ಪುಲ್ವಾಮಾ ದಾಳಿಯ ಆರೋಪಿ ಬಂಧನಕ್ಕೆ ಅಮೆಜಾನ್‌ ಸಹಾಯ..!

By Gizbot Bureau
|

ಭಾರತದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ವಿದೇಶಿ ಬಹುರಾಷ್ಟ್ರೀಯ ಕಂಪನಿಯೊಂದು ಅಹಕಾರ ನೀಡಿರುವ ಅಪರೂಪದ ಘಟನೆ ನಡೆದಿದೆ. ಇ-ಕಾಮರ್ಸ್ ದೈತ್ಯ ಅಮೆಜಾನ್ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಆರೋಪಿಗಳನ್ನು ಬಂಧಿಸಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಸಹಾಯ ಮಾಡಿದೆ. ಫೆಬ್ರವರಿ 14, 2019 ರಂದು ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ಶ್ರೀನಗರದ 19 ವರ್ಷದ ವೈಜ್-ಉಲ್-ಇಸ್ಲಾಂನನ್ನು ಬಂಧಿಸಲು ಅಮೆಜಾನ್‌ ಎನ್‌ಐಎಗೆ ಹೇಗೆ ಸಹಾಯ ಮಾಡಿದೆ ಎಂಬುದು ಮುಂದೆ ನೋಡಿ.

ಎನ್‌ಐಎ ಜೊತೆ ಮಾಹಿತಿ ಹಂಚಿಕೊಂಡ ಅಮೆಜಾನ್‌ ಇಂಡಿಯಾ

ಎನ್‌ಐಎ ಜೊತೆ ಮಾಹಿತಿ ಹಂಚಿಕೊಂಡ ಅಮೆಜಾನ್‌ ಇಂಡಿಯಾ

ಅಮೆಜಾನ್‌ ಇಂಡಿಯಾ, ಮನವಿ ಮೇರೆಗೆ ತನ್ನ ಇ-ಕಾಮರ್ಸ್ ಸೈಟ್‌ನಲ್ಲಿ ಶಾಪಿಂಗ್ ಮಾಡಿದ ಆರೋಪಿಗಳ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದೊಂದಿಗೆ ಮಾಹಿತಿ ಹಂಚಿಕೊಂಡಿದೆ.

ವೆಬ್‌ಸೈಟ್‌ನಿಂದ ಐಇಡಿಗಾಗಿ ರಾಸಾಯನಿಕಗಳ ಖರೀದಿ

ವೆಬ್‌ಸೈಟ್‌ನಿಂದ ಐಇಡಿಗಾಗಿ ರಾಸಾಯನಿಕಗಳ ಖರೀದಿ

2019ರ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ ಬಳಸಲಾದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ತಯಾರಿಸಲು ಆರೋಪಿಗಳು ಆನ್‌ಲೈನ್‌ನಲ್ಲಿ ರಾಸಾಯನಿಕ ಉತ್ಪನ್ನಗಳನ್ನು ಖರೀದಿಸಿದ್ದರು.

ಅಮೋನಿಯಂ ಪುಡಿ, ಬ್ಯಾಟರಿಗಳ ಖರೀದಿ

ಅಮೋನಿಯಂ ಪುಡಿ, ಬ್ಯಾಟರಿಗಳ ಖರೀದಿ

ಆರಂಭಿಕ ವಿಚಾರಣೆ ಸಮಯದಲ್ಲಿ, ಐಇಡಿ ತಯಾರಿಸಲು ಅಮೋನಿಯಂ ಪೌಡರ್‌ನಂತಹ ರಾಸಾಯನಿಕಗಳು, ಬ್ಯಾಟರಿಗಳು, ಬಟ್ಟೆ ಮತ್ತು ಇತರ ಪರಿಕರಗಳನ್ನು ಸಂಗ್ರಹಿಸಲು ತನ್ನ ಆನ್‌ಲೈನ್ ಶಾಪಿಂಗ್ ಖಾತೆಯನ್ನು ಬಳಸಿದ್ದೇನೆ ಎಂದು ಎನ್‌ಐಎ ಮುಂದೆ ವೈಜ್ ಬಾಯಿ ಬಿಟ್ಟಿದ್ದಾನೆ.

ಬ್ಯಾಂಕ್ ವಿವರಗಳಿಂದ ತನಿಖೆಗೆ ಸಹಾಯ

ಬ್ಯಾಂಕ್ ವಿವರಗಳಿಂದ ತನಿಖೆಗೆ ಸಹಾಯ

ಆನ್‌ಲೈನ್ ಶಾಪಿಂಗ್ ಖಾತೆಯಲ್ಲಿ ವ್ಯವಹಾರಕ್ಕೆ ಬಳಸಿದ್ದ ಬ್ಯಾಂಕ್ ವಿವರಗಳು ಪುಲ್ವಾಮಾ ದಾಳಿಯ ಆರೋಪಿಯ ಬಂಧನಕ್ಕೆ ಎನ್‌ಐಎ ಅಧಿಕಾರಿಗಳಿಗೆ ನೆರವಾದವು.

