ಭಾರತೀಯ ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಿದ ಅಮೆಜಾನ್‌!

|

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಅಮೆಜಾನ್‌ ಇಂಡಿಯಾ ಬಳಕೆದಾರರ ನೆಚ್ಚಿನ ತಾಣವಾಗಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಅಮೆಜಾನ್ ಭಾರತದಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ತನ್ನ ಇ-ರಿಟೇಲ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಸಮಯ ಕಳೆಯಲು ಬಳಕೆದಾರರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಕಂಪನಿಯು ತನ್ನ ವೆಬ್ ಆಧಾರಿತ ಪ್ಲಾಟ್‌ಫಾರ್ಮ್‌ನಲ್ಲಿ ಫೀಚರ್ಸ್ಡ್‌ ಆರ್ಟಿಕಲ್ಸ್‌ ಅನ್ನು ಪರಿಚಯಿಸಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಈ ಫೀಚರ್ಸ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಫೀಚರ್ಸ್‌ ಪ್ಲಾಟ್‌ಫಾರ್ಮ್‌ನ ಕಿಂಡಲ್ ಸ್ಟೋರ್ ವಿಭಾಗದಲ್ಲಿರಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಹೊಸ ಫಿಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಪರಿಚಯಿಸಿರುವ ಹೊಸ ಫೀಚರ್ಸ್‌ ಟ್ರೆಂಡಿಂಗ್ ಲೇಖನಗಳು, ಮನರಂಜನೆ, ರಾಜಕೀಯ ಮತ್ತು ಆಡಳಿತ, ಕ್ರೀಡೆ, ವ್ಯವಹಾರ ಮತ್ತು ಹಣಕಾಸು, ಆರೋಗ್ಯ ಮತ್ತು ಫಿಟ್‌ನೆಸ್ ಸೇರಿದಂತೆ ವಿವಿಧ ವಿಷಯಗಳ ಫಿಚರ್ಸ್ಡ್‌ ಆರ್ಟಿಕಲ್ಸ್‌ಗಳು, ವ್ಯಾಖ್ಯಾನ ಮತ್ತು ಅಭಿಪ್ರಾಯಗಳಿಗೆ ಬಳಕೆದಾರರಿಗೆ ಪ್ರವೇಶವನ್ನು ನೀಡುತ್ತದೆ. ಸಮಾಜ ಮತ್ತು ಲೈಫ್‌ಸ್ಟೈಲ್‌, ಪುಸ್ತಕಗಳು, ಆಹಾರ, ಕಾದಂಬರಿ, ಕರೆಂಟ್ ಅಫೇರ್ಸ್, ಪ್ರಯಾಣ ಮತ್ತು ಆಟೋ ಸೇರಿದಂತೆ ಹಲವು ವಿಚಾರಗಳ ಲೇಖನಗಳು ಲಭ್ಯವಿರಲಿವೆ.

ಅಮೆಜಾನ್

ಇನ್ನು ಈ ಫೀಚರ್ಸ್‌ನಲ್ಲಿರುವ ಕೆಲವು ಲೇಖನಗಳು ಅಮೆಜಾನ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿವೆ. ಸದ್ಯ ಕಂಪನಿಯು ಕೆಲವು ಕಿಂಡಲ್ ಬಳಕೆದಾರರಿಗೆ ಅದರ ಬಗ್ಗೆ ತಿಳಿಸಲು ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತಿದೆ ಎಂದು ಟೆಕ್ಕ್ರಂಚ್ ವರದಿ ಮಾಡಿದೆ. ಸಧ್ಯ ಅಮೆಜಾನ್ ವಕ್ತಾರರು, ದೇಶದಲ್ಲಿ ತನ್ನ ಬಳಕೆದಾರರಿಗೆ ಹೆಚ್ಚು ಆಕರ್ಷಕವಾಗಿ ಅನುಭವವನ್ನು ನೀಡಲು ವಿವಿಧ ವಿಷಯಗಳ ಲೇಖನಗಳನ್ನು ಒದಗಿಸುವ ಹೊಸ ಸೇವೆಯನ್ನು ಪರೀಕ್ಷಿಸುತ್ತಿದ್ದೇವೆ ಎಂದು ಹೇಳಿದೆ.

ಅಮೆಜಾನ್

ನಮ್ಮ ಗ್ರಾಹಕರಿಗೆ ಹೊಸ ಮತ್ತು ಆಕರ್ಷಕವಾಗಿರುವ ಅನುಭವಗಳನ್ನು ಸೃಷ್ಟಿಸುವತ್ತ ನಾವು ಗಮನ ಹರಿಸಿದ್ದೇವೆ ಮತ್ತು ಈ ಪ್ರಯತ್ನದ ಭಾಗವಾಗಿ, ಪ್ರಸ್ತುತ ವ್ಯವಹಾರಗಳು, ಪುಸ್ತಕಗಳು, ವ್ಯವಹಾರ, ಮನರಂಜನೆ, ಕ್ರೀಡೆ ಮತ್ತು ಜೀವನಶೈಲಿಯಂತಹ ವಿವಿಧ ವಿಷಯಗಳ ಕುರಿತು ಲೇಖನಗಳನ್ನು ತರುವ ಹೊಸ ಸೇವೆಯನ್ನು ನಾವು ಪರೀಕ್ಷಿಸುತ್ತಿದ್ದೇವೆ. ಇನ್ನು ವಿಶೇಷವೆಂದರೆ, ಕಂಪನಿಯು ತನ್ನ ಅಮೆಜಾನ್ ಮಿನಿ ಟಿವಿ ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಈ ಫೀಚರ್ಸ್‌ ಹೊರ ಬರಲಿದೆ. ಈ ಸೇವೆಯು ಅಮೆಜಾನ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
Amazon has quietly rolled out a new feature on its platform in India. This new feature is aimed at prompting users to spend more time on its e-retail platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X