Amazon ‘Electronics Days’: ಗೇಮಿಂಗ್ ಲ್ಯಾಪ್‌ಟಾಪ್‌ಗಳಿಗೆ ವಿಶೇಷ ರಿಯಾಯಿತಿ!
ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಆನ್‌ಲೈನ್ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಸೇಲ್‌ಗಳನ್ನು ನಡೆಸುತ್ತಲೇ ಬಂದಿದೆ. ಸದ್ಯ ಇದೀಗ ಅಮೆಜಾನ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ ಅನ್ನು ಘೋಷಿಸಿದೆ. ಇನ್ನು ಈ ಸೇಲ್‌ನಲ್ಲಿ ಬೋಟ್, ಇಂಟೆಲ್, ಎಚ್‌ಪಿ, ಸೋನಿ, ಸ್ಯಾಮ್‌ಸಂಗ್, ಮಿ ಮತ್ತು ಹೆಚ್ಚಿನ ಬ್ರಾಂಡ್‌ಗಳ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ಗ್ರಾಹಕರು ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು, ಕ್ಯಾಮೆರಾಗಳು, ಫಿಟ್‌ನೆಸ್ ಟ್ರ್ಯಾಕರ್‌ಗಳು, ಮಾನಿಟರ್‌ಗಳು ಮತ್ತು ಹೆಚ್ಚಿನ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್ ಮಾರ್ಚ್ 29, 2021 ರವರೆಗೆ ಲೈವ್ ಆಗಿರಲಿದೆ.

ಹೌದು, ಅಮೆಜಾನ್ ತನ್ನ ಗ್ರಾಹಕರಿಗಾಗಿ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಗ್ರಾಹಕರು ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಸ್‌ಲ್ಯಾಂಡ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು 10% ತ್ವರಿತ ರಿಯಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ, ನೋ ಕಾಸ್ಟ್ ಇಎಂಐ ಮೂಲಕ ಹಾಗೂ ಎಕ್ಸಚೇಂಜ್ ಆಫರ್ ಮೂಲಕ ಸಹ ಹಲವು ಪ್ರಾಡಕ್ಟ್‌ಗಳನ್ನು ಖರೀದಿಸಬಹುದಾಗಿದೆ. ಇನ್ನು ಈ ಸೇಲ್‌ನಲ್ಲಿ ಯಾವೆಲ್ಲಾ ರಿಯಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಲೀಜನ್ 5 ಗೇಮಿಂಗ್ ಲ್ಯಾಪ್‌ಟಾಪ್
ಲೆನೊವೊ ಕಂಪೆನಿಯ ಲೆನೊವೊ ಲೀಜನ್ 5 ಸರಣಿಯ ಲ್ಯಾಪ್‌ಟಾಪ್ ಅನ್ನು ಅಮೆಜಾನ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ ಇದೀಗ ಕೇವಲ 80,990 ರೂ.ಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್ ಎಎಮ್‌ಡಿ ರೈಜನ್ 4000 ಸರಣಿ ಮೊಬೈಲ್ ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ ಎನ್‌ವಿಡಿಯಾ ಜೀಫೋರ್ಸ್ ಜಿಟಿಎಕ್ಸ್ ಗ್ರಾಫಿಕ್ಸ್, 3200MHz ಡಿಡಿಆರ್ 4 ಮೆಮೊರಿ, ಎಂ 2 ಎನ್‌ವಿಎಂ ಪಿಸಿಐ ಎಸ್‌ಎಸ್‌ಡಿ ಸ್ಟೋರೇಜ್ ಅನ್ನು ಪಡೆದುಕೊಂಡಿದೆ.

ಬೋಟ್ ಏರ್‌ಡೋಪ್ಸ್ 441 TWS ಇಯರ್‌ಬಡ್ಸ್
ಬೋಟ್ ಏರ್‌ಡೋಪ್ಸ್ 441 ಟಿಡಬ್ಲ್ಯೂಎಸ್ ಇಯರ್‌ಬಡ್ಸ್ ಐಡಬ್ಲ್ಯೂಪಿ (ಇನ್‌ಸ್ಟಾ ವೇಕ್ ಎನ್ 'ಪೇರ್) ತಂತ್ರಜ್ಞಾನ ಮತ್ತು ಇತ್ತೀಚಿನ ಬ್ಲೂಟೂತ್ ವಿ 5.0 ನೊಂದಿಗೆ ಬರುತ್ತವೆ. ಇನ್ನು ಈ ಇಯರ್‌ಬಡ್ಸ್ 1,999 ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಇಯರ್‌ಬಡ್ಸ್‌ನಲ್ಲಿ ಪ್ರತಿ ಇಯರ್‌ಬಡ್‌ಗೆ 35mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇಯರ್‌ಬಡ್‌ಗಳು ಪ್ರಯಾಣದಲ್ಲಿ 5 ಗಂಟೆಗಳ ಕಾಲ ಮತ್ತು ಕ್ಯಾರಿ-ಕಮ್-ಚಾರ್ಜ್ ಕೇಸ್‌ನೊಂದಿಗೆ ಹೆಚ್ಚುವರಿ 25 ಗಂಟೆಗಳ ಕಾಲ ಬ್ಯಾಟರಿ ನೀಡಬಹುದು ಎನ್ನಲಾಗಿದೆ.

ಪ್ಯಾನಾಸೋನಿಕ್ ಲುಮಿಕ್ಸ್ G7 ಮಿರರ್‌ಲೆಸ್ ಕ್ಯಾಮೆರಾ
ಪ್ಯಾನಸೋನಿಕ್ ಲುಮಿಕ್ಸ್ 4ಕೆ ಡಿಜಿಟಲ್ ಕ್ಯಾಮೆರಾವನ್ನು ಅಮೆಜಾನ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ 38,490 ರೂಗಳಲ್ಲಿ ಲಭ್ಯವಿದೆ. ಇನ್ನು ಈ ಕ್ಯಾಮೆರಾ ಡಿಎಂಸಿ ಜಿ7ಕೆ ಪ್ಯಾನಸೋನಿಕ್ ಪ್ರವರ್ತಿಸಿದ ಪರಸ್ಪರ ಬದಲಾಯಿಸಬಹುದಾದ ಲೆನ್ಸ್ ಕ್ಯಾಮೆರಾ (ಐಎಲ್ಸಿ) ಸ್ಟ್ಯಾಂಡರ್ಡ್ (ಮೈಕ್ರೋ ಫೋರ್ ಥರ್ಡ್ಸ್) ನಲ್ಲಿ ನಿರ್ಮಿಸಲಾದ 24 ಕ್ಕೂ ಹೆಚ್ಚು ಕಾಂಪ್ಯಾಕ್ಟ್ ಲೆನ್ಸ್ ಆಯ್ಕೆಗಳನ್ನು ಹೊಂದಿದೆ. ಅದರಲ್ಲೂ ಇದು ವಿಶೇಷವಾದ ಲುಮಿಕ್ಸ್ 4ಕೆ ಫೋಟೊ ಜೊತೆಗೆ ಬರುತ್ತದೆ. ಇದು ವೀಡಿಯೊದಿಂದ ಯಾವುದೇ ಕ್ಷಣವನ್ನು ವಿರಾಮಗೊಳಿಸುವ ಮೂಲಕ ಹೆಚ್ಚಿನ ರೆಸಲ್ಯೂಶನ್ ಮುದ್ರಿಸಬಹುದಾದ ಫೋಟೋಗಳನ್ನು ತಯಾರಿಸಲು ಸಹಾಯ ಮಾಡುತ್ತದೆ.


Click it and Unblock the Notifications








