ಅಮೆಜಾನ್ ಸೇಲ್‌ನಲ್ಲಿ 'ಡೈಮಂಡ್ಸ್ ರಿವಾರ್ಡ್' ಗಳಿಸಿ; ಭರ್ಜರಿ ಕ್ಯಾಶ್‌ಬ್ಯಾಕ್ ಪಡೆಯಿರಿ!
ಹಬ್ಬದ ಸೀಸನ್ ಪ್ರಯುಕ್ತ ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಡೆಸುತ್ತಿದೆ. ಈ ಸೇಲ್‌ನಲ್ಲಿ ವಿವಿಧ ಬ್ರ್ಯಾಂಡ್‌ಗಳ ಹಲವಾರು ಪ್ರಾಡಕ್ಟ್‌ಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ ನೀಡುತ್ತಿದೆ. ಇದೇ ಸೇಲ್‌ನಲ್ಲಿ ಇದೀಗ ಅಮೆಜಾನ್ ಇಂಡಿಯಾ ಡೈಮಂಡ್ಸ್ ಫೆಸ್ಟಿವ್ ರಿವಾರ್ಡ್ ಪ್ರೋಗ್ರಾಂ ಅನ್ನು ಕೂಡ ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಅಮೆಜಾನ್‌ನಲ್ಲಿ ತಮ್ಮ ಹಿಂದಿನ ಶಾಪಿಂಗ್ ಆಧಾರದಲ್ಲಿ ಬೋನಸ್ ಡೈಮಂಡ್ಸ್ ಅನ್ನು ಪಡೆಯಬಹುದಾಗಿದೆ.

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಆಫರ್‌ಗಳ ಸುರಿಮಳೆ ಇನ್ನು ಕೂಡ ನಿಂತಿಲ್ಲ. ದೀಪಾವಳಿ ಸಂಭ್ರಮವನ್ನು ಇನ್ನಷ್ಟು ರಂಗಾಗಿಸುವ ಪ್ರಯತ್ನಕ್ಕೆ ಅಮೆಜಾನ್ ಮುಂದಾಗಿದ್ದು, ವಿಶೇಷ ಸೇಲ್ ಆಫರ್‌ಗಳನ್ನು ನೀಡುತ್ತಿದೆ. ಇದರಲ್ಲಿ ಆಕ್ಸಿಸ್ ಬ್ಯಾಂಕ್, ಸಿಟಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಾಗ್ತಿದೆ. ಹಾಗಾದ್ರೆ ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ತಾವು ಪಡೆಯಬಹುದಾದ ಆಫರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಅಮೆಜಾನ್ ಇಂಡಿಯಾ ಡೈಮಂಡ್ಸ್ ಫೆಸ್ಟಿವ್ ರಿವಾರ್ಡ್ ಪ್ರೋಗ್ರಾಂ ಅನ್ನು ಪರಿಚಯಿಸಿದೆ. ಗ್ರಾಹಕರು ಶಾಪಿಂಗ್ ಮಾಡುವ ಮೂಲಕ, ಮಿನಿಟಿವಿಯಲ್ಲಿ ಉಚಿತ ಮನರಂಜನಾ ವೀಡಿಯೊಗಳನ್ನು ವೀಕ್ಷಿಸುವ ಮೂಲಕ ಡೈಮೆಂಡ್ಸ್‌ಗಳನ್ನು ಗಳಿಸಬಹುದು. ಅಲ್ಲದೆ ಫನ್‌ಜೋನ್‌ನಲ್ಲಿ ಆಟಗಳನ್ನು ಆಡುವ ಮೂಲಕ ಅಮೆಜಾನ್ ಪೇ ಬಳಸಿಕೊಂಡು "ಡೈಮಂಡ್ಸ್" ಗಳಿಸುವುದನ್ನು ಮುಂದುವರಿಸಬಹುದು.

ಅಮೆಜಾನ್ ಪ್ರೈಮ್ ಗ್ರಾಹಕರು ಪ್ರತಿ ಖರೀದಿಗೆ ಎರಡು ಬಾರಿ ಡೈಮಂಡ್ಸ್ ಗಳಿಸುವ ಅವಕಾಶವನ್ನು ನೀಡಲಾಗಿದೆ. ಈ ಡೈಮೆಂಡ್ಸ್‌ಗಳನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಶಾಪಿಂಗ್ ಮಾಡುವಾಗ ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಆಫರ್ ಪಡೆಯಲು ಬಳಸಬಹುದು. ಅಲ್ಲದೆ ಗೇಮ್‌ಗಳನ್ನು ಅನ್‌ಲಾಕ್ ಮಾಡಲು ಈ "ಡೈಮಂಡ್ಸ್" ಅನ್ನು ರಿಡೀಮ್ ಮಾಡಿಕೊಳ್ಳಬಹುದು. ಇದಲ್ಲದೆ ಡೈಮಂಡ್ಸ್ ಮೂಲಕ ರಿಡೀಮ್ ಮಾಡಬಹುದಾದ ಹಲವಾರು ಅಮೆಜಾನ್ ಪೇ ಪಾಲುದಾರ ಆಫರ್‌ಗಳು ಕೂಡ ಲಭ್ಯವಿದೆ.
ಇನ್ನು ಇದೇ ಸಮಯದಲ್ಲಿ ಅಮೆಜಾನ್ ಸೇಲ್‌ನಲ್ಲಿ ನೀವು ಆಪಲ್, ಎಚ್‌ಪಿ, ಲೆನೊವೊ, ನಾಯ್ಸ್, ಬೋಟ್, ಎಂಐ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್, ಸ್ಮಾರ್ಟ್‌ವಾಚ್‌ಗಳ ಮೇಲೆ ವಿಶೇಷ ಡಿಸ್ಕೌಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ನೀವು ಆಫರ್‌ನಲ್ಲಿ ಪಡೆದುಕೊಳ್ಳಬಹುದಾದ ಪ್ರಾಡಕ್ಟ್‌ಗಳ ವಿವರ ಇಲ್ಲಿದೆ.

