Home
ಸುದ್ದಿಜಾಲ

ಅಮೆಜಾನಿನಲ್ಲಿ ಒಂದು ತೆಂಗಿನಕಾಯಿ ಚಿಪ್ಪಿನ ಬೆಲೆ ಕೇಳಿ ಮೂರ್ಚೆ ಹೋಗಬೇಡಿ!

ಇದು ಇಂದಿನ ಅತಿರೇಕವೋ ಅಥವಾ ವ್ಯಾಪಾರವೋ ತಿಳಿಯುತ್ತಿಲ್ಲ. ಆದರೆ, ಹಳ್ಳಿಗಳಲ್ಲಿ ಯಾರಿಗೂ ಬೇಡವಾದ ಮತ್ತು ಎಲ್ಲದಕ್ಕೂ ಬೇಕಾಗಿರುವ ತೆಂಗಿನ ಚಿಪ್ಪು ಈಗ ಅಮೆಜಾನ್ ತಾಣದಲ್ಲಿ ಮಾರಾಟಕ್ಕೆ ಲಭ್ಯವಿದೆ.! ಅಯ್ಯೂ, ಈಗ ಸಗಣಿಯೇ ಬೆರಣಿಯಾಗಿ ಆನ್‌ಲೈನಿನಲ್ಲಿ ಮಾರಾಟಕ್ಕಿದೆ ಇನ್ನು ಇದರಲ್ಲೇನು ವಿಶೇಷ ಎಂದು ನೀವು ಪ್ರಶ್ನಿಸಬಹುದು. ಆದರೆ ಇಲ್ಲಿ ವಿಶೇಷತೆ ಇದೆ.

ಹೌದು, ಎಲ್ಲರೂ ಒಮ್ಮೆ ತಲೆ ಮೇಲೆ ಕೈಹೊತ್ತು ಅಚ್ಚರಿಪಡುವ ಸಂಗತಿ ಇದಾಗಿದ್ದು, ಅಮೆಜಾನಿನಲ್ಲಿ ಕೇವಲ ಒಂದು ಚಿಪ್ಪಿಗೆ 1289 ರೂಪಾಯಿ ಬೆಲೆಯನ್ನು ನಿಗದಿಪಡಿಸಿರುವುದನ್ನು ಕೇಳಿ ನೀವು ಮೂರ್ಚೆ ಹೋಗಬಹುದು. ತೆಂಗಿನ ಕಾಯಿ ಸುಲಿದು ಬಿಸಾಕಿದ ನಂತರ ಬಿಸಾಡುವ ಅದರ ಮೇಲಿನ ಚಿಪ್ಪಿನ ಬೆಲೆಯೇ ಇಲ್ಲಿ 1289 ರೂಪಾಯಿಗಳು ಎಂದರೆ ನೀವೀಗ ನಂಬಲೇಬೇಕು.

ಅಮೆಜಾನಿನಲ್ಲಿ ಒಂದು ತೆಂಗಿನಕಾಯಿ ಚಿಪ್ಪಿನ ಬೆಲೆ ಕೇಳಿ ಮೂರ್ಚೆ ಹೋಗಬೇಡಿ!

ಇಂಟರ್ನೆಟ್‌ನಲ್ಲಿ ಏನೆಲ್ಲಾ ಸಿಗುತ್ತದೆ ಅಂತ ನಾವು ಅಚ್ಚರಿಪಡುತ್ತೇವೆ. ಆದರೆ, ಅಮೆಜಾನಿನಲ್ಲಿ ಒಂದು (ವಾಸ್ತವವಾಗಿ ಅರ್ಧ) ಚಿಪ್ಪಿಗೆ 1289 ರೂಪಾಯಿ ಬೆಲೆ ಎಂದರೆ ಖಂಡಿತವಾಗಿಯೂ ಅತಿರೇಕ ಎನಿಸುತ್ತಿದೆ. ಮಾರುಕಟ್ಟೆಯಲ್ಲಿ 15 ರೂಪಾಯಿಗೆ ಒಂದು ತೆಂಗಿನಕಾಯಿಯೇ ಸಿಗುತ್ತದೆ. ಆದರೆ, ತೆಂಗಿನ ಕಾಯಿಯೂ ಅಲ್ಲ ಚಿಪ್ಪಿಗೆ ಇಷ್ಟು ಬೆಲೆಯೇ ಎಂದು ಹಲವರು ಹೌರಾರಿದ್ದಾರೆ.

ಇನ್ನು ಇದಕ್ಕೆ ಕೆಲವರು ರಿವ್ಯೂ ಮಾಡಿ, ರೇಟಿಂಗ್ ಕೂಡ ನೀಡಿ ಅಮೆಜಾನ್ ತಾಣದ ಕಾಲೆಳೆದಿದ್ದಾರೆ. 'ಇದು ತೋರಿಸಿದ ಗಾತ್ರದಷ್ಟು ದೊಡ್ಡದಾಗಿಲ್ಲ, ಚಿಕ್ಕದಾಯಿತು' ಅಂತ ಕೊರಗಿ ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು, 'ಈ ಬೆಲೆಗೆ ಅರ್ಧ ತೆಂಗಿನ ಕಾಯಿಯ ಚಿಪ್ಪು ನೀಡುವ ಬದಲು, ಎರಡು ಚಿಪ್ಪುಗಳನ್ನು (ಇಡೀ ಕಾಯಿಯದ್ದು)ನೀಡಿದರೆ ಒಳ್ಳೇದಿತ್ತು ಅಂತ ಕಿಚಾಯಿಸಿದ್ದಾರೆ.

ಅಮೆಜಾನಿನಲ್ಲಿ ಒಂದು ತೆಂಗಿನಕಾಯಿ ಚಿಪ್ಪಿನ ಬೆಲೆ ಕೇಳಿ ಮೂರ್ಚೆ ಹೋಗಬೇಡಿ!

ಈ ಕೆಲಸಕ್ಕೆ ಬಾರದ ಚಿಪ್ಪುಗಳನ್ನು ಯಾರು ಖರೀದಿ ಮಾಡುತ್ತಾರೋ, ಅವರನ್ನು ನೋಡಿದ್ರೆ ಪಾಪ ಅನಿಸ್ತಿದೆ ಎಂದು ಒಬ್ಬರು ಬರೆದಿದ್ದರೆ, 15 ರೂಪಾಯಿ ಕೊಟ್ಟರೆ ಇಡೀ ತೆಂಗಿನಕಾಯಿಯೇ ಸಿಗುತ್ತದೆ. ನಿಮ್ಮಲ್ಲಿ ಹಣ ಜಾಸ್ತಿ ಇದೆಯೆಂದಾದರೆ ಹೋಗಿ ಬಡವರಿಗೆ ಹಂಚಿಬಿಡಿ ಅಂತನೂ ಇನ್ನೊಬ್ಬರು ಬಿಟ್ಟಿ ಸಲಹೆ ಕೊಟ್ಟಿದ್ದಾರೆ. ಹಾಗಾಗಿ, ನಿಮ್ಮ ಅಭಿಪ್ರಾಯವನ್ನು ಒಮ್ಮೆ ಹೊರಹಾಕಿ.!

More from GizBot

Best Mobiles in India

English summary
Amazon is selling ‘natural’ coconut shells for nearly Rs 1300 and Indians are in shock!.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+