Home
ಸುದ್ದಿಜಾಲ

ಅಮೆಜಾನ್ ನಿಂದ ಸ್ಮಾರ್ಟ್ ಫೋನ್: ಆರಂಭವಾಗಲಿದೆ ಬೆಲೆ ಸಮರ...!!!

ಈ ಸ್ಮಾರ್ಟ್ ಫೋನ್ ಅಮೆಜಾನ್ ಆಲೆಕ್ಸಾ ಸಪೋರ್ಟ್ ಮಾಡಲಿದ್ದು, ಮಾಧ್ಯಮ ಬೆಲೆಯ ಸ್ಮಾರ್ಟ್ ಫೋನ್ ನಲ್ಲಿರುವ ಎಲ್ಲಾ ಆಯ್ಕೆಗಳು ಈ ಫೋನಿನಲ್ಲಿ ಇರಲಿದೆ ಎನ್ನಲಾಗಿದೆ.

By Precilla Dias

ಅಮೆಜಾನ್ ತನ್ನದೇ ಆದ ಸ್ಮಾರ್ಟ್ ಫೋನ್ ವೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಈಗಾಗಲೇ ಈ ದಿಸೆಯಲ್ಲಿ ಕಾರ್ಯಚಟುವಟಿಕೆಯನ್ನು ಆರಂಭಿಸಿದೆ. ಈ ಸ್ಮಾರ್ಟ್ ಫೋನಿಗೆ 'ಐಸ್’ ಎಂದು ಕೋಡ್ ನೀಡಲಾಗಿದೆ. ಇದು ಅಮೆಜಾನ್ ಹಿಂದೆ ಲಾಂಚ್ ಮಾಡಿದ್ದ ಫೈಲ್ ಫೋನಿನ ಮುಂದುವರೆದ ಭಾಗವಾಗಿದೆ.

ಅಮೆಜಾನ್ ನಿಂದ ಸ್ಮಾರ್ಟ್ ಫೋನ್: ಆರಂಭವಾಗಲಿದೆ ಬೆಲೆ ಸಮರ...!!!

ಶೀಘ್ರವೇ ಲಾಂಚ್ ಆಗಲಿರುವ ಅಮೆಜಾನ್ ಫೋನಿನಲ್ಲಿ ಗೂಗಲ್ ಅಪ್ಲಿಕೇಷನ್ ಗಳು ಪ್ರೀ ಇನ್ಸ್ಟಾಲ್ ಆಗಿರಲಿದೆ. ಅದಲ್ಲದೇ ಗೂಗಲ್ ಸಾಫ್ಟ್ ವೇರ್ ಗಳಿಗಾಗಿಯೇ ಹೆಚ್ಚಿನ ಜಾಗವನ್ನು ಇದರಲ್ಲಿ ಬಿಟ್ಟು ಕೊಡಲಾಗಿದೆ. ಈ ಹಿಂದೆ ಫೈರ್ ಫೋನಿನ ಬಿಡುಗಡೆ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಸರಿ ಪಡಿಸಿಕೊಂಡು ಈ ಹೊಸ ಫೋನನ್ನು ಮಾರುಕಟ್ಟೆಗೆ ಬಿಡಲಿದೆ.

ಈ ಸ್ಮಾರ್ಟ್ ಫೋನ್ ಅಮೆಜಾನ್ ಆಲೆಕ್ಸಾ ಸಪೋರ್ಟ್ ಮಾಡಲಿದ್ದು, ಮಾಧ್ಯಮ ಬೆಲೆಯ ಸ್ಮಾರ್ಟ್ ಫೋನ್ ನಲ್ಲಿರುವ ಎಲ್ಲಾ ಆಯ್ಕೆಗಳು ಈ ಫೋನಿನಲ್ಲಿ ಇರಲಿದೆ ಎನ್ನಲಾಗಿದೆ. ಅದಲ್ಲಿಯೂ ಭಾರತೀಯ ಮಾರುಕಟ್ಟೆಯ ನಾಡಿ ಮಿಡಿತದ ಮೇಲೆ ಬೆಲೆಯನ್ನು ನಿಗಧಿ ಮಾಡಲಿದೆ.

5.2 ಇಲ್ಲವೇ 5.5 ಇಂಚಿನ ಡಿಸ್ ಪ್ಲೇಯನ್ನು ಈ ಫೋನ್ ಹೊಂದಿರಲಿದ್ದು, ಆಕ್ಟಾ ಕೋರ್ ಪ್ರೋಸೆಸರ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 435 ಪ್ರೋಸೆಸರ್ ಇದರಲ್ಲಿದೆ. ಅಲ್ಲದೇ 1.4GHz ವೇಗವನ್ನು ಹೊಂದಿರಲಿದೆ. ಇದರೊಂದಿಗೆ ಆಡ್ರಿನೋ 505 GPU ಮತ್ತು 2GB RAM ಅನ್ನು ಕಾಣಬಹುದಾಗಿದೆ. 16 GB ಇಂಟರ್ನಲ್ ಮೆಮೊರಿ ಇದೆ.

13 MP ಹಿಂಬದಿಯ ಕ್ಯಾಮೆರಾ ಇರಲಿದ್ದು, ಮುಂಭಾಗದ ಕ್ಯಾಮೆರಾ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ. ಆಂಡ್ರಾಯ್ಡ್ ನ್ಯಾಗದಲ್ಲಿ ಈ ಸ್ಮಾರ್ಟ್ ಫೋನ್ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಈ ಫೋನ್ ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ರೂ.6000ಕ್ಕೆ ದೊರೆಯುವ ಸಾಧ್ಯತೆಯೂ ಹೆಚ್ಚಾಗಿದ್ದು, ಮೊದಲಿಗೆ ಈ ಫೋನ್ ಅಮೆರಿಕಾದಲ್ಲಿ ಲಾಂಚ್ ಆಗಲಿದ್ದು, ನಂತರ ಬೇರೆ ಬೇರೆ ಕಡೆಗಳಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
According to a report, Amazon is planning to launch a new smartphone lineup branded as "Ice".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+