10 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ಅಮೆಜಾನ್ 'ಇಕೋ ಶೋ' ಲಾಂಚ್!!

|

ತನ್ನದೇ ಹಲವು ಉತ್ಪನ್ನಗಳ ಮೂಲಕ ಗಮನಸೆಳೆಯುತ್ತಿರುವ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಸಂಸ್ಥೆ ಅಮೆಜಾನ್ ಇಂದು ಅಮೆಜಾನ್ ಇಕೋ ಶೋ ಮಾದರಿಯನ್ನು ಪರಿಚಯಿಸಿದೆ. ಈಗಾಗಲೇ ಸ್ಮಾರ್ಟ್ ಸ್ಪೀಕರ್ ಮೂಲಕ ಜನಮನ ಗೆದ್ದಿರುವ ಇಕೋ ಸ್ಪೀಕರ್ ಸರಣಿಯನ್ನು ವಿಸ್ತರಿಸಿರುವ ಅಮೆಜಾನ್, 10 ಇಂಚಿನ ಎಚ್‌ಡಿ ಡಿಸ್‌ಪ್ಲೇಯ ಇಕೋ ಶೋ ಬಿಡುಗಡೆ ಮಾಡಿದೆ.

ಈ ಮೊದಲು ಅಮೆಜಾನ್ ಇಕೋ ಸರಣಿಯಲ್ಲಿ ಇಕೋ ಇನ್‌ಪುಟ್, ಇಕೋ ಡಾಟ್, ಇಕೋಸ್ಪಾಟ್ ಮತ್ತು ಇಕೋ ಪ್ಲಸ್ ಅನ್ನು ಹೊರತಂದಿತ್ತು. ಇದೀಗ 10 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಸಹಿತದ ಅಮೆಜಾನ್ ಇಕೋ ಶೋ ಬಿಡುಗಡೆ ಮಾಡಿದ್ದು, ಡಾಲ್ಬಿ ಡಿಜಿಟಲ್ ಸೌಂಡ್ ಸ್ಪೀಕರ್ ವ್ಯವಸ್ಥೆ ಹೊಂದಿರುವ ಈ ಡಿವೈಸ್ ಅಲೆಕ್ಸಾ ಆಪ್, ವಿಡಿಯೋ ಕಾಲಿಂಗ್‌ಗೆ ಬೆಂಬಲಿಸದೆ.

10 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ಅಮೆಜಾನ್ 'ಇಕೋ ಶೋ' ಲಾಂಚ್!!

ವರ್ಧಿತ ಆಡಿಯೊ-ದೃಶ್ಯ ಅನುಭವವನ್ನು ಒದಗಿಸುವ ಎಕೋ ಶೋ ಅನ್ನು ಪರಿಚಯಿಸುವ ಮೂಲಕ ಈ ಧ್ವನಿ-ಮೊದಲ ಅನುಭವವನ್ನು ಉತ್ತಮಗೊಳಿಸುತ್ತಿದ್ದೇವೆ. ದೊಡ್ಡ ಪರದೆಯ ಗಾತ್ರ ಯುಟಿಲಿಟಿ ಅನ್ನು ಹೆಚ್ಚಿಸುತ್ತದೆ ಮತ್ತು ನೀವು ಕೋಣೆಯಲ್ಲಿ ಎಲ್ಲಿಯೇ ಇದ್ದರೂ ನಿಮಗೆ ವಿಷಯಗಳನ್ನು ತೋರಿಸಲು ಅಲೆಕ್ಸಾವನ್ನು ಕೇಳಲು ಸುಲಭವಾಗುತ್ತದೆ ಎಂದು ಅಮೆಜಾನ್ ಹೇಳಿದೆ.

ಭರ್ಜರಿಯಾಗಿ ಎಕೋ ಶೋ ಸ್ಮಾರ್ಟ್ ಸ್ಪೀಕರ್ ಲಾಂಚ್ ಮಾಡಿದ ಅಮೆಜಾನ್, ನೂತನ ಇಕೋ ಶೋ ಡಿವೈಸ್‌ನಲ್ಲಿ ಎಚ್‌ಡಿ ಹ್ಯಾಂಡ್ಸ್ ಫ್ರೀ ವಿಡಿಯೋ ಕಾಲಿಂಗ್‌ಗೆ 5 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿದ್ದು, ಅಲೆಕ್ಸಾ ಆಪ್, ಸ್ಕೈಪ್ ವಿಡಿಯೋ ಕಾಲಿಂಗ್ ಬಳಸಿಕೊಳ್ಳಬಹುದು.ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ಇಕೋ ಶೋ ಬೆಲೆ 22,999 ರೂ.ಗಳು ಎಂದು ಹೇಳಿದೆ.

10 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ಅಮೆಜಾನ್ 'ಇಕೋ ಶೋ' ಲಾಂಚ್!!

ಇನ್ನು ಇಕೋ ಶೋ ಲಾಂಚ್ ಸಂದರ್ಭದಲ್ಲಿ ವಿಶೇಷ ಕೊಡುಗೆಯಾಗಿ ಫಿಲಿಪ್ಸ್ ಹ್ಯೂ ಬಲ್ಬ್ ನೀಡುವುದುದಾಗಿ ಅಮೆಜಾನ್ ಹೇಳಿದೆ. ಸಿಟಿಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗೆ 2000 ರೂ. ಕ್ಯಾಶ್‌ಬ್ಯಾಕ್, ನೋ ಕಾಸ್ಟ್‌ ಇಎಂಐ ಆಯ್ಕೆಹೊಂದಿರುವ ಅಮೆಜಾನ್ ಎಕೋ ಶೋ ಸ್ಮಾರ್ಟ್ ಸ್ಪೀಕರ್ ಅಮೆಜಾನ್ ಪ್ರಧಾನ ವೀಡಿಯೊಗಳನ್ನು ವೀಕ್ಷಿಸಲು ಅನುಮತಿಸುತ್ತದೆ.

Best Mobiles in India

English summary
As a part of the launch offer, the customers who buy the Echo Show smart speaker via Amazon India's e-retail platform or retail stores can get a Philips Hue bulb at no additional cost. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X