ಹಾನರ್ ಮ್ಯಾಜಿಕ್‌ಬುಕ್ X 15
ಹಾನರ್ ಮ್ಯಾಜಿಕ್‌ಬುಕ್ X 15 ಲ್ಯಾಪ್‌ಟಾಪ್ ಅಮೆಜಾನ್ ಸೇಲ್‌ನಲ್ಲಿ 40% ಡಿಸ್ಕೌಂಟ್ ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ ಡಿಸ್ಕೌಂಟ್‌ನಲ್ಲಿ ನಿಮಗೆ ಕೇವಲ 29,990ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಾಗ್ತಿದೆ. ಇನ್ನು ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಐ ಕಂಫರ್ಟ್ ಫುಲ್ ವ್ಯೂ ಡಿಸ್‌ಪ್ಲೇ, 65W ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಮತ್ತು 2-ಇನ್-1 ಫಿಂಗರ್‌ಪ್ರಿಂಟ್ ಪವರ್ ಬಟನ್‌ನೊಂದಿಗೆ ಬರುತ್ತದೆ.

ಲೆನೊವೊ ಐಡಿಯಾ ಪ್ಯಾಡ್ ಗೇಮಿಂಗ್ 3
ಲೆನೊವೊ ಐಡಿಯಾ ಪ್ಯಾಡ್ ಗೇಮಿಂಗ್ 3 ಅಮೆಜಾನ್ ಸೇಲ್‌ನಲ್ಲಿ 31% ಡಿಸ್ಕೌಂಟ್ ಪಡೆದಿದೆ. ಇದರಿಂದ ಈ ಲ್ಯಾಪ್‌ಟಾಪ್ ಅನ್ನು ನೀವು ಕೇವಲ 56,990ರೂ. ಬೆಲೆಯಲ್ಲಿ ಖರೀದಿಸಲು ಸಾಧ್ಯವಿದೆ. ಇನ್ನು ಈ ಲ್ಯಾಪ್‌ಟಾಪ್ 11ನೇ ತಲೆಮಾರಿನ ಇಂಟೆಲ್ ಕೋರ್ i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 15.6 ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಎನ್‌ವಿಡಿಯಾ ಜಿಫೋರ್ಸ್ GTX 1650 ಡೇಡಿಕೇಟೆಡ್ ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದೆ.

ಲೆನೊವೊ ಐಡಿಯಾಪ್ಯಾಡ್ 3 ಲ್ಯಾಪ್‌ಟಾಪ್
ಲೆನೊವೊ ಐಡಿಯಾಪ್ಯಾಡ್ 3 ಲ್ಯಾಪ್‌ಟಾಪ್ ಅಮೆಜಾನ್‌ನಲ್ಲಿ ಬಿಗ್ ಡಿಸ್ಕೌಮಟ್ ಪಡೆದುಕೊಂಡಿದೆ. ಇದರಿಂದ ಈ ಲ್ಯಾಪ್‌ಟಾಪ್ ನಿಮಗೆ 38,190ರೂ. ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇನ್ನು ಈ ಲ್ಯಾಪ್‌ಟಾಪ್ 11ನೇ ತಲೆಮಾರಿನ ಇಂಟೆಲ್ ಕೋರ್ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 15.6 ಫುಲ್ ಹೆಚ್‌ಡಿ ಥಿನ್ ಆಂಡ್ ಲೈಟ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 45W ವೇಗದ ಬ್ಯಾಟರಿ ಸಾಮರ್ಥ್ಯವನ್ನು ಒಳಗಗೊಂಡಿದೆ. ಇದಲ್ಲದೆ ಇಂಟರ್‌ಬಿಲ್ಟ್ ಕ್ಯಾಮೆರಾ, HD ಡಾಲ್ಬಿ ಆಡಿಯೋ ಸ್ಪೀಕರ್‌ಗಳನ್ನು ಕೂಡ ಹೊಂದಿದೆ.


Click it and Unblock the Notifications








