Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಸ್ವಲ್ಪ ದಿನ ಕಾಯಿರಿ ಅಮೆಜಾನ್‌ನಲ್ಲಿ ಸಿಗಲಿದೆ ಭರ್ಜರಿ ಡಿಸ್ಕೌಂಟ್‌!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಆಯೋಜನೆಗೆ ಸಿದ್ಧತೆ ನಡೆಸಿದೆ. ಈ ಸೇಲ್‌ ಇದೇ ಆಗಸ್ಟ್ 5 ರಿಂದ ಶುರುವಾಗಲಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಬರುವ ಈ ಸೇಲ್‌ನಲ್ಲಿ ಗ್ರಾಹಕರು ಭರ್ಜರಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಮೊಬೈಲ್‌ ಖರೀದಿಸೋರಿಗೆ ಬಿಗ್‌ ಆಫರ್‌ ಪಕ್ಕಾ ಎನ್ನಲಾಗಿದೆ.

ಹೌದು, ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಆಗಸ್ಟ್ 5 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 9ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಅಮೆಜಾನ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ದೊರೆಯಲಿದೆ ಅನ್ನೊದನ್ನ ಅಮೆಜಾನ್‌ ಬಹಿರಂಗಪಡಿಸಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಲಭ್ಯವಾಗುವ ಡಿಸ್ಕೌಂಟ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಅಮೆಜಾನ್‌ನಲ್ಲಿ ಸಿಗಲಿದೆ ಭರ್ಜರಿ ಡಿಸ್ಕೌಂಟ್‌!

ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಆಫರ್‌ ನಿರೀಕ್ಷೆ ಏನು?
ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ಹಲವು ಸ್ಮಾರ್ಟ್‌ ಡಿವೈಸ್‌ಗಳ ಮೇಲೆ ಭರ್ಜರಿ ರಿಯಾಯಿತಿ ಸಿಗಲಿದೆ. ಆದರೂ ಕೂಡ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇದು ಬೆಸ್ಟ್‌ ಟೈಂ ಅಂತಾನೇ ಹೇಳಲಾಗಿದೆ. ಏಕೆಂದರೆ ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 5G, ಒನ್‌ಪ್ಲಸ್‌ ನಾರ್ಡ್‌ 3, ಒನ್‌ಪ್ಲಸ್‌ 11R, ರಿಯಲ್‌ಮಿ ನಾರ್ಜೋ 60ಪ್ರೊ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04, ಒನ್‌ಪ್ಲಸ್‌ 11, ಐಕ್ಯೂ ನಿಯೋ 7 5G, ರೆಡ್ಮಿ ನೋಟ್‌ 12 5G, ಸ್ಮಾರ್ಟ್‌ಫೋನ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನಿರೀಕ್ಷಿಸಲಾಗಿದೆ.

ಸದ್ಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಎಷ್ಟು ಕಡಿತವಾಗಲಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಅಮೆಜಾನ್‌ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಈವೆಂಟ್‌ನಲ್ಲಿ ಫೋನ್‌ಗಳು ಲಭ್ಯವಾಗುವ ನಿಖರವಾದ ಬೆಲೆಯನ್ನು ಅಮೆಜಾನ್‌ ಇನ್ನು ಕೂಡ ವಿವರಿಸಿಲ್ಲ. ಲಭ್ಯ ಮಾಹಿತಿಯ ಪ್ರಕಾರ ಸ್ಮಾರ್ಟ್‌ಫೋನ್‌ಗಳ ಮೇಲೆ 40% ಡಿಸ್ಕೌಂಟ್‌ ಅನ್ನು ನಿರೀಕ್ಷಿಸಬಹುದಾಗಿದೆ.

ಇದಲ್ಲದೆ ಸ್ಮಾರ್ಟ್‌ಫೋನ್‌ಗಳನ್ನು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 10% ಡಿಸ್ಕೌಂಟ್‌ ದೊರೆಯಲಿದೆ. ಜೊತೆಗೆ ಅಮೆಜಾನ್ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಕೂಡ ಭರ್ಜರಿ ರಿಯಾಯಿತಿಯನ್ನು ಕೂಡ ನಿರೀಕ್ಷಿಸಲಾಗಿದೆ. ಅಲ್ಲದೆ ನೀವು ಲ್ಯಾಪ್‌ಟಾಪ್ ಅಥವಾ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಖರೀದಿಸಲು ಬಯಸಿದರೆ ನಿಮಗೆ ಇನ್ನು ಹೆಚ್ಚಿನ ರಿಯಾಯಿತಿ ದೊರೆಯಲಿದೆ. ಇದರೊಂದಿಗೆ ಲ್ಯಾಪ್‌ಟಾಪ್‌ಗಳು, ಇಯರ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳ ಮೇಲೆ 75% ರಿಯಾಯಿತಿ ಸಹ ಲಭ್ಯವಿರುತ್ತದೆ ಎಂದು ವರದಿಯಾಗಿದೆ.

ಇನ್ನು ಅಮೆಜಾನ್‌ ಟೀಸರ್ ಪ್ರಕಾರ ಆಪಲ್ ಮತ್ತು ಇತರ ಕಂಪನಿಗಳ ಟ್ಯಾಬ್ಲೆಟ್‌ಗಳು 50% ಡಿಸ್ಕೌಂಟ್‌ ಸಿಗಲಿದೆ ಎನ್ನಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಲ್ಯಾಪ್‌ಟಾಪ್‌ಗಳು 40,000ರೂ. ರಿಯಾಯಿತಿ ಸಿಗಲಿದೆ ಎನ್ನಲಾಗಿದೆ. ಜೊತೆಗೆ ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳು 75% ರಿಯಾಯಿತಿಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಇದರೊಂದಿಗೆ ಫ್ಲಾಟ್ ರಿಯಾಯಿತಿಗಳು ಮತ್ತು ಬ್ಯಾಂಕ್ ಕಾರ್ಡ್ ಡಿಸ್ಕೌಂಟ್‌ಗಳನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಈವೆಂಟ್ ಸಮಯದಲ್ಲಿ, ಸ್ಮಾರ್ಟ್ ಟಿವಿಗಳು ಸಹ ಡಿಸ್ಕೌಂಟ್‌ ದರದಲ್ಲಿ ದೊರೆಯಲಿದೆ. ಇದರಲ್ಲಿ ಕೆಲವು 4K ಟಿವಿಗಳು 60% ರಿಯಾಯಿತಿ ಪಡೆಯುವ ಸಾಧ್ಯತೆಯಿದೆ. ಇನ್ನು ರೆಫ್ರಿಜರೇಟರ್‌ಗಳು ಕೂಡ ಸಹ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತವೆ. ಗೇಮಿಂಗ್‌ಗೆ ಸಂಬಂಧಿಸಿದಂತೆ, ಸೋನಿಯ ಪ್ಲೇಸ್ಟೇಷನ್ 5 ಮತ್ತು ಇತರ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಲಾಗುವುದು ಎಂದು ಅಮೆಜಾನ್‌ ಹೇಳಿದೆ. ಅಲ್ಲದೆ 80% ರಷ್ಟು ರಿಯಾಯಿತಿ ಕೊಡುಗೆಯೊಂದಿಗೆ ಗೇಮ್‌ಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Amazon India is hosting a new Great Freedom Festival sale on August 5: Expected Deals Here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+