Home
ಸುದ್ದಿಜಾಲ

ಸೋನಿ ಆಡಿಯೋ ಫೆಸ್ಟ್‌ ಸೇಲ್: ಸೋನಿ‌ ಪ್ರಾಡಕ್ಟ್‌ಗಳಿಗೆ ಭಾರಿ ಡಿಸ್ಕೌಂಟ್‌!

ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್ ಇಂಡಿಯಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೋನಿ ಆಡಿಯೋ ಫೆಸ್ಟ್‌ ಅನ್ನು ಪ್ರಕಟಿಸಿದೆ. ಸದ್ಯ ಸೋನಿ ಆಡಿಯೋ ಫೆಸ್ಟ್‌ ಸೇಲ್‌ ಇಂದಿನಿಂದ ಪ್ರಾರಂಭವಾಗಿದ್ದು ಇದು ಡಿಸೆಂಬರ್ 18, 2020 ರವರೆಗೆ ಮುಂದುವರಿಯುತ್ತದೆ. ಈ ಆಡಿಯೊ ಫೆಸ್ಟ್ ಸಮಯದಲ್ಲಿ, ಅಮೆಜಾನ್ ಇಂಡಿಯಾ ಸೋನಿಯಿಂದ ವಿವಿಧ ಆಡಿಯೊ ಉತ್ಪನ್ನಗಳ ಖರೀದಿಗೆ ವಿಶೇಷ ಡೀಲ್ಸ್‌ ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಇಂಡಿಯಾ ಸೋನಿ ಆಡಿಯೋ ಫೆಸ್ಟ್‌ ಸೇಲ್‌ ಅನ್ನು ಆರಂಬಿಸಿದೆ. ಈ ಸೇಲ್‌ನಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಉತ್ಪನ್ನಗಳನ್ನು ಸೋನಿಯಿಂದ ಶಾಪಿಂಗ್ ಮಾಡಬಹುದು. ಅಲ್ಲದೆ ಈ ಸೇಲ್‌ನಲ್ಲಿ ಹೆಡ್‌ಫೋನ್‌ಗಳ ಮೇಲೆ 40% ರಿಯಾಯಿತಿ, ಸ್ಪೀಕರ್‌ಗಳಿಗೆ 25% ಆಫ್, ಮತ್ತು ಸೌಂಡ್‌ಬಾರ್‌ಗಳಲ್ಲಿ 20% ರಿಯಾಯಿತಿ ನೀಡಬಹುದು ಎಂದು ಅಮೆಜಾನ್ ಇಂಡಿಯಾ ಹೇಳಿದೆ. ಇನ್ನುಳಿದಂತೆ ಈ ಸೇಲ್‌ನಲ್ಲಿ ಯಾವೆಲ್ಲಾ ಸೋನಿ ಆಡಿಯೋಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೋನಿ ಆಡಿಯೋ ಫೆಸ್ಟ್

ಅಮೆಜಾನ್ ಇಂಡಿಯಾದ ಸೋನಿ ಆಡಿಯೋ ಫೆಸ್ಟ್ ನಲ್ಲಿ ಸೋನಿ WH-1000XM4 ನಾಯ್ಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್‌ಗಳು ಸ್ಪೀಕ್ ಟು ಚಾಟ್, ವಾಯ್ಸ್ ಅಸಿಸ್ಟೆಂಟ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆ ಮುಂತಾದ ಫೀಚರ್ಸ್‌ಗಳನ್ನು ಹೊಂದಿದ್ದು, 24,990 ಕ್ಕೆ ಲಭ್ಯವಿದೆ. ಇನ್ನು ಸೋನಿ WF-1000 XM3 ಇಯರ್‌ಬಡ್ಸ್‌ ಡ್ಯುಯಲ್ ಮೈಕ್ರೊಫೋನ್ ಮತ್ತು ಮೀಸಲಾದ ಎಚ್‌ಡಿ ನಾಯ್ಸ್‌-ಕ್ಯಾನ್ಸಲಿಂಗ್‌ ಪ್ರೊಸೆಸರ್ ಕ್ಯೂಎನ್ 1E ಜೊತೆಗೆ ಒಟ್ಟು 24 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ ಆಡಿಯೊ ಫೆಸ್ಟ್ ಸಮಯದಲ್ಲಿ, 14,990 ರೂ.ಗೆ ಲಭ್ಯವಿದೆ.

ಸೋನಿ WF-XB700 ಇಯರ್‌ಬಡ್ಸ್

ಇದಲ್ಲದೆ ಸೋನಿ WF-XB700 ಇಯರ್‌ಬಡ್ಸ್‌ 18 ಗಂಟೆಗಳ ಬ್ಯಾಟರಿ, ಐಪಿಎಕ್ಸ್ 4 ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಹೊಂದಿದೆ. ಇದು ಅಮೆಜಾನ್ ಇಂಡಿಯಾ ಸೋನಿ ಆಡಿಯೋ ಫೆಸ್ಟ್‌ ಸೇಲ್‌ನಲ್ಲಿ 7,990 ರೂ.ಗಳಿಗೆ ಲಭ್ಯವಿದೆ.

ಸೋನಿ ಸ್ಪೀಕರ್

ಇನ್ನು ಈ ಸೇಲ್‌ನಲ್ಲಿ ಸೋನಿ ಸ್ಪೀಕರ್‌ಗಳ ಮೇಲೂ ಭಾರಿ ರಿಯಾಯಿತಿಯನ್ನು ನೀಡಲಾಗ್ತಿದೆ. ಇದರಲ್ಲಿ ಸೋನಿ SRS-XB 23 ಸ್ಪೀಕರ್‌ಗಳನ್ನು ಐಪಿ 67 ರೇಟಿಂಗ್, 12 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ಅಂತರ್ನಿರ್ಮಿತ ಮೈಕ್ ಅನ್ನು, 7,990 ರೂ.ಗೆ ಖರೀದಿಸಬಹುದಾಗಿದೆ. ಅಂತೆಯೇ, ಸೋನಿ GTK-PG10 ಪೋರ್ಟಬಲ್ ಸ್ಪೀಕರ್ ಮೀಸಲಾದ ಹೊರಾಂಗಣ ಪಾರ್ಟಿ ಮೋಡ್‌ನೊಂದಿಗೆ ಬರುತ್ತದೆ. ಜೊತೆಗೆ ಸ್ಪ್ಲಾಶ್-ಪ್ರೂಫ್ ಟಾಪ್ ಪ್ಯಾನಲ್ ಅನ್ನು ಹೊಂದಿದೆ ಇ ಸೋನಿ ಆಡಿಯೋ ಫೆಸ್ಟ್‌ ಸೇಲ್‌ನಲ್ಲಿ ರೂ.13,990ಕ್ಕೆ ಲಭ್ಯವಿದೆ.

Best Mobiles in India

English summary
Amazon India on Saturday announced Sony Audio Fest on its platform.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+