ಅಮೆಜಾನ್ AI ನಿಂದ ಈಗ 2 ನಿಮಿಷಗಳ ವೀಡಿಯೊ ಕ್ರಿಯೇಟ್ ಮಾಡಬಹುದು!
ಇ-ಕಾಮರ್ಸ್ ತಂತ್ರಜ್ಞಾನ ದೈತ್ಯ ಅಮೆಜಾನ್ ಸಂಸ್ಥೆಯು ತನ್ನ ನೋವಾ ರೀಲ್ ಮಾದರಿಯಾಗಿ ಹೊಸ ಕೃತಕ ಬುದ್ಧಿಮತ್ತೆ (AI) ವೀಡಿಯೊ ಜನರೇಷನ್ ಮಾದರಿಯನ್ನು ಪರಿಚಯಿಸಿದೆ. ಈ ವಿಡಿಯೊ ಜನರೇಷನ್ ಮಾದರಿಯು ಒಂದೇ ಪ್ರಾಂಪ್ಟ್‌ನೊಂದಿಗೆ (ಬಳಕೆದಾರರು ನೀಡುವ ಸೂಚನೆ) ಎರಡು ನಿಮಿಷಗಳ ವೀಡಿಯೊ ಕಂಟೆಟ್ ಅನ್ನು ರಚಿಸಲಿದೆ ಎಂದು ಕಂಪನಿ ತಿಳಿಸಿದೆ.! ಹೌದು. ಅಮೆಜಾನ್ ನೋವಾ ರೀಲ್ 1.1 AI ಮಾದರಿಯನ್ನು ಘೋಷಿಸಿದೆ ಮತ್ತು ಅದರ ಸಾಮರ್ಥ್ಯಗಳನ್ನು ವಿವರಿಸಿದೆ. ಈ ಹೊಸ ಮಾದರಿಯು ಎರಡು ನಿಮಿಷಗಳ ವೀಡಿಯೊಗಳನ್ನು ರಚಿಸಬಹುದು, ಆದರೆ, ಅದು ನಿರಂತರ ಶಾಟ್ ಆಗಿರುವುದಿಲ್ಲ. ದೊಡ್ಡ ಭಾಷಾ ಮಾದರಿ (LLM) ಆರು-ಸೆಕೆಂಡ್-ಉದ್ದದ ಶಾಟ್‌ಗಳನ್ನು ರಚಿಸುತ್ತದೆ ಮತ್ತು ಒಂದೇ ವೀಡಿಯೊವು 120-ಸೆಕೆಂಡ್ ಮಾರ್ಕ್ ಅನ್ನು ತಲುಪಲು 20 ಅಂತಹ ಶಾಟ್‌ಗಳನ್ನು ಒಟ್ಟಿಗೆ ಒದಗಿಸಲಿದೆ ಎಂದು ಹೇಳಿದೆ.
ಅಮೆಜಾನ್‌ನ ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ಈ ಹೊಸ ನೋವಾ ರೀಲ್ 1.1 AI ಮಾದರಿಯನ್ನು ಘೋಷಿಸಲಾಗಿದ್ದು, ಇದರಲ್ಲಿನ ದೊಡ್ಡ ಭಾಷಾ ಮಾದರಿ (LLM) ಆರು ಸೆಕೆಂಡ್‌ಗಳ ಅವಧಿಯ ಸಣ್ಣ ಸಣ್ಣ ಶಾಟ್‌ಗಳನ್ನು ಉತ್ಪಾದಿಸುತ್ತದೆ. ಹೀಗೆ ರಚಿಸಲಾದ ಸುಮಾರು 20 ಶಾಟ್‌ಗಳನ್ನು ಒಟ್ಟುಗೂಡಿಸಿ 120 ಸೆಕೆಂಡ್‌ಗಳ (ಎರಡು ನಿಮಿಷ) ವೀಡಿಯೊವನ್ನು ಸಿದ್ಧಪಡಿಸುತ್ತದೆ ಎಂದು ಅಮೆಜಾನ್ ಹೇಳಿದೆ. ಕಳೆದ ವರ್ಷ ನಡೆದ ಅಮೆಜಾನ್‌ನ 'ರೀ ಇನ್ವೆಂಟ್' ಕಾರ್ಯಕ್ರಮದಲ್ಲಿ ಪರಿಚಯಿಸಲಾದ ಮೂಲ ನೋವಾ ರೀಲ್ ಮಾದರಿಯ ಮುಂದುವರಿದ ಆವೃತ್ತಿಯೇ ಈ ನೋವಾ ರೀಲ್ 1.1. ಈ ಹೊಸ ವೀಡಿಯೊ ಮಾದರಿಯು ಈ ಹಿಂದಿನ ಮಾದರಿಗಿಂತ ಉತ್ತಮ ಗುಣಮಟ್ಟ ಮತ್ತು ಕಡಿಮೆ ಲೇಟೆನ್ಸಿ (ವಿಳಂಬ) ಯೊಂದಿಗೆ ಬಂದಿದೆ. ಆದರೆ ಇದರ ಪ್ರಮುಖವಾದ ಅಪ್‌ಗ್ರೇಡ್ ಎಂದರೆ ಅದು ಒಂದೇ ಬಾರಿಗೆ ಉತ್ಪಾದಿಸಬಲ್ಲ ವೀಡಿಯೊ ಕಂಟೆಂಟ್‌ನ ಒಟ್ಟು ಅವಧಿಯಾಗಿದೆ.
