ಅಮೇಜಾನ್ ಪೇ ಬ್ಯಾಲೆನ್ಸ್ ಗೆ 5000 ರುಪಾಯಿ ಸೇರಿಸಿದರೆ 1000 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯ
ಅಮೇಜಾನ್ ಈಗಾಗಲೇ ತನ್ನ ಗ್ರೇಟ್ ಇಂಡಿಯನ್ ಸೇಲಿನ ದಿನಾಂಕವನ್ನು ಪ್ರಕಟಿಸಿದೆ. ಭಾರತೀಯ ಬಳಕೆದಾರರಿಗಾಗಿ ಮತ್ತೊಂದಿಷ್ಟು ಸಿಹಿ ಸುದ್ದಿಯನ್ನು ಇದೀಗ ಅಮೇಜಾನ್ ನೀಡುತ್ತಿದೆ. ಅಮೇಜಾನ್ ಎರಡು ಸ್ಪೆಷಲ್ ಆಫರ್ ನ್ನು ನೀಡುತ್ತಿದ್ದು, ಯಾವ ಅಮೇಜಾನ್ ಬಳಕೆದಾರರು ತಮ್ಮ ಅಮೇಜಾನ್ ಪೇ ಇ-ವ್ಯಾಲೆಟ್ ಗೆ ಮುಂಚಿತವಾಗಿಯೇ ಹಣ ಹಾಕುತ್ತಾರೋ ಅವರಿಗೆ 1000 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ನೀಡುವ ವಿಭಿನ್ನ ಆಫರ್ ಇದಾಗಿದೆ.

ಎರಡು ಪೇ ಕ್ಯಾಷ್ ಲೋಡ್ ಆಫರ್:
ಅಮೇಜಾನ್ ಪೇ ಕ್ಯಾಷ್ ಲೋಡ್ ಆಫರ್ ನ ಮೊದಲನೆಯದ್ದನ್ನು ಜನವರಿ 1,2019 ರಂದು ಪ್ರಕಟಿಸಲಾಗಿತ್ತು ಮತ್ತು ಅಮೇಜಾನ್ ಪೇ ಕ್ಯಾಷ್ ಲೋಡ್ ನ ಎರಡನೇ ಆಫರ್ ನ್ನು ಜನವರಿ 12,2019 ರಂದು ಪ್ರಕಟಿಸಲಾಗಿದೆ. ಎರಡೂ ಆಫರ್ ಗಳು ಜನವರಿ 31,2019 ರ ವರೆಗೆ ಸಿಗುತ್ತದೆ.

ಎರಡು ಕ್ಯಾಷ್ ಬ್ಯಾಕ್ ಆಫರ್ ಲಭ್ಯ:
ಮೊದಲನೇ ಅಮೇಜಾನ್ ಪೇ ಮೊದಲನೆ ಆಫರ್ ನ ಅನ್ವಯ ಅಮೇಜಾನ್ ಪೇ ಇ-ವ್ಯಾಲೆಟ್ ಗೆ 100 ರುಪಾಯಿ ಹಾಕಿದರೆ 50 ರುಪಾಯಿ ಕ್ಯಾಷ್ ಬ್ಯಾಕ್ ನ್ನು ನೀಡಲಾಗುತ್ತದೆ. ಎರಡನೇ ಆಫರ್ ನಲ್ಲಿ ಇ-ವ್ಯಾಲೆಟ್ ಗೆ 5000 ರುಪಾಯಿ ಸೇರಿಸಿದರೆ 1000 ರುಪಾಯಿ ಕ್ಯಾಷ್ ಬ್ಯಾಕ್ ನ್ನು ನೀಡಲಾಗುತ್ತದೆ.

