ಅಮೆಜಾನ್ ಫೈರ್‌ ಎಚ್‌ಡಿ 8 ಸರಣಿಯ ಮೂರು ಹೊಸ ಟ್ಯಾಬ್ಲೆಟ್‌ ಬಿಡುಗಡೆ!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಷ್ಟೇ ಜನಪ್ರಿಯತೆಯನ್ನ ಟ್ಯಾಬ್ಲೆಟ್‌ವಲಯವೂ ಕೂಡ ಪ್ರಸಿದ್ಧಿಯನ್ನ ಪಡೆದುಕೊಂಡಿದೆ. ಈಗಾಗಲೇ ಹಲವು ಮಾದರಿಯ ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳ ಟ್ಯಾಬ್ಲೆಟ್‌ಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಅಮೆಜಾನ್‌ ಟ್ಯಾಬ್ಲೆಟ್‌ ಕೂಡ ಉತ್ತಮ ಜನಪ್ರಿಯತೆಯನ್ನ ಪಡೆದುಕೊಂಡಿವೆ. ಸದ್ಯ ಇದೀಗ ಅಮೆಜಾನ್ ಕಂಪೆನಿ ತನ್ನ ಹೊಸ ಫೈರ್ ಎಚ್‌ಡಿ 8 ಸರಣಿಯ ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಅಮೆಜಾನ್‌ ಕಂಪೆನಿ ತನ್ನ ಹೊಸ ಫೈರ್ ಎಚ್‌ಡಿ 8 ಸರಣಿಯ ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಸರಣಿಯಲ್ಲಿ ಅಮೆಜಾನ್‌ ಫೈರ್‌ ಎಚ್‌ಡಿ 8, ಎಚ್‌ಡಿ 8 ಪ್ಲಸ್ ಮತ್ತು ಎಚ್‌ಡಿ 8 ಕಿಡ್ಸ್ ಎಡಿಷನ್ ಸೇರಿವೆ. ಇನ್ನು ಈ ಹೊಸ ಅಮೆಜಾನ್ ಟ್ಯಾಬ್ಲೆಟ್‌ಗಳು ವೇಗವಾದ ಚಿಪ್‌ಸೆಟ್‌ಗಳು, ಮತ್ತು ಹೊಸ ಮಾದರಿಯ ವಿನ್ಯಾಸವನ್ನ ಹೊಂದಿವೆ. ಇದಲ್ಲದೆ ಈ ಟ್ಯಾಬ್ಲೆಟ್‌ಗಳು ಉತ್ತಮ ಸಂರಚನೆ ಮತ್ತು ಯುಎಸ್‌ಬಿ-ಸಿ ಕನೆಕ್ಟರ್‌ಗಳನ್ನು ಹೊಂದಿವೆ. ಇದಲ್ಲದೆ ಈ ಟ್ಯಾಬ್ಲೆಟ್‌ನಲ್ಲಿ ಹೊಸ ಕ್ವಾಡ್-ಕೋರ್ ಪ್ರೊಸೆಸರ್‌ ಹೊಂದಿದ್ದು, ಹಿಂದಿನ ತಲೆಮಾರಿನ ಟ್ಯಾಬ್ಲೆಟ್‌ಗಳಿಗಿಂತ 30% ವೇಗದ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಟ್ಯಾಬ್ಲೆಟ್‌ಗಳು ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಅಮೆಜಾನ್ ಫೈರ್ ಎಚ್‌ಡಿ 8

ಅಮೆಜಾನ್ ಫೈರ್ ಎಚ್‌ಡಿ 8

ಇನ್ನು ಅಮೆಜಾನ್‌ ಫೈರ್‌ ಎಚ್‌ಡಿ 8 ಟ್ಯಾಬ್ಲೆಟ್‌ 8 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದ್ದು, ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದೆ. ಇದಲ್ಲದೆ ಈ ಟ್ಯಾಬ್ಲೆಟ್‌ 2GB RAM ಹೊಂದಿದ್ದು, ಮೆಮೊರಿ ಕಾರ್ಡ್ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ. ಇನ್ನು ಈ ಟ್ಯಾಬ್ಲೆಟ್‌ ಉತ್ತಮ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಬಳಕೆದಾರರು 12 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆಯುತ್ತಾರೆ ಎಂದು ಕಂಪನಿ ಹೇಳಿದೆ. ಇದಲ್ಲದೆ ಇದು ಯುಎಸ್‌ಬಿ-ಸಿ ಪೋರ್ಟ್ ಅನ್ನು ಹೊಂದಿದ್ದು, ನಿಮಗೆ ಬಹಳಷ್ಟು ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಹಾಡುಗಳು, ಇ-ಪುಸ್ತಕಗಳು, ನಿಯತಕಾಲಿಕೆಗಳು, ಆಟಗಳು ಮತ್ತು ಶೈಕ್ಷಣಿಕ ಮತ್ತು ಮನರಂಜನಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುತ್ತದೆ ಎಂದು ಅಮೆಜಾನ್ ಹೇಳಿದೆ. ಇನ್ನು ಇದರ ಬೆಲೆ $ 89.99 (ಸುಮಾರು 6,790 ರೂ.)ಆಗಿದೆ.