ಪ್ರಸ್ತುತವಾಗಿ, ಈ AI ಮಾದರಿಯು ಅಮೆಜಾನ್‌ನ ಬೆಡ್‌ರಾಕ್ ಪ್ಲಾಟ್‌ಫಾರ್ಮ್ ಮೂಲಕ ಡೆವಲಪರ್‌ಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಲಭ್ಯವಿದೆ. ಬಳಕೆದಾರರು ಕೇವಲ ಒಂದು ಪ್ರಾಂಪ್ಟ್ ಅನ್ನು ನಮೂದಿಸಿ, ಅಂತಿಮ ವೀಡಿಯೊಗಾಗಿ ಯಾವ ಶಾಟ್‌ಗಳನ್ನು ಆಯ್ಕೆ ಮಾಡಬೇಕೆಂದು AI ಗೆ ನಿರ್ಧರಿಸಲು ಬಿಡಬಹುದು. ಅಥವಾ, ಯೋಜನೆಯ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಂಡು, ಪ್ರತಿಯೊಂದು ಶಾಟ್‌ಗೂ ನಿರ್ದಿಷ್ಟವಾದ ಪ್ರಾಂಪ್ಟ್‌ಗಳನ್ನು ಸೇರಿಸುವ ಆಯ್ಕೆಯನ್ನು ಸಹ ನೀಡಲಾಗಿದೆ ಎಂದು ಅಮೆಜಾನ್ ತಿಳಿಸಿದೆ. ಸಿಂಗಲ್ ಪ್ರಾಂಪ್ಟ್ ಮೋಡ್ ಅನ್ನು ಬೆಡ್‌ರಾಕ್‌ನಲ್ಲಿ 'ಮಲ್ಟಿಶಾಟ್ ಆಟೋಮೇಟೆಡ್' ಎಂದು ಕರೆಯಲಾಗುತ್ತದೆ. ಈ ಮೋಡ್‌ನಲ್ಲಿ ಬಳಕೆದಾರರು 4,000 ಅಕ್ಷರಗಳವರೆಗಿನ ಪ್ರಾಂಪ್ಟ್ ಅನ್ನು ನೀಡಬಹುದು. ಅದಕ್ಕೆ ಅನುಗುಣವಾಗಿ ನೋವಾ ರೀಲ್ 1.1 AI ಮಾದರಿಯು ಮಲ್ಟಿ-ಶಾಟ್ ವೀಡಿಯೊವನ್ನು ರಚಿಸುತ್ತದೆ ಎಂದು ಹೇಳಲಾಗಿದೆ.

