ಇನ್ಯಾಕೆ ತಡ ಕೂಡಲೇ ಖರೀದಿಸಿ! ಆಪಲ್ ವಾಚ್ 8 ಮೇಲೆ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್!
ಆನ್‌ಲೈನ್ ಶಾಪಿಂಗ್ ಪ್ರಿಯರ ಬಹು ನಿರೀಕ್ಷಿತ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಇಂದಿನಿಂದ ಲೈವ್ ಆಗಿದೆ. ಸೇಲ್ ಶುರುವಾಗ್ತಿದ್ದ ಹಾಗೇ ಶಾಪಿಂಗ್ ಪ್ರಿಯರು ಡಿಸ್ಕೌಂಟ್ ಆಫರ್‌ನಲ್ಲಿ ಅನೇಕ ಡಿವೈಸ್‌ಗಳನ್ನು ಖರೀದಿಸುತ್ತಿದ್ದಾರೆ. ಇದರಲ್ಲಿ ಆಪಲ್ ವಾಚ್ 8 ನಿಮ್ಮ ಊಹೆಗೂ ಮೀರಿದ ಡಿಸ್ಕೌಂಟ್ ಅನ್ನು ಪಡೆದುಕೊಂಡಿದ್ದು, ಶಾಪಿಂಗ್ ಪ್ರಿಯರ ಗಮನಸೆಳೆದಿದೆ.
ಹೌದು, ಆಪಲ್ ವಾಚ್ 8 ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಭಾರಿ ರಿಯಾಯಿತಿ ಪಡೆದುಕೊಂಡಿದೆ. ಅಮೆಜಾನ್ ಈ ಭಾರಿ ಆಪಲ್ ಪ್ರಾಡಕ್ಟ್‌ಗಳ ಮೇಲೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ಐಫೋನ್ 13, ಐಫೋನ್ 14, ಏರ್‌ಪಾಡ್ಸ್ ಪ್ರೊ, 2 ನೇ ತಲೆಮಾರಿನ ಏರ್‌ಪಾಡ್ಸ್ ಮೇಲೆ ಡಿಸ್ಕೌಂಟ್ ನೀಡಲಾಗ್ತಿದೆ. ಇದರೊಂದಿಗೆ ಆಪಲ್ ವಾಚ್‌ಗಳ ಮೇಲೂ ಸಹ ಆಫರ್ ಘೋಷಿಸಲಾಗಿದೆ. ಹಾಗಾದ್ರೆ ಆಪಲ್ ವಾಚ್ 8 ಮೇಲೆ ಅಮೆಜಾನ್‌ನಲ್ಲಿರುವ ಡಿಸ್ಕೌಂಟ್ ಎಷ್ಟು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ವಾಚ್ 8 ಮೇಲೆ ಏನಿದೆ ಡಿಸ್ಕೌಂಟ್
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2023 ರಲ್ಲಿ ಆಪಲ್ ವಾಚ್ 8 ಕಡಿಮೆ ಬೆಲೆಗೆ ಲಭ್ಯವಾಗ್ತಿದೆ. ಆಪಲ್‌ನ ಅಧಿಕೃತ ಸ್ಟೋರ್‌ನಲ್ಲಿ 45,900 ರೂ. ಬೆಲೆ ಪಡೆದುಕೊಂಡಿರುವ ಆಪಲ್ ವಾಚ್ 8 ಸ್ಮಾರ್ಟ್ ವಾಚ್ ಅಮೆಜಾನ್‌ನಲ್ಲಿ ಕೇವಲ 32,899ರೂ. ಬೆಲೆ ಪಡೆದುಕೊಂಡಿದೆ. ಜೊತೆಗೆ ಬ್ಯಾಂಕ್ ಕಾರ್ಡ್‌ಗಳ ಮೂಲಕ ಇನ್ನಷ್ಟು ಆಫರ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಅದರಂತೆ ನೀವು HDFC ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 3000ರೂ. ರಿಯಾಯಿತಿ ದೊರೆಯಲಿದೆ. ಹಾಗೆಯೇ, ನಿಮ್ಮ ICICI ಬ್ಯಾಂಕ್ ಕಾರ್ಡ್ ಬಳಸಿ ವಹಿವಾಟು ನಡೆಸಿದರೆ, 1,250 ರೂ.ಗಳ ಫ್ಲಾಟ್ ರಿಯಾಯಿತಿ ದೊರೆಯಲಿದೆ. ಇದೆಲ್ಲದರ ಪರಿಣಾಮ ಆಪಲ್ ವಾಚ್ 8 ಬೆಲೆ ಇನ್ನಷ್ಟು ಕಡಿಮೆಯಾಗಲಿದೆ.