ಅಮೇಜಾನ್ ಪೇ ಕ್ಯಾಷ್ ಲೋಡ್ ಆಫರ್ ಪಡೆಯುವುದು ಹೇಗೆ?
ಅಮೇಜಾನ್ ಪೇ ಕ್ಯಾಷ್ ಲೋಡ್ ಆಫರ್ ನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ನಿಮಗೆ ಕುತೂಹಲವಿದ್ದರೆ ನಾವಿಲ್ಲಿ ವಿವರಣೆಯನ್ನು ನೀಡುತ್ತಿದ್ದೇವೆ. ಈ ಕ್ಯಾಷ್ ಬ್ಯಾಕ್ ಆಫರ್ ನ್ನು ಪಡೆಯಲು ಮೊದಲು ನೀವು ಅಮೇಜಾನ್ ಇ-ರೀಟೈಲ್ ಫ್ಲಾಟ್ ಫಾರ್ಮ್ ನಲ್ಲಿ ಖರೀದಿ ಮಾಡಿ ಮತ್ತು ಪೇ-ಆನ್-ಡೆಲಿವರಿ ಆಯ್ಕೆಯನ್ನು ಪೇಮೆಂಟ್ ಆಯ್ಕೆಯಲ್ಲಿ ಆರಿಸಿ. ಯಾವಾಗ ನಿಮ್ಮ ಪ್ರೊಡಕ್ಟ್ ನಿಮಗೆ ತಲುಪುತ್ತದೆಯೋ ಆಗ ಹಣವನ್ನು ಅಮೇಜಾನ್ ಪೇ ಇ-ವ್ಯಾಲೆಟ್ ಗೆ ಲೋಡ್ ಮಾಡಿ( ಕನಿಷ್ಟ Rs.100 ಅಥವಾ Rs.5000) ಮತ್ತು ಅದರಿಂದ ಪಾವತಿ ಮಾಡಿ.

ಪ್ರಾಥಮಿಕ ಪಾವತಿಯನ್ನು ಆಧರಿಸಿರುತ್ತದೆ:
ನಿಮ್ಮ ಪ್ರಾಥಮಿಕ ಪೇಮೆಂಟ್ ನ ಆಧರಿಸಿ ನಿಮಗೆ ಕ್ಯಾಷ್ ಬ್ಯಾಕ್ (50 ರುಪಾಯಿ ಅಥವಾ 1000 ರುಪಾಯಿ) ಅಮೇಜಾನ್ ಪೇ ಗಿಫ್ಟ್ ಕಾರ್ಡ್ ರೂಪದಲ್ಲಿ ಲಭ್ಯವಾಗುತ್ತದೆ. ಇದು ನಿಮಗೆ ಕೆಲಸದ ಅವಧಿಯ 7 ದಿನಗಳಲ್ಲಿ ಲಭ್ಯವಾಗುತ್ತದೆ.

ಒಬ್ಬರಿಗೆ ಒಂದೇ ಕ್ಯಾಷ್ ಬ್ಯಾಕ್:
ಈ ಕ್ಯಾಷ್ ಬ್ಯಾಕ್ ಮೊತ್ತವನ್ನು ನೀವು ಪುನಃ ಅಮೇಜಾನ್ ಇಂಡಿಯಾದ ಇ-ರೀಟೈಲ್ ಫ್ಲಾಟ್ ಫಾರ್ಮ್ ನಲ್ಲಿ ಗಿಫ್ಟ್ ಕಾರ್ಡ್ ನ ಅವಧಿ ಮುಗಿಯುವ ಒಳಗೆ ಖರೀದಿ ಮಾಡುವುದಕ್ಕೆ ಬಳಕೆ ಮಾಡಬಹುದು. ಎರಡರಲ್ಲಿ ಒಂದು ಆಫರ್ ನ ಕ್ಯಾಷ್ ಬ್ಯಾಕ್ ನ್ನು ಮಾತ್ರವೇ ಒಬ್ಬ ವ್ಯಕ್ತಿ ಪಡೆಯಲು ಸಾಧ್ಯವಿರುತ್ತದೆ ಮತ್ತು ಗರಿಷ್ಟ ಮೊತ್ತದ ಕ್ಯಾಷ್ ಬ್ಯಾಕ್ ನ್ನು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.

ಗ್ರೇಟ್ ಇಂಡಿಯನ್ ಸೇಲ್ ನಲ್ಲೂ ಬಳಸಿ:
ಬಳಕೆದಾರರು ಈ ಕ್ಯಾಷ್ ಬ್ಯಾಕ್ ನ್ನು ಕಂಪೆನಿಯು ಆಯೋಜಿಸಿರುವ ಗ್ರೇಟ್ ಇಂಡಿಯನ್ ಸೇಲ್ ನಲ್ಲೂ ಕೂಡ ಬಳಕೆ ಮಾಡಬಹುದು. ಜನವರಿ 20 ರಿಂದ ಜನವರಿ 23ರ ವರೆಗೆ ಈ ಸೇಲ್ ನಡೆಯುತ್ತದೆ. ಇನ್ನು ಪ್ರೈಮ್ ಬಳಕೆದಾರರು ಜನವರಿ 19 ರ ಮಧ್ಯಾಹ್ನ 12 ಘಂಟೆಗೆ ಆಕ್ಸಿಸ್ ಮಾಡಲು ಅವಕಾಶವಿರುತ್ತದೆ.


Click it and Unblock the Notifications








