ಅಮೆಜಾನ್‌ನಿಂದ 'ಎಕ್ಸ್ಟ್ರಾ ಹ್ಯಾಪಿನೆಸ್‌ ಡೇಸ್‌ ಆಫರ್‌' ಘೋಷಣೆ! ಏನೆಲ್ಲಾ ಡಿಸ್ಕೌಂಟ್‌!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಗ್ರಾಹಕರಿಗೆ ಗುಡ್‌ ನ್ಯೂಸ್‌ ನೀಡಿದೆ. ಹಬ್ಬದ ಸೀಸನ್‌ನಲ್ಲಿ ನಡೆಸುತ್ತಿರುವ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಮತ್ತೊಂದು ಬಿಗ್‌ ಆಫರ್‌ ಅನ್ನು ಘೋಷಣೆ ಮಾಡಿದೆ. ಇದನ್ನು ಎಕ್ಸ್ಟ್ರಾ ಹ್ಯಾಪಿನೆಸ್‌ ಡೇಸ್‌ ಆಫರ್‌ ಎಂದು ಹೆಸರಿಸಲಾಗಿದ್ದು, ಈ ಆಫರ್‌ ಇಂದಿನಿಂದ (ಅಕ್ಟೋಬರ್‌ 8) ಲೈವ್‌ ಆಗಿದೆ. ಆಫರ್‌ ಅಡಿಯಲ್ಲಿ ಗ್ರಾಹಕರು ಇನ್ನು ಹೆಚ್ಚಿನ ರಿಯಾಯಿತಿಯಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳನ್ನು ಖರೀದಿಸಲು ಸಾಧ್ಯವಾಗಲಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಎಕ್ಸ್ಟ್ರಾ ಹ್ಯಾಪಿನೆಸ್‌ ಡೇಸ್‌ ಆಫರ್‌ ಅನ್ನು ನೀಡಲಾಗ್ತಿದೆ. ಈ ಆಫರ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಲಭ್ಯವಾಗಲಿದ್ದು, ನೀವು ಊಹಿಸಲಾಗದ ಬೆಲೆಯಲ್ಲಿ ನಿಮ್ಮ ಆಯ್ಕೆಯ ಡಿವೈಸ್‌ಗಳನ್ನು ಖರೀದಿಸಲು ಸಾಧ್ಯವಾಗಲಿದೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಟೆಕ್ನೋ, ಐಕ್ಯೂ ಮತ್ತು ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಕೂಡ ಡಿಸ್ಕೌಂಟ್‌ ಪಡೆದುಕೊಂಡಿವೆ. ಹಾಗಾದ್ರೆ ಅಮೆಜಾನ್‌ ಎಕ್ಸ್ಟ್ರಾ ಹ್ಯಾಪಿನೆಸ್‌ ಡೇಸ್‌ ಆಫರ್‌ನಲ್ಲಿ ಏನೆಲ್ಲಾ ಡಿಸ್ಕೌಂಟ್‌ ಲಭ್ಯ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಎಕ್ಸ್ಟ್ರಾ ಹ್ಯಾಪಿನೆಸ್‌ ಡೇಸ್‌ ಆಫರ್‌ನಲ್ಲಿ ನೀವು ವಿಶೇಷ ಡಿಸ್ಕೌಂಟ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ. ಇದರಲ್ಲಿ EMI ವಹಿವಾಟುಗಳ ಜೊತೆಗೆ ಆಕ್ಸಿಸ್‌ಬ್ಯಾಂಕ್‌, ಸಿಟಿಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 10% ಇನ್ಸಟಂಟ್‌ ಡಿಸ್ಕೌಂಟ್‌ ಪಡೆಯಬಹುದು. ಅಲ್ಲದೆ ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಬಜಾಜ್ ಫಿನ್‌ಸರ್ವ್ ಮತ್ತು ಅಮೆಜಾನ್ ಪೇ ಲೇಟರ್‌ನಲ್ಲಿ ನೋ ಕಾಸ್ಟ್‌ ಇಎಂಐ ಆಯ್ಕೆಯನ್ನು ಕೂಡ ಪಡೆಯಬಹುದಾಗಿದೆ.