ಗಮನಾರ್ಹವಾಗಿ, ಇದು ಕೇವಲ ಪಠ್ಯವನ್ನು ಮಾತ್ರ ಇನ್‌ಪುಟ್ ಆಗಿ ಸ್ವೀಕರಿಸುತ್ತದೆ. ಮತ್ತೊಂದೆಡೆ, ಮಲ್ಟಿ-ಪ್ರಾಂಪ್ಟ್ ಮೋಡ್ ಅನ್ನು 'ಮಲ್ಟಿಶಾಟ್ ಮ್ಯಾನುಯಲ್' ಎಂದು ಕರೆಯಲಾಗುತ್ತದೆ. ಇದು ಬಳಕೆದಾರರಿಗೆ ಪ್ರತಿ ಶಾಟ್‌ಗೂ 512 ಅಕ್ಷರಗಳವರೆಗಿನ ಪ್ರಾಂಪ್ಟ್‌ಗಳನ್ನು ಸೇರಿಸಲು ಅವಕಾಶ ನೀಡುತ್ತದೆ. ಇದರ ಜೊತೆಗೆ, ಬಳಕೆದಾರರು ಪ್ರತಿ ಶಾಟ್‌ಗೆ ಉಲ್ಲೇಖವಾಗಿ ಚಿತ್ರವನ್ನು ಸಹ ಅಪ್‌ಲೋಡ್ ಮಾಡಬಹುದು. ಆದರೆ ಈ ಚಿತ್ರಗಳು 1280x720p ರೆಸಲ್ಯೂಶನ್‌ನಲ್ಲಿ ಇರಬೇಕಾಗುತ್ತದೆ.ಅಮೆಜಾನ್ ಈ AI ಮಾದರಿಯನ್ನು ಮುಖ್ಯವಾಗಿ ಜಾಹೀರಾತು, ಮಾರ್ಕೆಟಿಂಗ್, ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಗುರಿಯಾಗಿಸಿ ಬಿಡುಗಡೆ ಮಾಡಿದೆ. ನೋವಾ ರೀಲ್ 1.1 ಗ್ರಾಹಕೀಕರಣದೊಂದಿಗೆ ಬರುತ್ತದೆ ಮತ್ತು ಕ್ಯಾಮೆರಾ ಚಲನೆ, ಶಾಟ್‌ನ ವಿಷಯ ಮತ್ತು ಮುಂತಾದ ಅಂಶಗಳನ್ನು ನಿಯಂತ್ರಿಸಲು ಬಳಕೆದಾರರಿಗೆ ಅನುಮತಿಸುತ್ತದೆ ಎಂದು ಕಂಪನಿ ಹೇಳಿದೆ.
ಬೆಲೆಯ ಕುರಿತು ಮಾತನಾಡುವುದಾದರೆ, ಅಮೆಜಾನ್‌ನ ನೋವಾ ರೀಲ್ ಮಾದರಿಗಳು (1.0 ಮತ್ತು 1.1 ಸೇರಿದಂತೆ) ಪ್ರತಿ ಸೆಕೆಂಡ್‌ಗೆ ವೀಡಿಯೊ ಉತ್ಪಾದಿಸಲು $0.08 (ಸುಮಾರು ರೂ. 6.9) ವೆಚ್ಚವಾಗುತ್ತದೆ. ಇದರರ್ಥ ಎರಡು ನಿಮಿಷಗಳ (120 ಸೆಕೆಂಡ್‌ಗಳು) ವೀಡಿಯೊವನ್ನು ರಚಿಸಲು $9.6 (ಸುಮಾರು ರೂ. 830) ವೆಚ್ಚವಾಗುತ್ತದೆ. ಇದು ಯಾವುದೇ ಪುನರಾವರ್ತನೆಗಳನ್ನು ಒಳಗೊಂಡಿರುವುದಿಲ್ಲ, ಏಕೆಂದರೆ ಅದನ್ನು ಪ್ರತ್ಯೇಕ ಯೋಜನೆಯಾಗಿ ಪರಿಗಣಿಸಲಾಗುತ್ತದೆ. ಅಮೆಜಾನ್ ವೀಡಿಯೊಗಳಲ್ಲಿ ಇನ್‌ಲೈನ್ ಎಡಿಟಿಂಗ್ ಆಯ್ಕೆಯನ್ನು ಸಹ ನೀಡುವುದಿಲ್ಲ. ಪ್ರಮುಖವಾಗಿ, ನೋವಾ ರೀಲ್ AI ಮಾದರಿಗೆ ತರಬೇತಿ ನೀಡಲು ಬಳಸಲಾದ ಡೇಟಾಸೆಟ್‌ನ ಮೂಲವನ್ನು ಅಮೆಜಾನ್ ಬಹಿರಂಗಪಡಿಸಿಲ್ಲ. ಆದಾಗ್ಯೂ, ಹಕ್ಕುಸ್ವಾಮ್ಯ ಉಲ್ಲಂಘನೆಯ ಯಾವುದೇ ಮೊಕದ್ದಮೆಗಳ ಸಂದರ್ಭದಲ್ಲಿ, ತನ್ನ ಪರಿಹಾರ ನೀತಿಯ ಭಾಗವಾಗಿ ಎಲ್ಲಾ ಅಮೆಜಾನ್ ವೆಬ್ ಸೇವೆಗಳ (AWS) ಕ್ಲೈಂಟ್‌ಗಳನ್ನು ರಕ್ಷಿಸಲಾಗುವುದು ಎಂದು ಕಂಪನಿ ಭರವಸೆ ನೀಡಿದೆ.


Click it and Unblock the Notifications