ಆಪಲ್ ವಾಚ್ 8 ಫೀಚರ್ಸ್ ಹೇಗಿದೆ?
ಆಪಲ್ ವಾಚ್ 8 ಈ ಹಿಂದಿನ ಸ್ಮಾರ್ಟ್‌ವಾಚ್‌ಗಳಿಗಿಂತ ಭಿನ್ನವಾದ ಡಿಸೈನ್ ಹೊಂದಿದೆ. ಇದು ಫಾಲ್ ಡಿಟೆಕ್ಷನ್, ಮೆಡಿಕಲ್ ಎಮರ್ಜೆನ್ಸಿ ಸರ್ವಿಸ್ ನಂತಹ ಸೇವೆಗಳನ್ನು ಪಡೆದಿದೆ. ಈ ಸಿರೀಸ್‌ನ ವಾಚ್‌ಗಳು ಟೆಂಪ್‌ರೇಚರ್ ಸೆನ್ಸಾರ್ ಪ್ರತಿ 5 ಸೆಕೆಂಡಿಗೆ ಟೆಂಪ್‌ರೇಚರ್‌ನಲ್ಲಿ ಬದಲಾವಣೆಗಳನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡಲಿದೆ. ಈ ಹೊಸ ಸ್ಮಾರ್ಟ್‌ವಾಚ್ ಕ್ರ್ಯಾಶ್ ಡಿಟೆಕ್ಟರ್ ಅನ್ನು ಸಹ ಒಳಗೊಂಡಿದೆ. ಇದು ಎರಡು ಮೋಷನ್ ಸೆನ್ಸರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಿಂದ ನೀವು ತೊಂದರೆಯಲ್ಲಿರುವುದು ಕಂಡು ಬಂದರೆ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ SOS ಕಾಲ್ ಕಳುಹಿಸುತ್ತದೆ. ಈ ಮೂಲಕ ಎಮರ್ಜೆನ್ಸಿ ಕಂಟ್ಯಾಕ್ಟ್‌ಗಳಿಗೆ ತಕ್ಷಣವೇ ಸೂಚನೆ ನೀಡಲಿದೆ.

ಇದಲ್ಲದೆ ECG, ರಕ್ತದ ಆಮ್ಲಜನಕದ ಮಾನಿಟರಿಂಗ್ (SpO2), ಮತ್ತು ಫಾಲ್ ಡಿಟೆಕ್ಷನ್ ಫೀಚರ್ಸ್‌ಗಳನ್ನು ಕೂಡ ಹೊಂದಿದೆ. ಇನ್ನು ಆಪಲ್ ವಾಚ್ ಸರಣಿ 8 ನ್ಯೂ ಲೋ ಪವರ್ ಮೋಡ್ ಅನ್ನು ಒಳಗೊಂಡಿದೆ. ಇದು ಎಲ್ಲಾ ಅನಗತ್ಯ ಕ್ರಿಯೆಗಳನ್ನು ಕಡಿಮೆ ಮಾಡುವ ಮೂಲಕ 36 ಗಂಟೆಗಳ ಸ್ಟ್ಯಾಂಡ್‌ಬೈ ಅನ್ನು ಒದಗಿಸಲು ಸಹಾಯ ಮಾಡಲಿದೆ. ಇನ್ನು ಆಪಲ್ ವಾಚ್ ಸರಣಿ 8 ಸ್ಟ್ಯಾಂಡರ್ಡ್ ರೂಪಾಂತರ ನಾಲ್ಕು ಬಣ್ಣಗಳು ಮತ್ತು ಸ್ಟೇನ್‌ಲೆಸ್ ಸ್ಟೀಲ್ ರೂಪಾಂತರದ ಆಯ್ಕೆಯು ಮೂರು ಬಣ್ಣಗಳ ಆಯ್ಕೆಯಲ್ಲಿ ಬರಲಿದೆ. ಇನ್ನು ಆಪಲ್ ವಾಚ್ ಮಾತ್ರವಲ್ಲದೆ ಅಮೆಜಾನ್ ತಾಣದಲ್ಲಿ ಆಪಲ್ ಕಂಪೆನಿಯ ಇತರೆ ಡಿವೈಸ್‌ಗಳನ್ನು ಸಹ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








