Subscribe to Gizbot

ಆಪಲ್‌ ಐಫೋನ್‌ ಕೊಳ್ಳುವವರಿಗೆ ಡಬ್ಬಲ್ ಆಫರ್; ಅಮೆಜಾನ್‌ನಲ್ಲಿ ಮಾತ್ರವೇ..!

Written By:

ಆಪಲ್ ಐಫೋನ್ ಬೇಡಿಕೆಯೂ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಅಮೆಜಾನ್ ಐಫೋನ್ ಫೇಸ್ಟ್ ಆಯೋಜನೆ ಮಾಡಿದೆ. ಏಪ್ರಿಲ್ 10 ರಿಂದ 16ರ ವರೆಗೆ ನಡೆಯಲಿರುವ ಈ ಸೇಲ್‌ನಲ್ಲಿ ಆಪಲ್ ಐಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಕಾಣಬಹುದಾಗಿದೆ. ಈ ಸೇಲ್‌ನಲ್ಲಿ HDFC ಕಾರ್ಡ್‌ ಬಳಕೆದಾರರಿಗೆ ವಿಶೇಷ ಆಫರ್ ಸಹ ಲಭ್ಯವಿದ್ದು, ರೂ.5000 ಇನ್‌ಸ್ಟೆಂಟ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಆಪಲ್‌ ಐಫೋನ್‌ ಕೊಳ್ಳುವವರಿಗೆ ಡಬ್ಬಲ್ ಆಫರ್; ಅಮೆಜಾನ್‌ನಲ್ಲಿ ಮಾತ್ರವೇ..!

ನೂತನ ಐಫೋನ್ X, ಐಫೋನ್ 8 ಸರಣಿ ಮತ್ತು ಐಫೋನ್ 7 ಸರಣಿ ಫೋನ್‌ಗಳ ಮೇಲೆ ಆಫರ್ ಲಭ್ಯವಿದ್ದು, ಕೆಲವು ಆಪಲ್ ವಾಚ್‌ಗಳ ಮೇಲೆಯೂ ದರ ಕಡಿತವನ್ನು ಕಾಣಬಹುದಾಗಿದೆ. ಸದ್ಯದ ಸೇಲ್‌ನಲ್ಲಿರುವ ಆಫರ್ ಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನವು ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ X:

ಐಫೋನ್ X:

ದುಬಾರಿ ಬೆಲೆಯ ಐಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ X 64GB ಆವೃತ್ತಿಯ ಬೆಲೆಯಲ್ಲಿ ರೂ.9000 ಕಡಿತವಾಗಿದ್ದು, ರೂ.79999ಕ್ಕೆ ದೊರೆಯಲಿದೆ. ಇದೇ ಮಾದರಿಯಲ್ಲಿ ಐಫೋನ್ X 256GB ಆವೃತ್ತಿಯೂ ರೂ.97,999ಕ್ಕೆ ಮಾರಾಟವಾಗಲಿದೆ. ಇದರೊಂದಿಗೆ HDFC ಕಾರ್ಡ್‌ನಲ್ಲಿ ಖರೀದಿ ಮಾಡಿದರೆ ರೂ.5000 ಇನ್‌ಸ್ಟೆಂಟ್ ಕ್ಯಾಷ್ ಬ್ಯಾಕ್ ಅನ್ನು ಕಾಣಬಹುದಾಗಿದೆ.

ಐಫೋನ್ 8 ಸರಣಿ:

ಐಫೋನ್ 8 ಸರಣಿ:

ಐಫೋನ್ 8 ಪ್ಲಸ್ 64GB ರೂ.65,999ಕ್ಕೆ ಮಾರಾಟವಾಗುತ್ತಿದ್ದು, ಇದೇ ಮಾದರಿಯಲ್ಲಿ ಐಫೋನ್ 8 ಪ್ಲಸ್ 256GB ಆವೃತ್ತಿಯೂ ರೂ.79999ಕ್ಕೆ ದೊರೆಯಲಿದೆ.

ಹಾಗೆಯೇ ಐಫೋನ್ 8 64GB ರೂ.54,999ಕ್ಕೆ ಮಾರಾಟವಾಗುತ್ತಿದ್ದು, ಇದೇ ಮಾದರಿಯಲ್ಲಿ ಐಫೋನ್ 8 256GB ಆವೃತ್ತಿಯೂ ರೂ.68,999ಕ್ಕೆ ದೊರೆಯಲಿದೆ. ದರೊಂದಿಗೆ HDFC ಕಾರ್ಡ್‌ನಲ್ಲಿ ಖರೀದಿ ಮಾಡಿದರೆ ರೂ.3000 ಇನ್‌ಸ್ಟೆಂಟ್ ಕ್ಯಾಷ್ ಬ್ಯಾಕ್ ಅನ್ನು ಕಾಣಬಹುದಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಐಫೋನ್ 7 ಸರಣಿ:

ಐಫೋನ್ 7 ಸರಣಿ:

ಐಫೋನ್ 7 ಪ್ಲಸ್ 32GB ರೂ.56,999ಕ್ಕೆ ಮಾರಾಟವಾಗುತ್ತಿದ್ದು, ಇದೇ ಮಾದರಿಯಲ್ಲಿ ಐಫೋನ್ 7 ಪ್ಲಸ್ 128GB ಆವೃತ್ತಿಯೂ ರೂ.64999ಕ್ಕೆ ದೊರೆಯಲಿದೆ.

ಹಾಗೆಯೇ ಐಫೋನ್ 7 32GB ರೂ.41,999ಕ್ಕೆ ಮಾರಾಟವಾಗುತ್ತಿದ್ದು, ಇದೇ ಮಾದರಿಯಲ್ಲಿ ಐಫೋನ್ 7 128 6GB ಆವೃತ್ತಿಯೂ ರೂ.54,999ಕ್ಕೆ ಹಾಗೂ ಐಫೋನ್ 7 256 6GB ಆವೃತ್ತಿಯೂ ರೂ.58,350ಕ್ಕೆ ದೊರೆಯಲಿದೆ. ಇದರೊಂದಿಗೆ HDFC ಕಾರ್ಡ್‌ನಲ್ಲಿ ಖರೀದಿ ಮಾಡಿದರೆ ರೂ.2000 ಇನ್‌ಸ್ಟೆಂಟ್ ಕ್ಯಾಷ್ ಬ್ಯಾಕ್ ಅನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Amazon India Kicks Off Apple iPhone Fest. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot