Home
ಸುದ್ದಿಜಾಲ

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌: ಫೋನ್‌ಗಳ ಮೇಲೆ ಸಿಗಲಿದೆ 40% ಡಿಸ್ಕೌಂಟ್‌!

ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ ತನ್ನ ವಿಶೇಷ ರಿಯಾಯಿತಿ ಸೇಲ್‌ಗಳಿಗೆ ಹೆಸರುವಾಸಿಯಾಗಿದೆ. ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆ ಊಹೆಗೂ ಮೀರಿದ ಡಿಸ್ಕೌಂಟ್‌ ನೀಡುತ್ತಾ ಬಂದಿರುವ ಅಮೆಜಾನ್‌ ಇದೀಗ ಗ್ರೇಟ್‌ ಸಮ್ಮರ್‌ ಸೇಲ್‌ ನಡೆಸುವುದಕ್ಕೆ ತಯಾರಿ ನಡೆಸಿದೆ. ಈ ಸೇಲ್‌ ಡೇಟ್‌ ಇನ್ನು ಬಹಿರಂಗವಾಗಿಲ್ಲವಾದರೂ ಸದ್ಯದಲ್ಲೇ ಶುರುವಾಗೋದು ಪಕ್ಕಾ ಆಗಿದೆ.

ಹೌದು, ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ ಶೀಘ್ರದಲ್ಲೇ ಶುರುವಾಗಲಿದೆ. ಈ ಸೇಲ್‌ ಡೇಟ್‌ ಅಧಿಕೃತವಾಗಿಲ್ಲವಾದರೂ ಸೇಲ್‌ನ ಟೀಸರ್‌ ಈಗಾಗಲೇ ಬಹಿರಂಗವಾಗಿದೆ. ಇನ್ನು ಈ ಗ್ರೇಟ್‌ ಸಮ್ಮರ್‌ ಸೇಲ್‌ ಟೀಸರ್‌ನಲ್ಲಿ ಅನೇಕ ವಿವರಗಳು ಬಹಿರಂಗವಾಗಿದ್ದು, ಅದರಲ್ಲೂ ಫೋನ್‌ಗಳ ಮೇಲೆ 40% ಡಿಸ್ಕೌಂಟ್‌ ಲಭ್ಯವಾಗಲಿದೆ ಅನ್ನೊದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌: ಫೋನ್‌ಗಳ ಮೇಲೆ ಸಿಗಲಿದೆ 40% ಡಿಸ್ಕೌಂಟ್‌!

ಸ್ಮಾರ್ಟ್‌ಫೋನ್‌ಗಳಿಗೆ 40% ಡಿಸ್ಕೌಂಟ್‌

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ ಟೀಸರ್‌ ಪ್ರಕಾರ ಸೇಲ್‌ ಸಮಯದಲ್ಲಿ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ 40% ಡಿಸ್ಕೌಂಟ್‌ ದೊರೆಯಲಿದೆ ಅನ್ನೊದು ಟೀಸರ್‌ನಲ್ಲಿ ಬಹಿರಂಗವಾಗಿದೆ. ಇದರಲ್ಲಿ ಒನ್‌ಪ್ಲಸ್‌, ಸ್ಯಾಮ್‌ಸಂಗ್‌, ಶಿಯೋಮಿ, ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಸೇರಿವೆ. ಇದಲ್ಲದೆ ತಿಂಗಳಿಗೆ 1,555ರೂ.ಗಳಿಂದ ಪ್ರಾರಂಭವಾಗುವ ನೋ ಕಾಸ್ಟ್‌ EMI ಆಯ್ಕೆಗಳು ಕೂಡ ದೊರೆಯಲಿವೆ.

ಸ್ಮಾರ್ಟ್‌ವಾಚ್‌ಗಳಿಗೆ ಸಿಗಲಿದೆ 75% ಡಿಸ್ಕೌಂಟ್‌

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌ ಸಮಯದಲ್ಲಿ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳ ಮೇಲೆ 75% ಡಿಸ್ಕೌಂಟ್‌ ಲಭ್ಯವಾಗಲಿದೆ. ಇದರಿಂದ ನೀವು ಲ್ಯಾಪ್‌ಟಾಪ್‌ಗಳ ಮೇಲೆ 40,000 ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳ ಮೇಲೆ 60% ಡಿಸ್ಕೌಂಟ್‌ ಸಿಗಲಿದೆ. ಇದಲ್ಲದೆ ಹೆಡ್‌ಫೋನ್‌ಗಳ ಮೇಲೆ 75% ವರೆಗೆ ರಿಯಾಯಿತಿ ದೊರೆಯಲಿದೆ.

ಅಮೆಜಾನ್‌ ಗ್ರೇಟ್‌ ಸಮ್ಮರ್‌ ಸೇಲ್‌: ಫೋನ್‌ಗಳ ಮೇಲೆ ಸಿಗಲಿದೆ 40% ಡಿಸ್ಕೌಂಟ್‌!

ಇದಲ್ಲದೆ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವವರಿಗೆ ಗುಡ್‌ನ್ಯೂಸ್‌ ಅನ್ನು ನೀಡಲಿದೆ. ಬೇಸಿಗೆ ರಜೆಯ ಸಮಯದಲ್ಲಿ ಮನೆಗೊಂದು ಸ್ನಾರ್ಟ್‌ಟಿವಿ ತರಬೇಕೆಂದುಕೊಂಡವರಿಗೆ ಬಿಗ್‌ ಡಿಸ್ಕೌಂಟ್‌ ಲಭ್ಯವಾಗ್ತಿದೆ. ಸದ್ಯ ಟೀಸರ್‌ ಪ್ರಕಾರ ಸಮ್ಮರ್‌ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿ ಮತ್ತು ಉಪಕರಣಗಳ ಮೇಲೆ 60% ರಿಯಾಯಿತಿಯನ್ನು ನೀ ದೊರೆಯಲಿದೆ ಎನ್ನಲಾಗಿದೆ. ಜೊತೆಗೆ ವಾಷಿಂಗ್ ಮೆಷಿನ್‌ಗಳ ಮೇಲೆ 50% ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಇದೇ ಸಮಯದಲ್ಲಿ ಭಾರತದಲ್ಲಿ ಅಮೆಜಾನ್ ಪ್ರೈಮ್ ಚಂದಾದಾರಿಕೆ ಬೆಲೆ ಏರಿಕೆಯಾಗಿದೆ. ಹಳೆಯ ಬೆಲೆಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದೆ. ಹೀಗಾಗಿ ನೀವೇನಾದರೂ ಸದ್ಯ ಹೊಸದಾಗಿ ಅಮೆಜಾನ್‌ ಪ್ರೈಮ್‌ ಸದಸ್ಯತ್ವವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈಗ ನೀವು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಒಂದು ತಿಂಗಳ ಆರಂಭಿಕ ಯೋಜನೆಯ ಬೆಲೆ ಈಗ 299ರೂ. ರಿಂದ ಪ್ರಾರಂಭವಾಗುತ್ತದೆ. ಒಂದು ತಿಂಗಳ ಆರಂಭಿಕ ಯೋಜನೆಯ ಈ ಹಿಂದಿನ ಶುಲ್ಕ 179ರೂ. ಆಗಿತ್ತು. ಅದೇ ರೀತಿ ತ್ರೈಮಾಸಿಕ ಅಮೆಜಾನ್ ಪ್ರೈಮ್ ಯೋಜನೆಯ ಬೆಲೆ ಈಗ 599ರೂ. ಶುಲ್ಕವಾಗಲಿದೆ. ತ್ರೈಮಾಸಿಕ ಯೋಜನೆಯ ಈ ಹಿಂದಿನ ದರ 459ರೂ. ಆಗಿತ್ತು. ಹಾಗೆಯೇ ಅಮೆಜಾನ್‌ ವಾರ್ಷಿಕ ಹಾಗೂ ವಾರ್ಷಿಕ ಪ್ರೈಮ್ ಲೈಟ್ ಯೋಜನೆಗಳ ದರದಲ್ಲಿಯೂ ಏರಿಕೆ ಮಾಡಿದೆ. ಹೀಗಾಗಿ ವಾರ್ಷಿಕ ಅವಧಿಯ ಅಮೆಜಾನ್ ಪ್ರೈಮ್ ಸದಸ್ಯತ್ವದ ಬೆಲೆ 1,499 ರೂ, ಮತ್ತು ವಾರ್ಷಿಕ ಪ್ರೈಮ್ ಲೈಟ್ ಯೋಜನೆಯ ಬೆಲೆ 999ರೂ. ಆಗಿದೆ. ಈ ಬಗ್ಗೆ ಅಧಿಕೃತ ಸೈಟ್‌ನಲ್ಲಿ ತಿಳಿಸಲಾಗಿದೆ.

Best Mobiles in India

English summary
Amazon Great Summer Sale will begin soon in the country
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+