ವಸ್ತುಗಳನ್ನು ಭಯೋತ್ಪಾದಕರಿಗೆ ನೇರವಾಗಿ ತಲುಪಿಸಿದ ವೈಜ್‌

ವಸ್ತುಗಳನ್ನು ಭಯೋತ್ಪಾದಕರಿಗೆ ನೇರವಾಗಿ ತಲುಪಿಸಿದ ವೈಜ್‌

ಆನ್‌ಲೈನ್‌ನಲ್ಲಿ ಐಇಡಿ ತಯಾರಿಸಲು ಬೇಕಾದ ಉತ್ಪನ್ನಗಳನ್ನು ಖರೀದಿಸಿದ ನಂತರ, ವೈಜ್ ವೈಯಕ್ತಿಕವಾಗಿ ಜೈಷ್‌-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರಿಗೆ ಆ ವಸ್ತುಗಳನ್ನು ತಲುಪಿಸಿದ್ದಾನೆ ಎನ್ನಲಾಗಿದೆ.

ಸ್ಫೋಟಕಗಳ ಖರೀದಿ ಬಗ್ಗೆ ಅಮೆಜಾನ್ ಪ್ರತಿಕ್ರಿಯೆ

ಸ್ಫೋಟಕಗಳ ಖರೀದಿ ಬಗ್ಗೆ ಅಮೆಜಾನ್ ಪ್ರತಿಕ್ರಿಯೆ

ಸ್ಫೋಟಕಗಳ ಆನ್‌ಲೈನ್ ಖರೀದಿಯ ಕುರಿತು ಪ್ರತಿಕ್ರಿಯಿಸಿರುವ ಅಮೆಜಾನ್ ಇಂಡಿಯಾ ವಕ್ತಾರರು, "ಅಮೆಜಾನ್ ಇಲ್ಲಿನ ಎಲ್ಲಾ ನಿಯಮಗಳು ಮತ್ತು ಕಾನೂನುಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ. ಮಾರುಕಟ್ಟೆಯಾಗಿ, ಇಲ್ಲಿಗೆ ಅನ್ವಯವಾಗುವ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳು ಮತ್ತು ಸುರಕ್ಷತಾ ಮಾನದಂಡಗಳೊಂದಿಗೆ.ಮಾರಾಟ ಮಾಡುವ ಎಲ್ಲಾ ಪಾಲುದಾರರ ಉತ್ಪನ್ನಗಳ ಪಟ್ಟಿಯ ಅಗತ್ಯವಿರುತ್ತದೆ. ಈ ನಿರ್ದಿಷ್ಟ ಪ್ರಕರಣದ ಬಗ್ಗೆ ನಮಗೆ ತಿಳಿದಿಲ್ಲ ಮತ್ತು ಈ ಹಂತದಲ್ಲಿ ಯಾವುದೇ ವಿವರಗಳನ್ನು ನೀಡಲು ಸಾಧ್ಯವಿಲ್ಲ. ನಾವು ಯಾವುದೇ ತನಿಖೆಗೆ ಸಹಕರಿಸುತ್ತೇವೆ ಎಂದು ತಿಳಿಸಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ 5 ಜನರನ್ನು ಬಂಧಿಸಿದ ಎನ್ಐಎ

ಪುಲ್ವಾಮಾ ದಾಳಿಯಲ್ಲಿ 5 ಜನರನ್ನು ಬಂಧಿಸಿದ ಎನ್ಐಎ

ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಇದುವರೆಗೂ 5 ಆರೋಪಿಗಳನ್ನು ಎನ್‌ಐಎ ಬಂಧಿಸಿದೆ. ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್ ಸೇರಿ ಪುಲ್ವಾಮಾ ದಾಳಿ ಸಂಚುಕೋರರಿಗೆ ಆಶ್ರಯ ನೀಡಿದ್ದಕ್ಕಾಗಿ ಪುಲ್ವಾಮಾ ನಿವಾಸಿ ಮೊಹಮ್ಮದ್ ಅಬ್ಬಾಸ್ ರಾಥರ್ ಎಂಬಾತನನ್ನು ಸಂಸ್ಥೆ ಬಂಧಿಸಿದೆ.

Most Read Articles
Best Mobiles in India

Read more about:
English summary
Amazon Helped Catch Pulwama Accused: Everything You Need To Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X