ಅಮೆಜಾನ್ ಫೈರ್ ಎಚ್‌ಡಿ 8 ಪ್ಲಸ್

ಅಮೆಜಾನ್ ಫೈರ್ ಎಚ್‌ಡಿ 8 ಪ್ಲಸ್

ಅಮೆಜಾನ್ ಫೈರ್ ಎಚ್‌ಡಿ 8 ಪ್ಲಸ್ ಟ್ಯಾಬ್ಲೆಟ್‌ ಉತ್ತಮ ಮಾದರಿಯ ವಿನ್ಯಾಸವನ್ನ ಹೊಂದಿದ್ದು 3GB RAM ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಅಮೆಜಾನ್ ತನ್ನ 9W ಯುಎಸ್‌ಬಿ-ಸಿ ಚಾರ್ಜರ್ ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಟ್ಯಾಬ್ಲೆಟ್ ಅನ್ನು ಟಾಪ್ ಅಪ್ ಮಾಡಬಹುದು ಎಂದು ಹೇಳಿದೆ. ಇದು 6 ತಿಂಗಳ ಮೌಲ್ಯದ ಕಿಂಡಲ್ ಅನ್ಲಿಮಿಟೆಡ್‌ನೊಂದಿಗೆ ಬರಲಿದೆ ಎಂದು ಹೇಳಿದೆ. ಇನ್ನು ಈ ಟ್ಯಾಬ್ಲೆಟ್ 9W ಪವರ್ ಅಡಾಪ್ಟರ್ ಮತ್ತು ವಾಯರ್‌ ಲೆಸ್ ಚಾರ್ಜಿಂಗ್ ಡಾಕ್ ಅನ್ನು ಸಹ ನೀಡಿದೆ. ಇನ್ನು ಈ ಡಿವೈಸ್‌ ಡ್ಯುಯಲ್ ಸ್ಪೀಕರ್‌ಗಳನ್ನು ಸಹ ನೀಡಲಾಗಿದೆ. ಇದಲ್ಲದೆ ಈ ಟ್ಯಾಬ್ಲೆಟ್‌ನಲ್ಲಿ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯ ಹೊಂದಿರುವ ರಿಯರ್‌ ಕ್ಯಾಮೆರಾವನ್ನು ಸಹ ನೀಡಿದೆ. ಇನ್ನು ಇದರ ಬೆಲೆ $109.99 (ಸುಮಾರು 8,300 ರೂ.) ಆಗಿದೆ ಎನ್ನಲಾಗಿದೆ.

ಅಮೆಜಾನ್‌ ಫೈರ್ ಎಚ್‌ಡಿ 8 ಕಿಡ್ಸ್

ಅಮೆಜಾನ್‌ ಫೈರ್ ಎಚ್‌ಡಿ 8 ಕಿಡ್ಸ್

ಇನ್ನು ಅಮೆಜಾನ್‌ ಬಿಡುಗಡೆ ಮಾಡಿರುವ ಮೂರನೇ ಆವೃತ್ತಿಯ ಫೈರ್ ಎಚ್‌ಡಿ 8 ಕಿಡ್ಸ್‌ ಟ್ಯಾಬ್ಲೆಟ್‌ ಫ್ರೀಟೈಮ್ ಅನ್ಲಿಮಿಟೆಡ್‌ ಕಿಡ್ಸ್‌ ವರ್ಷನ್‌ ಪುಸ್ತಕಗಳು, ವೀಡಿಯೋಗಳು, ಎಜುಕೇಶನ್‌ ಅಪ್ಲಿಕೇಶನ್‌ಗಳು ಮತ್ತು ಕಿಡ್ಸ್‌ ಗೇಮ್‌ಗಳನ್ನ ನೀಡಿದೆ. ಇನ್ನು ಈ ಟ್ಯಾಬ್ಲೆಟ್‌ ನಲ್ಲಿ ಒಂದು ವರ್ಷದವರೆಗೆ 20,000 ಕ್ಕೂ ಹೆಚ್ಚು ಮಕ್ಕಳ ಸ್ನೇಹಿ ಪುಸ್ತಕಗಳನ್ನ ನೀಡಲಾಗಿದೆ. ಜೊತೆಗೆ ಈ ಟ್ಯಾಬ್ಲೆಟ್‌ ಎರಡು ವರ್ಷಗಳ ಖಾತರಿಯೊಂದಿಗೆ ನೀವು ಹೊಸ ಕಿಡ್-ಪ್ರೂಫ್ ಕೇಸ್ ಅನ್ನು ಸಹ ಪಡೆಯುತ್ತೀರಿ ಎಂದು ಕಂಪನಿಯು ಉಲ್ಲೇಖಿಸಿದೆ. ಇನ್ನು ಇದರ ಬೆಲೆ 9 139.99 (ಸರಿಸುಮಾರು 10,560 ರೂ.) ಆಗಿದೆ.

Best Mobiles in India

English summary
Amazon has launched new Fire HD 8 tablets, including a vanilla HD 8, an HD 8 Plus, and an HD 8 Kids Edition.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X