ಅಮೆಜಾನ್‌ನಲ್ಲಿ ಈ 3 ದಿನ ಮೊಬೈಲ್ ಖರೀದಿಸುವವರಿಗೆ ಬಂಪರ್!..ಇದೇ ಮೊದಲು ಇಂತಹ ಆಫರ್!!

Written By:

ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಡಿಸ್ಕೌಂಟ್ಸ್ ಲಭ್ಯವಿರುವ ಅಮೆಜಾನ್ ' ದಿ ಗ್ರೇಟ್ ಇಂಡಿಯನ್ ಸೇಲ್' ಆನ್‌ಲೈನ್ ಮೊಬೈಲ್ ಖರೀದಿಗೆ ಮತ್ತೊಂದು ರೂಪಕೊಡಲು ಮುಂದಾಗಿದೆ.! ಮೊಬೈಲ್ ಖರೀದಿಸುವ ಗ್ರಾಹಕರಿಗೆ ಮತ್ತೊಂದು ಅತ್ಯುತ್ತಮ ಅವಕಾಶವನ್ನು ಇದೀಗ ಅಮೆಜಾನ್ ನೀಡಿದೆ.!!

ಅಮೆಜಾನ್‌ನಲ್ಲಿ ಈ 3 ದಿನ ಮೊಬೈಲ್ ಖರೀದಿಸುವವರಿಗೆ ಬಂಪರ್!..ಇದೇ ಮೊದಲು ಇಂತಹ ಆಫರ್

ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಅಮೆಜಾನ್ ''ಪ್ರೈಸ್ ಗ್ಯಾರೆಂಟಿ'' ಎಂಬ ವಿಶ್ವಾಸ ಮೂಡಿಸಲು ಮುಂದಾಗಿದೆ.! ಮೊಬೈಲ್ ಖರೀದಿಸಿದ ನಂತರ ಮೊಬೈಲ್ ಬೆಲೆ ಇಳಿಕೆಯಾದಲ್ಲಿ ಹೆಚ್ಚಿನ ಹಣವನ್ನು ವಾಪಸ್ ನೀಡುವುದಾಗಿ ಅಮೆಜಾನ್ ಹೇಳಿದೆ.!! ಹಾಗಾದರೆ, ಏನಿದು ಪ್ರೈಸ್ ಗ್ಯಾರೆಂಟಿ? ಬಳಕೆದಾರರಿಗೆ ಏನೆಲ್ಲಾ ಲಾಭ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಪ್ರೈಸ್ ಗ್ಯಾರೆಂಟಿ?

ಏನಿದು ಪ್ರೈಸ್ ಗ್ಯಾರೆಂಟಿ?

ಇಂದು ಖರೀದಿಸಿದ ಮೊಬೈಲ್ ಒಂದೆರಡು ದಿನಗಳಲ್ಲಿಯೇ ಸಾವಿರಾರು ರೂಪಾಯಿಗಳ ಬೆಲೆ ಕಳೆದುಕೊಳ್ಳುತ್ತದೆ.! ಇದು ಮೊಬೈಲ್ ಖರೀದಿದಾರರ ದೊಡ್ಡ ಚಿಂತೆಯಾಗಿರುವುದರಿಂದ ಮೊಬೈಲ್ ಬೆಲೆ ಕಡಿಮೆಯಾದರೆ ಆ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಅಮೆಜಾನ್ ಮುಂದಾಗಿದೆ.! ಇದಕ್ಕೆ ''ಪ್ರೈಸ್ ಗ್ಯಾರೆಂಟಿ'' ಎಂಬ ಹೆಸರಿಟ್ಟಿದೆ.!!

ದಿ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಮಾತ್ರ!!

ದಿ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಮಾತ್ರ!!

ಅಮೆಜಾನ್ ಆಯೋಜಿಸಿರುವ ವರ್ಷದ ಮೊದಲ ದಿ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಮಾತ್ರ "ಪ್ರೈಸ್ ಗ್ಯಾರೆಂಟಿ'' ಯೋಜನೆಯನ್ನು ನೀಡಲಾಗಿದೆ. ಭಾರೀ ಸ್ಮಾರ್ಟ್‌ಫೋನ್ ಮಾರಾಟದ ಮೇಲೆ ಕಣ್ಣಿಟ್ಟಿರುವ ಅಮೆಜಾನ್ ಗ್ರಾಹಕರ ವಿಶ್ವಾಸ ಮೂಡಿಸಲು ಈ ಯೋಜನೆ ಕೈಗೆತ್ತಿಕೊಂಡಿದೆ.!!

