ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ ಅಮೆಜಾನ್ ಪ್ರೈಮ್!
ಒಟಿಟಿ ಪ್ಲಾಟ್‌ಫಾರ್ಮ್‌ಗಳು ವೀಕ್ಷಕರ ಅಭಿರುಚಿಯನ್ನೇ ಬದಲಾಯಿಸಿಬಿಟ್ಟಿವೆ. ಅಷ್ಟರ ಮಟ್ಟಿಗೆ ಇಂದು ಒಟಿಟಿ ಪ್ಲಾಟ್‌ಫಾರ್ಮ್‌ಗಳು ತಮ್ಮ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಅಮೆಜಾನ್ ಪ್ರೈಮ್ ಕೂಡ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಹಣ ಪಾವತಿ ಮಾಡುವ ಮೂಲಕ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಚಂದಾದಾರಿಕೆ ಯೋಜನೆಗಳನ್ನು ಸಹ ಪರಿಚಯಿಸಿದೆ. ಸದ್ಯ ಇದೀಗ ಅಮೆಜಾನ್ ಪ್ರೈಮ್ ಈಗಾಗಲೇ ತೆಗೆದುಹಾಕಿದ್ದ ಹಳೆಯ ಪ್ಲಾನ್ ಅನ್ನು ಮತ್ತೆ ಪರಿಚಯಿಸಿದೆ.

ಹೌದು, ಅಮೆಜಾನ್ ಭಾರತದಲ್ಲಿ ತನ್ನ ಜನಪ್ರಿಯ ಮಾಸಿಕ ಪ್ರೈಮ್ ಚಂದಾದಾರಿಕೆಯನ್ನು ಮತ್ತೆ ಪರಿಚಯಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮಾರ್ಗಸೂಚಿ ಅನ್ವಯ ತನ್ನ ಮಸಿಕ ಚಂದಾದಾರಿಕೆ ಪ್ಲಾನ್ ಅನ್ನು ತೆಗೆದುಹಾಕಿತ್ತು. ಇದಕ್ಕೆ ಬದಲಾಗಿ ಕೇವಲ ಮೂರು ತಿಂಗಳ ಮತ್ತು ವಾರ್ಷಿಕ ಪ್ರೈಮ್ ಚಂದಾದಾರಿಕೆಗಳನ್ನು ನೀಡುತ್ತಿತ್ತು. ಆದರೆ ಇದೀಗ 129ರೂ,ಗಳ ಮಾಸಿಕ ಪ್ರೈಮ್ ಚಂದಾದಾರಿಕೆ ಪ್ಲಾನ್ ಕಂಪನಿಯ ಸೈಟ್‌ನಲ್ಲಿ ಲೈವ್ ಆಗಿದೆ. ಹಾಗಾದ್ರೆ ಈ ಪ್ಲಾನ್ ಮತ್ತೆ ಲೈವ್ ಆಗಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್ ತನ್ನ ಮಾಸಿಕ ಯೋಜನೆಯನ್ನು ಕಳೆದ ವರ್ಷ ತೆಗೆದುಹಾಕಿತ್ತು. ಆರ್‌ಬಿಐನ ಮಾರ್ಗಸೂಚಿ ಪುನರಾವರ್ತಿತ ಆನ್‌ಲೈನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಹೆಚ್ಚುವರಿ ದೃಡೀಕರಣದ ಅನುಷ್ಠಾನದ ಕಾರಣದಿಂದ ಮಾಸಿಕ ಪ್ಲಾನ್ ತೆಗೆದುಹಾಕಲಾಗಿತ್ತು. ಆದರೆ ಇದೀಗ ಮತ್ತೆ ಮಸಿಕ ಪ್ರೈಮ್ ಚಂದಾದಾರಿಕೆ ಲೈವ್ ಆಗಿದೆ. ಆದರೆ ಈ ಪ್ಲಾನ್ ಅನ್ನು ಪಡೆಯಲು ಕೆಲವು ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ಎಲ್ಲಾ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಖರೀದಿಸಲು ಸಾಧ್ಯವಿಲ್ಲ ಅನ್ನೊದನ್ನ ಸಹ ಗಮನಿಸಬೇಕಿದೆ.

