ಇನ್ಮುಂದೆ ಅಮೆಜಾನ್‌ನಲ್ಲಿಯೂ ಕೇಳಿ ಬರಲಿದೆ ಕನ್ನಡದ ಕಂಪು!

|

ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ ತನ್ನ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳನ್ನು ಸಹ ಸೇರಿಸಿದೆ. ಈ ಮೂಲಕ ಭಾರತದಲ್ಲಿ ಭಾರತೀಯ ಭಾಷಾ ಬೆಂಬಲವನ್ನು ಇನ್ನಷ್ಟು ವಿಸ್ತಾರ ಮಾಡಿದೆ. ಸದ್ಯ ಅಮೆಜಾನ್‌ ಭಾಷಾ ವಿಸ್ತರಣೆಯು ತನ್ನ ಆನ್‌ಲೈನ್ ಶಾಪಿಂಗ್ ಅನುಭವವನ್ನು ಇನ್ನಷ್ಟು ವಿಸ್ತರಿಸಲು ಮತ್ತು ದೇಶದಲ್ಲಿ ತನ್ನ ಗ್ರಾಹಕರ ನೆಲೆಯನ್ನು ಹೆಚ್ಚಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಅಮೆಜಾನ್

ಹೌದು, ಇ-ಕಾಮರ್ಸ್‌ ತಾಣ ಅಮೆಜಾನ್ ತನ್ನ ಆನ್‌ಲೈನ್ ಮಾರುಕಟ್ಟೆಗೆ ಹಿಂದಿ ಭಾಷೆಯ ಬೆಂಬಲವನ್ನು ತಂದ ಎರಡು ವರ್ಷಗಳ ನಂತರ ಕನ್ನಡ ಭಾಷೆ ಸೇರಿದಂತೆ ನಾಲ್ಕು ಭಾಷೆಗಳನ್ನ ಮತ್ತೆ ಸೇರಿಸಿದೆ. ಇದರಿಂದ ಗ್ರಾಹಕರು ತಮ್ಮ ಮೊಬೈಲ್ ಡಿವೈಸ್‌ಗಳ ಮೂಲಕ ಅಥವಾ ಡೆಸ್ಕ್‌ಟಾಪ್ ಬಳಸಿ ಭಾಷಾ ವಿಸ್ತರಣೆಯನ್ನು ನೇರವಾಗಿ ಪರಿಶೀಲಿಸಬಹುದಾಗಿದೆ. ಸದ್ಯ ನಾಲ್ಕು ಹೊಸ ಭಾಷೆಗಳನ್ನು ಪ್ರಾರಂಭಿಸುವುದರೊಂದಿಗೆ, ಅಮೆಜಾನ್ ಈಗ ಭಾರತದಲ್ಲಿ ಆರು ವಿಭಿನ್ನ ಭಾಷೆಗಳನ್ನು ನೀಡುತ್ತಿದೆ.

ಅಮೆಜಾನ್

ಇನ್ನು ಗ್ರಾಹಕರು ತಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಡಿವೈಸ್‌ಗಳಲ್ಲಿ ಅಮೆಜಾನ್ ಅಪ್ಲಿಕೇಶನ್‌ನಿಂದ ಅಥವಾ ಮೊಬೈಲ್ ಅಥವಾ ಡೆಸ್ಕ್‌ಟಾಪ್ ಸೈಟ್ ಮೂಲಕ ತಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಬಹುದಾಗಿದೆ. ಇದರಿಂದ ಶಾಪಿಂಗ್‌ ತಾಣದಲ್ಲಿ ವಿವಿಧ ಅಂಶಗಳನ್ನು ಭಾಷಾಂತರಿಸಲು ಅನುಕೂಲವಾಗಲಿದೆ. ತಮ್ಮದೇ ಭಾಷೆಯನ್ನು ಆಯ್ಕೆ ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಿರುವುದರಿಂದ ಗ್ರಾಹಕರು ತಮ್ಮ ಶಾಪಿಂ್‌ ಅನುಭವವನ್ನು ಉತ್ತಮ ಗೊಳಿಸಿಕೊಳ್ಳಬಹುದಾಗಿದೆ.

ಶಾಪಿಂಗ್‌ ತಾಣ

ಶಾಪಿಂಗ್‌ ತಾಣಕ್ಕೆ ಎಂಟ್ರಿ ನೀಡುವ ಗ್ರಾಹಕರು ತಮ್ಮ ನೆಚ್ಚಿನ ಪ್ರಾಡಕ್ಟ್‌ಗಳನ್ನ ಆಯ್ಕೆ ಮಾಡುವುದಕ್ಕೆ ಭಾಷೆ ಸಮಸ್ಯೆ ಎದುರಿಸುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಸ್ಥಳಿಯ ಭಾಷೆಗೆ ಆದ್ಯತೆ ನೀಡಿದರೆ ಸ್ಥಳೀಯ ಗ್ರಾಹಕರಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗಲಿದೆ. ಇದರಿಂದ ಗ್ರಾಹಕರು ತಮ್ಮ ದೈನಂದಿನ ಜೀವನದಲ್ಲಿ ಬಳಸುವ ಸಾಮಾನ್ಯ ಪದಗಳನ್ನು ಎಲ್ಲಾ ಆರು ಭಾಷೆಗಳಲ್ಲಿ ವೇದಿಕೆಯಲ್ಲಿ ಕಂಡುಕೊಳ್ಳಲು ಅವಕಾಸವಾಗಲಿದೆ ಎಂದು ಅಮೆಜಾನ್ ಹೇಳಿಕೆಯಲ್ಲಿ ತಿಳಿಸಿದೆ.

ಅಮೆಜಾನ್

ಇನ್ನು ಅಮೆಜಾನ್ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯನ್ನು ಅಳವಡಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಹಿಂದಿಯನ್ನು ಸೇರಿಸಿಕೊಳ್ಳುವ ಮೂಲಕ ಉತ್ತರ ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿತ್ತು. ಇದೀಗ ತನ್ನ ದೃಷ್ಟಿಯನ್ನು ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳ ರಾಜ್ಯಗಳಲ್ಲಿ ಮಾರುಕಟ್ಟೆ ವಿಸ್ತಾರಕ್ಕೆ ಮುಂದಾಗಿದೆ. ಅಲ್ಲದೆ ಅಮೆಜಾನ್‌ಗೂ ಮೊದಲೇ ಮೂರು ನಾಲ್ಕು ತಿಂಗಳ ಹಿಂದೆ ಫ್ಲಿಪ್‌ಕಾರ್ಟ್‌ ಕೂಡ ಕನ್ನಡ, ತಮಿಳು ಮತ್ತು ತೆಲುಗಿಗೆ ಬೆಂಬಲವನ್ನು ನೀಡಿತ್ತು. ಇದೀಗ ಅಮೆಜಾನ್‌ ಕೂಡ ಕನ್ನಡ, ಮಲಯಾಳಂ ತೆಲಗು,ತಮಿಳು ಭಾಷೆಗಳಿಗೆ ಬೆಂಬಲಿಸುವುದಕ್ಕೆ ಮುಂದಾಗಿದೆ. ಈ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಮುಂದಾಗಿವೆ.

Most Read Articles
Best Mobiles in India

English summary
With the launch of the four new languages, Amazon is now offering online shopping in India in six distinct languages.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X