ಅಮೆಜಾನ್‌

ಇನ್ನು ಇದೇ ಸಮಯದಲ್ಲಿ ಅಮೆಜಾನ್‌ ಪೇ UPI ಮೂಲಕ ಪಾವತಿ ಮಾಡುವ ಗ್ರಾಹಕರು 600ರೂ.ವರೆಗೆ ವೆಲ್ಕಮ್‌ ರಿವಾರ್ಡ್‌ಗಳನ್ನು ಪಡೆಯಲು ಸಾದ್ಯವಾಗಲಿದೆ ಎಂದು ಅಮೆಜಾನ್‌ ಹೇಳಿಕೊಂಡಿದೆ. ಇದರೊಂದಿಗೆ ಅಮೆಜಾನ್‌ ಹೇಳಿರುವಂತೆ ಸೀಮಿತ ಅವಧಿಯಲ್ಲಿ 'ಡೈಮಂಡ್ಸ್ ಧಮಾಕಾ'ವನ್ನು ಕೂಡ ಗ್ರಾಹಕರು ಪಡೆಯಲು ಅವಕಾಶ ಸಿಗಲಿದೆ. 1,500ರೂ ಮತ್ತು ಅದಕ್ಕಿಂತ ಹೆಚ್ಚಿನ ಬಿಲ್‌ನಲ್ಲಿ 150ರೂ. ವರೆಗಿನ ಕ್ಯಾಶ್‌ಬ್ಯಾಕ್ ಭರವಸೆ ನೀಡಿದೆ. ಇದಲ್ಲದೆ ಕೆಲವು ಆಯ್ದ ಐಟಂಗಳಲ್ಲಿ ಗ್ರಾಹಕರು "750 ಡೈಮಂಡ್ಸ್" ಅನ್ನು ರಿಡೀಮ್ ಮಾಡಬಹುದು.

ಅಮೆಜಾನ್‌

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಈಗಾಗಲೇ ಅಮೆಜಾನ್‌ ಎಕೋ ಪ್ರಾಡಕ್ಟ್‌ಗಳು ಮತ್ತು ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್‌ ಅನ್ನು ನೀಡುತ್ತಿದೆ. ಇದರಲ್ಲಿ ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ 32,999ರೂ. ಗೆ ಲಭ್ಯವಿದೆ. ಇನ್ನು ಐಕ್ಯೂ Z6 ಲೈಟ್‌ 5G ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ನಲ್ಲಿ 13,999ರೂ.ಗೆ ಮಾರಾಟವಾಗುತ್ತಿದೆ. ಇದರೊಂದಿಗೆ ಐಫೋನ್‌ 12 (64GB) ಕೂಡ ಬೆಲೆ ಕಡಿತವನ್ನು ಪಡೆದುಕೊಂಡಿದ್ದು, ಇದು 47,999ರೂ. ಬೆಲೆಯಲ್ಲಿ ದೊರೆಯಲಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಸೇಲ್‌ನಲ್ಲಿ ಐಫೋನ್‌ 12 128GB ಮಾಡೆಲ್ ಆಯ್ಕೆಗೆ 54,490ರೂ.ಗೆ ಲಭ್ಯವಿದೆ. ಇದಲ್ಲದೆ ಅಮೆಜಾನ್‌ ಕಿಂಡಲ್ (10 ನೇ ತಲೆಮಾರಿನ) ಆಯ್ಕೆಯು 6,499ರೂ. ಗಳಿಗೆ ಲಭ್ಯವಾಗಲಿದೆ. ಜೊತೆಗೆ ಅಮೆಜಾನ್‌ ಎಕೋ ಡಾಟ್ (3ನೇ ತಲೆಮಾರಿನ, ಕಪ್ಪು ಬಣ್ಣದ ಆಯ್ಕೆಯು) + ವಿಪ್ರೋ 9 ಡಬ್ಲ್ಯೂ ಎಲ್ಇಡಿ ಸ್ಮಾರ್ಟ್ ಕಲರ್ ಬಲ್ಬ್ ಕಾಂಬೊ ಬೆಲೆ 1,799 ರೂ.ಆಗಿದೆ. ಇದರೊಂದಿಗೆ ಇನ್ನು ಹಲವು ಗ್ಯಾಜೆಟ್ಸ್‌ಗಳನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಸೇಲ್‌ನ ಸಮಯದಲ್ಲಿ ಡೀಲ್‌ಗಳಲ್ಲಿ ಏರಿಳಿತವಾಗುವುದನ್ನು ಗ್ರಾಹಕರು ಗಮನಿಸುವುದು ಅಗತ್ಯವಾಗಿದೆ.

Best Mobiles in India

English summary
Amazon has announced 'Extra Happiness Days' offers:Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X