ಯಕ್ಷಮತೆಯನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಸೂಕ್ತವಾಗಿದೆ.

ಜಬ್ರಾ ಎಲೈಟ್ 2

ಜಬ್ರಾ ಎಲೈಟ್ 2 ಅಮೆಜಾನ್‌ ತಾಣದಲ್ಲಿ 59% ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಈ ಇಯರ್‌ಬಡ್ಸ್‌ ಅನ್ನು ನೀವು ಕೇವಲ 2,470 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್‌ ಸಾಕಷ್ಟು ಸ್ಪಷ್ಟತೆ ಮತ್ತು ಬಾಸ್‌ನೊಂದಿಗೆ ಉತ್ತಮ ಆಡಿಯೊವನ್ನು ನೀಡಲಿದೆ. ಇದು ಚಾರ್ಜಿಂಗ್‌ ಕೇಸ್‌ನಲ್ಲಿ 21 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಜೊತೆಗೆ ಬಳಕೆದಾರರಿಗೆ ಅತ್ಯುತ್ತಮ ಆಡಿಯೋ ಆಲಿಸುವಿಕೆಯನ್ನು ನೀಡಲಿದೆ.

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌: ಇಯರ್‌ಬಡ್ಸ್‌ ಮೇಲೆ ಸಿಗಲಿದೆ 80% ಡಿಸ್ಕೌಂಟ್

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌

ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ ನೀವು ಖರೀದಿಸಬಹುದಾದ ಅತ್ಯುತ್ತಮ ಇಯರ್‌ಬಡ್ಸ್‌ಗಳಲ್ಲಿ ಒಂದಾಗಿದೆ. ಇನ್ನು ಈ ಇಯರ್‌ಬಡ್ಸ್‌ ರಿಯಾಯಿತಿ ದರದಲ್ಲಿ ಕೇವಲ 2,799 ರೂ ಬೆಲೆಗೆ ಲಭ್ಯವಾಗಲಿದೆ. ಇದು ಡೀಫಾಲ್ಟ್ ಆಡಿಯೋ ಭಾರವಾದ ಬಾಸ್ ಕಡೆಗೆ ವಾಲುತ್ತದೆ, ಇದಲ್ಲದೆ ಈ ಇಯರ್‌ಬಡ್ಸ್‌ ನಿಮಗೆ 24 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿದೆ.

ಬೋಟ್‌ ಏರ್‌ಡೂಪ್ಸ್‌ 181

ಬೋಟ್‌ ಏರ್‌ಡೂಪ್ಸ್‌ 181 ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ನಲ್ಲಿ 67% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದು ಇನ್-ಇಯರ್ ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್ ಆಗಿದ್ದು, ENx ಟೆಕ್, ಬೀಸ್ಟ್ ಮೋಡ್ ಅನ್ನು ಒಳಗೊಂಡಿದೆ. ಜೊತೆಗೆ ಮೈಕ್, ASAP ಚಾರ್ಜ್, 20H ಪ್ಲೇಟೈಮ್, ಬ್ಲೂಟೂತ್ v5.2, IPX4 ಮತ್ತು IWP ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

Best Mobiles in India

English summary
Amazon great summer sale : discounts on best wireless earbuds upto 80% discounts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+