Oppo A83 ಸ್ಮಾರ್ಟ್‌ಫೋನ್ ಹೇಗಿದೆ..?
ಬಳಕೆದಾರರಿಗೆ ಏನೆಲ್ಲಾ ಲಾಭ?

ಬಳಕೆದಾರರಿಗೆ ಏನೆಲ್ಲಾ ಲಾಭ?

ಆನ್‌ಲೈನ್ ಮೂಲಕ ಮೊಬೈಲ್ ಖರಿದಿಸುವ ಗ್ರಾಹಕರಿಗೆ ''ಪ್ರೈಸ್ ಗ್ಯಾರೆಂಟಿ'' ಯೋಜನೆ ವರವಾಗಿದೆ.!! ಮೊಬೈಲ್ ಖರೀದಿಸದ 15 ದಿನಗಳ ಒಳಗಾಗಿ ಯಾವುದೇ ಮೊಬೈಲ್ ಬೆಲೆ ದಿಢೀರ್ ಇಳಿಕೆಯಾದರೆ ಗ್ರಾಹಕರು ನೀಡಿದ ಉಳಿದ ಮೊತ್ತವನ್ನು ಅಮೆಜಾನ್ ವಾಪಸ್ ನೀಡಲಿದೆ.!!

ಹಣ ವಾಪಸ್ ಹೇಗೆ ಸಿಗಲಿದೆ?

ಹಣ ವಾಪಸ್ ಹೇಗೆ ಸಿಗಲಿದೆ?

ದಿ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ನೀವು ಪಾವತಿಸಿದ ಮೊತ್ತವೇನಾದರೂ "ಪ್ರೈಸ್ ಗ್ಯಾರೆಂಟಿ'' ಯೋಜನೆಯಡಿ ನಿಮಗೆ ಲಭ್ಯವಿದ್ದರೆ ಆ ಹಣ ನಿಮ್ಮ ಅಮೆಜಾನ್ ಪೇ ವಾಲೆಟ್ ಖಾತೆಗೆ ಬಂದು ಬೀಳಲಿದೆ. ಈ ಹಣವನ್ನು ಅಮೆಜಾನ್‌ನಲ್ಲಿ ಇನ್ನಿತರ ವಸ್ತುಗಳನ್ನು ನೀವು ಖರೀದಿಸಬಹುದಾಗಿದೆ.!!

ಪ್ರೈಸ್ ಗ್ಯಾರೆಂಟಿ ಹೇಗೆ?

ಪ್ರೈಸ್ ಗ್ಯಾರೆಂಟಿ ಹೇಗೆ?

ಅಮೆಜಾನ್ ದಿ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಖರೀದಿಸಿದ ಮೊಬೈಲ್‌ಗಳು 15 ದಿನಗಳ ಪ್ರೈಸ್ ಗ್ಯಾರೆಂಟಿ ಹೊಂದಿರುತ್ತವೆ. 15 ದಿನಗಳ ನಂತರ ಗ್ಯಾರೆಂಟಿ ಸಮಯ ಮುಗಿದ ನಂತರದ 72 ಗಂಟೆಗಳಲ್ಲಿ ಹಣ ನಿಮಗೆ ವಾಪಸ್ ಸಿಗಲಿದೆ.!! ಆದರೆ, ಅಮೆಜಾನ್ ಮೊಬೈಲ್ ಬೆಲೆಗಳು ಎಷ್ಟು ಕಡಿಮೆಯಾಗಿದೆ ಎಂದು ಹೇಗೆ ನಿರ್ಧರಿಸುತ್ತದೆ ಎಂಬ ಮಾಹಿತಿ ನೀಡಿಲ್ಲ.!!

ಓದಿರಿ:ಅಮೆಜಾನ್ ಇಂಡಿಯನ್ ಸೇಲ್!..ಇಂದು ಖರೀದಿಸಬಹುದಾದ ಬೆಸ್ಟ್ ಬಜೆಟ್ ಫೋನ್‌ಗಳಿವು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Amazon India Announces 15-Day Price Guarantee Scheme on Select Smartphones During The Great Indian Sale. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot