ಅಮೆಜಾನ್ 'ಗ್ರ್ಯಾಂಡ್ ಗೇಮಿಂಗ್ ಡೇಸ್' ಸೇಲ್: ಗೇಮಿಂಗ್ ಲ್ಯಾಪ್‌ಟಾಪ್‌ಗಳಿಗೆ ವಿಶೇಷ ರಿಯಾಯಿತಿ!
ಜನಪ್ರಿಯ ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಗ್ರಾಹಕರಿಗೆ ಹಲವು ವಿಶೇಷ ಸೇಲ್‌ಗಳನ್ನ ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಮೆಜಾನ್ 'ಗ್ರ್ಯಾಂಡ್ ಗೇಮಿಂಗ್ ಡೇಸ್' ಸೇಲ್ ಅನ್ನು ಪ್ರಕಟಿಸಿದೆ. ಈ ಸೇಲ್‌ನಲ್ಲಿ ಗೇಮಿಂಗ್ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಮಾನಿಟರ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್ ಈಗಾಗಲೇ ಲೈವ್ ಆಗಿದ್ದು, ಇದೇ ಮಾರ್ಚ್ 25 ರವರೆಗೆ ನಡೆಯಲಿದೆ.

ಹೌದು, ಅಮೆಜಾನ್ ಇಂಡಿಯಾ ಆನ್‌ಲೈನ್ ಗ್ರಾಹಕರಿಗಾಗಿ ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ಅನ್ನು ಆಯೋಜಿಸಿದೆ. ಇದರಲ್ಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು, ಮಾನಿಟರ್‌ಗಳು, ಅಪ್ಡೇಟೆಡ್ ಹೆಡ್‌ಫೋನ್‌ಗಳು, ಗೇಮಿಂಗ್ ಕನ್ಸೋಲ್‌ಗಳು, ಗ್ರಾಫಿಕ್ ಕಾರ್ಡ್‌ಗಳು, ಜನಪ್ರಿಯ ಬ್ರಾಂಡ್‌ಗಳಾದ ಲೆನೊವೊ, ಏಸರ್, ಲಾಜಿಟೆಕ್, ಎಎಸ್ಯುಎಸ್, ಎಲ್‌ಜಿ, ಎಚ್‌ಪಿ, ಸೋನಿ, ಡೆಲ್, ಕೊರ್ಸೇರ್, ಕಾಸ್ಮಿಕ್ ಬೈಟ್, ಜೆಬಿಎಲ್ ಸೇರಿದಂತೆ ಹಲವು ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ದೊರೆಯಲಿದೆ. ಇನ್ನುಳಿದಂತೆ ಈ ಸೇಲ್‌ನಲ್ಲಿ ಯಾವೆಲ್ಲಾ ಲ್ಯಾಪ್ಟಾಪ್‌ಗಳನ್ನ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೇಮಿಂಗ್ ಲ್ಯಾಪ್‌ಟಾಪ್‌ಗಳು
ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್‌ನಲ್ಲಿ ಹೆಚ್‌ಪಿ ಪೆವಿಲಿಯನ್ ಗೇಮಿಂಗ್ ಲ್ಯಾಪ್‌ಟಾಪ್ ಮೇಲೆ ರಿಯಾಯಿತಿ ನೀಡಲಾಗಿದೆ. ಕಿರಿದಾದ ಅಂಚಿನ ಡಿಸ್‌ಪ್ಲೇ ಮತ್ತು ಕಸ್ಟಮ್-ಟ್ಯೂನ್ಡ್ ಆಡಿಯೊ ಹೊಂದಿರುವ ಲ್ಯಾಪ್‌ಟಾಪ್ ಅನ್ನು ಕೇವಲ 57,990 ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು ASUS TUF ಗೇಮಿಂಗ್ FX505DT ಲ್ಯಾಪ್‌ಟಾಪ್ ಸಹ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ. ಇದು 144Hz ಐಪಿಎಸ್-ಮಟ್ಟದ ನ್ಯಾನೊ ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿದ್ದು, AMD ರೈಜೆನ್ 7 ಪ್ರೊಸೆಸರ್ ಮತ್ತು ಎನ್‌ವಿಡಿಯಾ ಜೀಫೋರ್ಸ್ GTX1650 ಗ್ರಾಫಿಕ್ಸ್ ಚಾಲಿತ ಲ್ಯಾಪ್‌ಟಾಪ್ ಅನ್ನು ಒಳಗೊಂಡಿದೆ. ಇದನ್ನು ಕೇವಲ 59,990 ರೂ ಖರೀದಿಸಬಹುದು. ಇದಲ್ಲದೆ
ಎಂಎಸ್ಐ ಬ್ರಾವೋ ರೈಜೆನ್ ಲ್ಯಾಪ್‌ಟಾಪ್ ರಿಯಾಯಿತಿ ದರದಲ್ಲಿ 82,990. ರೂ.ಗಳಿಗೆ ದೊರೆಯಲಿದೆ.

