Home
ಸುದ್ದಿಜಾಲ

ಭರ್ಜರಿ ಆಫರ್ಸ್: ಫೆಬ್ರವರಿ 12ರವರೆಗೆ ಅಮೆಜಾನ್‌ನಲ್ಲಿ iQOO Quest Days ಸೇಲ್!

ನೀವು ಹೊಸದೊಂದು ಸ್ಮಾರ್ಟ್‌ಫೋನ್ ಖರೀದಿ ಯೋಜನೆಯಲ್ಲಿದ್ದರೆ ನಿಮಗಾಗಿ ಅಮೆಜಾನ್‌ನಲ್ಲಿ iQOO Quest Days ಸೇಲ್ ಇದೀಗ ಲೈವ್ ಆಗಿದೆ. ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ iQOO ಕಂಪೆನಿಯು ಇದೇ ಫೆಬ್ರವರಿ 9 ರಿಂದ ಫೆಬ್ರವರಿ 12ರವರೆಗೆ iQOO Quest Days ಸೇಲ್ ಅನ್ನು ಆಯೋಜಿಸಿದ್ದು, ಅಮೆಜಾನ್‌ ಮೂಲಕ ಲಭ್ಯವಾಗಿರುವ ಈ ಸೇಲ್‌ನಲ್ಲಿ iQOO ಬ್ರ್ಯಾಂಡ್‌ನ ಫ್ಲಾಗ್‌ಶಿಪ್, ಮಿಡ್-ರೇಂಜ್ ಹಾಗೂ ಬಜೆಟ್ ಫೋನ್‌ಗಳು ಈ ಅವಧಿಯಲ್ಲಿ ವಿಶೇಷ ಬೆಲೆಗೆ ಲಭ್ಯವಿವೆ. ಹೊಸ ಸ್ಮಾರ್ಟ್‌ಫೋನ್ ಖರೀದಿ ಯೋಜನೆಯಲ್ಲಿರುವವರಿಗೆ ಈ ಸೇಲ್ ಉತ್ತಮ ಅವಕಾಶವನ್ನು ಒದಗಿಸುತ್ತಿದ

ನೇರವಾಗಿ ಹೇಳುವುದಾದರೆ, ಈ iQOO Quest Days ಸೇಲ್‌ನ ಪ್ರಮುಖ ಆಕರ್ಷಣೆಯಾಗಿ ಗ್ರಾಹಕರಿಗೆ ಗರಿಷ್ಠ ₹4,000 ವರೆಗೆ ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ನೀಡಲಾಗುತ್ತಿದೆ. ಜೊತೆಗೆ, ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಆರು ತಿಂಗಳವರೆಗೆ ನೋ-ಕಾಸ್ಟ್ EMI ಸೌಲಭ್ಯವೂ ಲಭ್ಯವಿದೆ. ಹಾಗಾದರೆ, iQOO Quest Days ಸೇಲ್ನಲ್ಲಿ ಏನೆಲ್ಲಾ ಕೊಡುಗೆಗಳಿವೆ ಎಂಬುದನ್ನು ನೋಡೋಣ ಬನ್ನಿ. ನಾವು ಈ ಕೆಳಗೆ ನಿಮಗಾಗಿ ಈಗಾಗಲೇ ಬ್ಯಾಂಕ್ ಆಫರ್‌ಗಳನ್ನು ಒಳಗೊಂಡಿರುವ ಬೆಲೆಗಳನ್ನು ಉಲ್ಲೇಖಿಸಿದ್ದೇವೆ. ಹಾಗಾಗಿ, ನೀವು ಖರೀದಿ ಸಮಯದಲ್ಲಿ ಹೆಚ್ಚುವರಿ ಲೆಕ್ಕಾಚಾರ ಮಾಡುವ ಅಗತ್ಯವಿಲ್ಲ.

ಈ iQOO Quest Days ಸೇಲ್‌ನಲ್ಲಿ ಫ್ಲಾಗ್‌ಶಿಪ್ ವಿಭಾಗದಲ್ಲಿ iQOO 15 ಸ್ಮಾರ್ಟ್‌ಫೋನ್ ₹68,999 ಆರಂಭಿಕ ಬೆಲೆಗೆ ಲಭ್ಯವಿದೆ. ಈ ಬೆಲೆ 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ಗೆ ಅನ್ವಯವಾಗುತ್ತದೆ. ಉನ್ನತ ಕಾರ್ಯಕ್ಷಮತೆ, ಗೇಮಿಂಗ್ ಮತ್ತು ಪ್ರೀಮಿಯಂ ಅನುಭವ ಬಯಸುವ ಬಳಕೆದಾರರಿಗೆ ಇದು ಪ್ರಮುಖ ಆಯ್ಕೆಯಾಗಿದೆ.

ಭರ್ಜರಿ ಆಫರ್ಸ್: ಫೆಬ್ರವರಿ 12ರವರೆಗೆ ಅಮೆಜಾನ್‌ನಲ್ಲಿ iQOO Quest Days ಸೇಲ್!