ಸದ್ಯ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್‌ಗಾಗಿ ಮೂರು ಚಂದಾದಾರಿಕೆ ಆಯ್ಕೆಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ವಾರ್ಷಿಕ ಯೋಜನೆಯು 999ರೂ,ಬೆಲೆ ಹೊಂದಿದೆ. ಮೂರು ತಿಂಗಳ ಚಂದಾದಾರಿಕೆ ಪ್ಲಾನ್ ರಿಯಾಯಿತಿ ದರದಲ್ಲಿ 387ರೂ. ಬದಲಿಗೆ 329ರೂ. ಬೆಲೆಯಲ್ಲಿ ದೊರೆಯಲಿದೆ. ಈ ಎರಡು ಪ್ಲಾನ್‌ಗಳನ್ನು ಅಮೆಜಾನ್ ಸೈಟ್ ನಿಂದ ಎಲ್ಲಾ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಖರೀದಿಸಬಹುದು. ಆದರೆ ಇದೀಗ 129ರೂ.ಗಳ ಮಾಸಿಕ ಪ್ಲಾನ್ ಪ್ರೈಮ್ ಚಂದಾದಾರಿಕೆ ಅಮೆಜಾನ್‌ನಲ್ಲಿ ಮತ್ತೆ ಲೈವ್ ಆಗಿದೆ. ಆದರೆ ಇದನ್ನು ಕ್ರೆಡಿಟ್ ಕಾರ್ಡ್‌ಗಳು ಅಥವಾ ಆಯ್ದ ಡೆಬಿಟ್ ಕಾರ್ಡ್‌ಗಳ ಮೂಲಕ ಮಾತ್ರ ಖರೀದಿಸಬಹುದಾಗಿದೆ.

ಇನ್ನು ಅಮೆಜಾನ್ 129 ಮಾಸಿಕ ಪ್ರೈಮ್ ಸದಸ್ಯತ್ವವನ್ನು ಆರ್‌ಬಿಐನ ಇ-ಆದೇಶ ಮಾರ್ಗಸೂಚಿಗಳನ್ನು ಅನುಸರಿಸಿದ ಬ್ಯಾಂಕುಗಳ ಮೂಲಕ ಮಾತ್ರ ಖರೀದಿಸಬಹುದಾಗಿದೆ. ಬದಲಾವಣೆಗಳನ್ನು ಅನುಸರಿಸದ ಬ್ಯಾಂಕುಗಳು ಸ್ವಯಂಚಾಲಿತ ಪಾವತಿಗಳಿಗಾಗಿ ಯಾವುದೇ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಈ ನಿಯಮದ ಬಗ್ಗೆ ತಿಳಿದಿಲ್ಲದವರಿಗೆ, ಆನ್‌ಲೈನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ದೃಡೀಕರಣದ ಹೆಚ್ಚುವರಿ ಅಂಶವನ್ನು (AFA) ಅನುಷ್ಠಾನಗೊಳಿಸುವಂತೆ ಕೇಳುತ್ತದೆ. ಇದನ್ನು ಅನುಸರಿಸಿದರೆ ಮಾತ್ರ ನೀವು ಹೊಸ ಮಾಸಿಕ ಪ್ರೈಮ್ ಪ್ಲಾನ್ ಅನ್ನು ಸಕ್ರಿಯಗೊಳಿಸಬಹುದಾಗಿದೆ.

