Home
ಸುದ್ದಿಜಾಲ

ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಘೋಷಣೆ ಮಾಡಿದ ಅಮೆಜಾನ್‌!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಸೇಲ್‌ಗಳನ್ನು ಆಯೋಜಿಸುವ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡೊರಿಗೆ ಬಿಗ್‌ ಡಿಸ್ಕೌಂಟ್‌ ನೀಡುತ್ತಾ ಬಂದಿದೆ. ಇನ್ನು ವಿಕೆಂಡ್‌, ಮಂತ್‌ಎಂಡ್‌ ಮಾತ್ರವಲ್ಲ ಹಬ್ಬ ಹರಿದಿನಗಳಲ್ಲೂ ವಿಶೇಷ ಡಿಸ್ಕೌಂಟ್‌ ಮೇಳಗಳನ್ನು ಅಮೆಜಾನ್‌ ಆಯೋಜಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ಅಮೆಜಾನ್‌ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಅನ್ನು ಘೋಷಿಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಭಾರತದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಅನ್ನು ಘೋಷಿಸಿದೆ. ಆದರೆ ಮಾರಾಟದ ದಿನಾಂಕವನ್ನು ಇನ್ನು ಕೂಡ ಬಹಿರಂಗಪಡಿಸಿಲ್ಲ. ಸದ್ಯ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 'ಕಮಿಂಗ್ ಸೂನ್' ಟ್ಯಾಗ್‌ನೊಂದಿಗೆ ಮಾರಾಟವನ್ನು ಘೋಷಿಸಿದೆ. ಇನ್ನು ಅಮೆಜಾನ್‌ ಪ್ರೈಮ್‌ ಸದಸ್ಯರಿಗೆ ಸೇಲ್‌ ಪ್ರಾರಂಭವಾಗುವ 24 ಗಂಟೆಗಳ ಮುಂಚಿತವಾಗಿ ಲೈವ್ ಮಾಡಲಾಗುತ್ತದೆ ಎಂದು ಹೇಳಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಏನೆಲ್ಲಾ ಆಫರ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಾಯಿತಿಗಳು ಮತ್ತು ಕೊಡುಗೆಗಳು

ರಿಯಾಯಿತಿಗಳು ಮತ್ತು ಕೊಡುಗೆಗಳು

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಮನೆ ಮತ್ತು ಅಡುಗೆ ಡಿವೈಸ್‌ಗಳ ಮೇಲೆ ರಿಯಾಯಿತಿ ದೊರೆಯಲಿದೆ. ಹಾಗೆಯೇ ಟಿವಿಗಳು ಮತ್ತು ದೊಡ್ಡ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಬಿಗ್‌ಗ ಡಿಸ್ಕೌಂಟ್‌ ದೊರೆಯಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಗ್ರಾಹಕರು ಸ್ಮಾರ್ಟ್‌ಫೋನ್‌ಗಳಲ್ಲಿ 40% ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಕ್ಯಾಮೆರಾಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ 70% ರಷ್ಟು ರಿಯಾಯಿತಿ ನೀಡಲಿದೆ. ಜೊತೆಗೆ ಅಮೆಜಾನ್‌ ಅಲೆಕ್ಸಾ, ಫೈರ್‌ಟಿವಿ ಮತ್ತು ಕಿಂಡಲ್‌ ಡಿವೈಸ್‌ಗಳ ಮೇಲೆ 50% ಡಿಸ್ಕೌಂಟ್‌ ಪಡೆಯಬಹುದು.

ಅಮೆಜಾನ್‌

ಇನ್ನು ಅಮೆಜಾನ್‌ ಈ ಸೇಲ್‌ನಲ್ಲಿ SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರಿಗೆ 10% ಹೆಚ್ಚುವರಿ ಪ್ರಯೋಜನವನ್ನು ನೀಡಲಿದೆ.ಇದಲ್ಲದೆ ಹೆಚ್ಚುವರಿಯಾಗಿ, ಈ ಸೇಲ್‌ 80 ಕ್ಕೂ ಹೆಚ್ಚು ಸ್ಯಾಮ್‌ಸಂಗ್‌, ಶಿಯೋಮಿ ಮತ್ತು ಟೆಕ್ನೋ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಇನ್ನು ಈ ಸೇಲ್‌ನಲ್ಲಿ ಬ್ಯಾಂಕ್ ಆಫರ್‌ಗಳನ್ನು ಸಹ ನೀಡುತ್ತದೆ. ಇದರಲ್ಲಿ SBI ಕಾರ್ಡ್‌ಗಳ ಮೇಲೆ ಹೆಚ್ಚುವರಿ ರಿಯಾಯಿತಿಗಳು, ಬಜಾಜ್ ಫಿನ್‌ಸರ್ವ್‌ನಲ್ಲಿ ನೋ ಕಾಸ್ಟ್ EMI ಆಫರ್‌ ಅನ್ನು ಸಹ ನೀಡಲಿದೆ ಎನ್ನಲಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಟಿವಿಗಳಲ್ಲಿ 16,000 ರೂಪಾಯಿಗಳವರೆಗೆ ಎಕ್ಸ್‌ಚೇಂಜ್‌ ಆಫರ್‌ ಅನ್ನು ಸಹ ನೀಡುವುದಾಗಿ ಹೇಳಿದೆ.

ಸ್ಮಾರ್ಟ್ ವಾಚ್‌ಗಳ ಮೇಲೆ ರಿಯಾಯಿತಿ

ಸ್ಮಾರ್ಟ್ ವಾಚ್‌ಗಳ ಮೇಲೆ ರಿಯಾಯಿತಿ

ಅಮೆಜಾನ್‌ ಸೇಲ್‌ನಲ್ಲಿ ಸ್ಮಾರ್ಟ್ ವಾಚ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡಲಿದೆ. ಅದರಲ್ಲೂ ಸ್ಮಾರ್ಟ್‌ವಾಚ್‌ಗಳಿಗೆ 60% ಡಿಸ್ಕೌಂಟ್‌ ದೊರೆಯಲಿದೆ ಎಂದು ಹೇಳಲಾಗಿದೆ. ಹಾಗೆಯೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳು 40,000ರೂ. ವರೆಗೆ ರಿಯಾಯಿತಿಯನ್ನು ಪಡೆಯಲಿವೆ. ಇದರೊಂದಿಗೆ ನೀವು 55% ರಿಯಾಯಿತಿಯೊಂದಿಗೆ ಮಾರಾಟದಲ್ಲಿ ಕನ್ಸೋಲ್ ಮತ್ತು PC ಗಳನ್ನು ಖರೀದಿಸಬಹುದು.

Best Mobiles in India

English summary
Amazon Great Republic Day sale is offering discounts on smartphones, electronics, home and kitchen devices, as well as TVs and large electronics items.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+