ಪರಫಾರ್ಮೆನ್ಸ್ ಮತ್ತು ಬೆಲೆ ನಡುವೆ ಸಮತೋಲನ ಬಯಸುವವರಿಗೆ iQOO Neo 10 ಗಮನ ಸೆಳೆಯುತ್ತದೆ. 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಈ ಫೋನ್‌ನ್ನು ₹34,999 ದರದಲ್ಲಿ ಖರೀದಿಸಬಹುದು. ಅದೇ Neo ಸರಣಿಯಲ್ಲಿ iQOO Neo 10R ಕೂಡ ಲಭ್ಯವಿದ್ದು, ₹25,999 ದರದಲ್ಲಿ ಮಿಡ್-ರೇಂಜ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ.

ಮಿಡ್-ರೇಂಜ್ ವಿಭಾಗದಲ್ಲಿ iQOO Z10 ಫೋನ್ ₹20,999 ಆರಂಭಿಕ ಬೆಲೆಗೆ ಲಭ್ಯ. ಹಳೆಯ ಫೋನ್‌ನಿಂದ ಹೊಸ ಮಾದರಿಗೆ ಅಪ್‌ಗ್ರೇಡ್ ಆಗಲು ಬಯಸುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ. ಇದೇ ಬೆಲೆಯಲ್ಲಿ, 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ iQOO Z10R ಕೂಡ ದೊರೆಯುತ್ತಿದ್ದು, ಕರ್ವ್ಡ್ ಡಿಸ್ಪ್ಲೇ ಇಷ್ಟಪಡುವವರಿಗೆ ಇದು ವಿಶೇಷ ಆಕರ್ಷಣೆಯಾಗಿದೆ.

ಈ ಸೇಲ್‌ನಲ್ಲಿ ಬಜೆಟ್ ಸ್ನೇಹಿ ಆಯ್ಕೆಗಳನ್ನೂ ಸಹ iQOO ನೀಡುತ್ತಿದೆ. ಈಗ iQOO Z10X ಫೋನ್ ₹13,749 ದರಕ್ಕೆ ಲಭ್ಯವಿದ್ದು, ದಿನನಿತ್ಯದ ಬಳಕೆಗೆ ತಕ್ಕಂತೆ ವಿನ್ಯಾಸಗೊಂಡಿರುವ ಈ ಫೋನ್ ಆಕರ್ಷಕವಾಗಿದೆ. ಇನ್ನೂ ಕಡಿಮೆ ಬಜೆಟ್‌ನಲ್ಲಿ iQOO Z10 Lite ₹9,999 ಆರಂಭಿಕ ಬೆಲೆಗೆ ದೊರೆಯುತ್ತಿದ್ದು, ಮೊದಲ ಬಾರಿ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಅಥವಾ ಸರಳ ಬಳಕೆಗೆ ಇದು ಸೂಕ್ತವಾಗಿದೆ.

iQOO ಸ್ಮಾರ್ಟ್‌ಫೋನ್‌ಗಳ ಜೊತೆಗೆ ಆಕ್ಸೆಸರಿಗಳಿಗೂ ರಿಯಾಯಿತಿ ನೀಡಲಾಗಿದೆ. iQOO TWS1E ವೈರ್‌ಲೆಸ್ ಇಯರ್‌ಬಡ್ಸ್‌ಗಳನ್ನು ₹1,899 ದರದಲ್ಲಿ ಖರೀದಿಸಬಹುದು. ಜೊತೆಗೆ, iQOO 15 ಗಾಗಿ ಟೆಂಪರ್ಡ್ ಗ್ಲಾಸ್ ₹699 ದರದಲ್ಲಿ ಲಭ್ಯವಿದೆ. ಒಟ್ಟಾರೆಯಾಗಿ, ಅಮೆಜಾನ್ iQOO Quest Days ಸೇಲ್ ವಿಭಿನ್ನ ಬಜೆಟ್ ಮತ್ತು ಅಗತ್ಯಗಳಿಗೆ ತಕ್ಕಂತೆ ಹಲವು ಆಯ್ಕೆಗಳನ್ನು ಒದಗಿಸುತ್ತಿದೆ. ಸಮಯಾವಕಾಶ ಸೀಮಿತವಾಗಿರುವುದರಿಂದ, ಆಸಕ್ತ ಗ್ರಾಹಕರು ಫೆಬ್ರವರಿ 12ರೊಳಗೆ ಈ ಡೀಲ್‌ಗಳನ್ನು ಪರಿಶೀಲಿಸಿ ತಮ್ಮ ಅಗತ್ಯಕ್ಕೆ ತಕ್ಕ iQOO ಸ್ಮಾರ್ಟ್‌ಫೋನ್ ಆಯ್ಕೆ ಮಾಡಿಕೊಳ್ಳಬಹುದು.

Best Mobiles in India

English summary
Amazon’s iQOO Quest Days Sale is now live from February 9 to February 12, offering exciting deals on iQOO smartphones across flagship, mid-range, and budget segments. Buyers can enjoy up to ₹4,000 instant bank discount along with no-cost EMI options on select bank cards, making it a great time to upgrade to a new smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+