ಸದ್ಯ ಆರ್‌ಬಿಐನ ಹೊಸ ಮಾರ್ಗಸೂಚಿಗಳಿಂದಾಗಿ, ಅಮೆಜಾನ್ ಮುಂದಿನ ಸೂಚನೆ ಬರುವವರೆಗೂ ಅಮೆಜಾನ್ ಪ್ರೈಮ್ ಫ್ರೀ ಟ್ರಯಲ್ ಗಾಗಿ ಹೊಸ ಸದಸ್ಯರ ಸೈನ್-ಅಪ್‌ಗಳನ್ನು ನಿಲ್ಲಿಸಿದೆ. ಆ ಬದಲಾವಣೆ ಇನ್ನೂ ಜಾರಿಯಲ್ಲಿದೆ. ಈ ಹೊಸ ಆರ್‌ಬಿಐ ಆದೇಶವು ವಹಿವಾಟುಗಳಿಗಾಗಿ ಒಂದು ಬಾರಿ AFA ಅನ್ನು ನಿಯೋಜಿಸಲು ಬ್ಯಾಂಕುಗಳನ್ನು ಕೇಳುತ್ತದೆ. ಕಟ್-ಆಫ್ ಮೇಲಿನ ವಹಿವಾಟುಗಳಿಗೆ ಪ್ರತಿ ಪಾವತಿಗೆ AFA ಅಗತ್ಯವಿರುತ್ತದೆ. ಈ ನಿಯಮ ಅಕ್ಟೋಬರ್ 1 ರಿಂದ ಜಾರಿಗೆ ಬಂದಿದೆ.

ಇನ್ನು ಅಮೆಜಾನ್ ಭಾರತದಲ್ಲಿ ಹೊಸದಾಗಿ ಪ್ರೈಮ್ ವಿಡಿಯೋ ಚಾನೆಲ್‌ಗಳನ್ನು ಘೋಷಿಸಿದೆ. ತನ್ನ ಪ್ರೈಮ್ ವೀಡಿಯೋ ಚಾನೆಲ್‌ಗಳು ಪ್ರೈಮ್ ಸದಸ್ಯರಿಗೆ 8 OTT ಅಪ್ಲಿಕೇಶನ್‌ಗಳನ್ನು ಒಳಗೊಂಡಿವೆ. ಈ ಅಪ್ಲಿಕೇಶನ್‌ಗಳು ಚಂದಾದಾರಿಕೆಯನ್ನು ಹೊಂದಿದ್ದು, ಒಂದೇ ಸೂರಿನಡಿಯಲ್ಲಿ ಪ್ರವೇಶಿಸಲು ಅನುಮತಿಸಲಿವೆ. ಇವುಗಳಲ್ಲಿ ಡಿಸ್ಕವರಿ+, ಲಯನ್ಸ್‌ಗೇಟ್ ಪ್ಲೇ, ಡಾಕ್ಯುಬೇ, ಇರೋಸ್ ನೌ, ಮುಬಿಐ, ಹೊಯಿಚೊಯ್, ಮನೋರಮಾ ಮ್ಯಾಕ್ಸ್, ಮತ್ತು ಶಾರ್ಟ್ಸ್ ಟಿವಿಯಂತಹ ಸ್ಟ್ರೀಮಿಂಗ್ ಆಪ್‌ಗಳು ಸೇರಿವೆ. ಹೊಸದಾಗಿ ಪ್ರಾರಂಭವಾಗಿರುವ ಅಮೆಜಾನ್ ಚಾನೆಲ್ ಸೇವೆಯು ತನ್ನ ಪ್ರೈಮ್ ಸದ್ಯಸರಿಗೆ ಸಾಕಷ್ಟು ಉಪಯುಕ್ತವಾಗಿದೆ. ತನ್ನ ಪ್ರೈಮ್ ಫ್ಲ್ಯಾಗ್‌ಶಿಪ್ ಲಾಯಲ್ಟಿ ಪ್ರೋಗ್ರಾಂ ಅನ್ನು ಬಳಸುವ ಗ್ರಾಹಕರಿಗೆ ಒಂದೇ ಇಂಟರ್‌ಫೇಸ್‌ನಲ್ಲಿ ಮಲ್ಟಿ ಸ್ಟ್ರೀಮಿಂಗ್ ಆಪ್‌ಗಳಿಗೆ ಚಂದಾದಾರರಾಗಲು ಇದು ಸಹಾಯ ಮಾಡಲಿದೆ. ಇನ್ನು ಒಂದೇ ಸೂರಿನಡಿ ಒಟ್ಟುಗೂಡಿಸಲಾದ ಎಲ್ಲಾ ಅಪ್ಲಿಕೇಶನ್‌ಗಳಿಗೆ ಒಂದೇ ಬಿಲ್ಲಿಂಗ್ ಕಾರ್ಯವಿಧಾನ ಇರುತ್ತದೆ.


Click it and Unblock the Notifications