ಗೇಮಿಂಗ್ ಡೆಸ್ಕ್‌ಟಾಪ್‌ಗಳು
ಇನ್ನು ಗೇಮಿಂಗ್ ಡೆಸ್ಕ್‌ಟಾಪ್‌ಗಳಲ್ಲಿ ಲೆನೊವೊ ಐಡಿಯಾ ಸೆಂಟರ್ G5 ಗೇಮಿಂಗ್ ಡೆಸ್ಕ್‌ಟಾಪ್ ಮೇಲೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದು 10 ನೇ ಜನರೇಷನ್ ಇಂಟರ್ ಕೋರ್ ಐ 5-10400 ಪ್ರೊಸೆಸರ್ ಅನ್ನು ಹೊಂದಿದ್ದು, 2.9GHz ಬೇಸ್ ಸ್ಪೀಡ್, 4.3GHz ಗರಿಷ್ಠ ವೇಗ, 6 ಕೋರ್, 12 MB ಸ್ಟೋರೇಜ್ 8GB RAM ಅನ್ನು ಹೊಂದಿದೆ. ಇದನ್ನು ಕೇವಲ 62,990 ರೂ ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ASUS ROG Strix: ROG Strix ಡೆಸ್ಕ್‌ಟಾಪ್ ಕೂಡ ಆಫರ್ ಅನ್ನು ಹೊಂದಿದೆ. ಇದು GT15 ವಿಂಡೋಸ್ 10 ಹೋಮ್ ಗೇಮಿಂಗ್ ಡೆಸ್ಕ್‌ಟಾಪ್‌ನೊಂದಿಗೆ ಬರುತ್ತದೆ. ಎನ್ವಿಡಿಯಾ ಜೀಫೋರ್ಸ್ ಜಿಟಿಎಕ್ಸ್ 1650 ಗ್ರಾಫಿಕ್ಸ್ ಕಾರ್ಡ್ ಮತ್ತು ಇಂಟೆಲ್ ಕೋರ್ 10 ನೇ ಜನ್ ಐ 5-10400 ಎಫ್ ಸಿಪಿಯು ಅನ್ನು ಹೊಂದಿದೆ. ಇದರ ಬೆಲೆ 67,990 ರೂ. ಆಗಿದೆ.

ಗೇಮಿಂಗ್ ಮಾನಿಟರ್‌ಗಳು
ಸ್ಯಾಮ್‌ಸಂಗ್ ಒಡಿಸ್ಸಿ ಕರ್ವ್ಡ್ ಗೇಮಿಂಗ್ ಮಾನಿಟರ್ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿದೆ. ಇದು 144Hz ರಿಫ್ರೆಶ್ ರೇಟ್ ಮತ್ತು AMD ಫ್ರೀ ಸಿಂಕ್ ಮತ್ತು 1000 R ವಕ್ರತೆಯನ್ನು ಹೊಂದಿದೆ. 27 ಇಂಚಿನ ಕರ್ವ್ಡ್ ಗೇಮಿಂಗ್ ಮಾನಿಟರ್ ಬೆಲೆ 22,802 ರೂ ಆಗಿದೆ. ಇನ್ನು ಎಲ್‌ಜಿ ಅಲ್ಟ್ರೇಜರ್ 32 ಮಾನಿಟರ್ ವಿಶೇಷ ಆಫರ್ ಅನ್ನು ಪಡೆದುಕೊಂಡಿದ್ದು, ಕೇವಲ 23,449 ರೂ ದರದಲ್ಲಿ ಲಭ್ಯವಾಗಲಿದೆ. ಇದು QHD 32 GK 650 AMD ರೇಡಿಯನ್ ಫ್ರೀಸಿಂಕ್ ಟೆಕ್ನಾಲಜಿಯನ್ನು ಹೊಂದಿದ್ದು, 144Hz ರಿಫ್ರೆಶ್ ರೇಟ್, 1ms ಮೋಷನ್ ಬ್ಲರ್ ರಿಡಕ್ಷನ್ ಮತ್ತು ಡೈನಾಮಿಕ್ ಆಕ್ಷನ್ ಸಿಂಕ್ ಅನ್ನು ಪಡೆದುಕೊಂಡಿದೆ.


Click it and Unblock the Notifications








