ಅಮೆಜಾನ್ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್‌ನಲ್ಲಿ ಈ ಡಿವೈಸ್‌ಗಳಿಗೆ ಬಿಗ್ ಆಫರ್!
ಆನ್‌ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣಗಳಲ್ಲಿ ಅಮೆಜಾನ್ ಕೂಡ ಒಂದಾಗಿದೆ. ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೆ ವಿಕೆಂಡ್, ಮಂತ್‌ಎಂಡ್ ಸೇಲ್‌ಗಳ ಮೂಲಕ ಹಲವು ಆಕರ್ಷಕ ಡಿಸ್ಕೌಂಟ್‌ಗಳನ್ನು ಕೂಡ ನೀಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ ಅನ್ನು ಘೋಷಣೆ ಮಾಡಿದೆ.
ಹೌದು, ಅಮೆಜಾನ್ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್ ಅನ್ನು ಆಯೋಜಿಸಿದೆ. ಇನ್ನು ಈ ಸೇಲ್ ಮಾರ್ಚ್ 10 ರಂದು ಪ್ರಾರಂಭವಾಗಿದ್ದು, ಮಾರ್ಚ್ 14 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಲ್ಯಾಪ್‌ಟಾಪ್, ವೆರಿಯೆಬಲ್ಸ್ ಡಿವೈಸ್, ಹೆಡ್‌ಫೋನ್‌ಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳ ಮೇಲೆ ವಿಶೇಷ ಆಫರ್‌ಗಳನ್ನು ನೀಡುತ್ತಿದೆ. ಹಾಗಾದ್ರೆ ಅಮೆಜಾನ್ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್‌ನಲ್ಲಿ ಏನೆಲ್ಲಾ ಆಫರ್ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನೆಲ್ಲಾ ಆಫರ್ ಲಭ್ಯ?
ಅಮೆಜಾನ್ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್‌ನಲ್ಲಿ ಸ್ಯಾಮ್‌ಸಂಗ್, ಆಪಲ್, ಬೋಟ್, ಫೈರ್-ಬೋಲ್ಟ್, ಲೆನೊವೊ, ಕ್ಯಾನನ್ ಮತ್ತು ಸೋನಿ ಕಂಪೆನಿಯ ಡಿವೈಸ್‌ಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗ್ತಿದೆ. ಇದಲ್ಲದೆ ಅಮೆಜಾನ್ ಸೇಲ್‌ನಲ್ಲಿ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 10% ಡಿಸ್ಕೌಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ HSBC ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸದರೆ 10% ಡಿಸ್ಕೌಂಟ್ ದೊರೆಯಲಿದೆ.
ಇನ್ನು ಅಮೆಜಾನ್ ಮೆಗಾ ಎಲೆಕ್ಟ್ರಾನಿಕ್ಸ್ ಡೇಸ್ ಸೇಲ್‌ನಲ್ಲಿ ಅಸುಸ್ ವಿವೋಬುಕ್ 14 ಲ್ಯಾಪ್‌ಟಾಪ್ ಕೇವಲ 35,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಆಸಕ್ತ ಖರೀದಿದಾರರು ಲ್ಯಾಪ್‌ಟಾಪ್‌ನ ಖರೀದಿಯ ಮೇಲೆ ನೋ ಕಾಸ್ಟ್ EMI ಆಯ್ಕೆಯನ್ನು ಸಹ ದೊರೆಯಲಿದೆ. ಇದಲ್ಲದೆ ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3 ಲ್ಯಾಪ್‌ಟಾಪ್ ಕೂಡ 33,490ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಜೊತೆಗೆ ಈ ಲ್ಯಾಪ್‌ಟಾಪ್ ಖರೀದಿಸುವವರು ಹೆಚ್ಚುವರಿಯಾಗಿ, ಮೂರು ತಿಂಗಳ ಪ್ಲೇ ಪಾಸ್ ಚಂದಾದಾರಿಕೆಯೊಂದಿಗೆ ಎರಡು ವರ್ಷಗಳ ವಾರಂಟಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಟ್ಯಾಬ್ಲೆಟ್‌ಗಳ ಮೇಲೆ ವಿಶೇಷ ಆಫರ್?
ಇನ್ನು ಅಮೆಜಾನ್ ತನ್ನ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ ಟ್ಯಾಬ್ಲೆಟ್‌ಗಳ ಮೇಲೆ ವಿಶೇಷ ಡಿಸ್ಕೌಂಟ್ ಪಡೆದುಕೊಂಡಿದೆ. ಅದರಂತೆ ರಿಯಲ್‌ಮಿ ಪ್ಯಾಡ್ ಸ್ಲಿಮ್ ಅನ್ನು ನೀವು 17,938ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A8 ಅನ್ನು ನೀವು ಡಿಸ್ಕೌಂಟ್‌ನಲ್ಲಿ ಕೇವಲ 14,999ರೂ. ಬೆಲೆಯಲ್ಲಿ ಖರೀದಿಸಬಹುದು. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A8 10.5 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ನಾಲ್ಕು ಡಾಲ್ಬಿ ಅಟ್ಮಾಸ್-ಆಕ್ಟಿವ್ ಮಾಡಿರುವ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಕ್ಯಾಮೆರಾಗಳ ಮೇಲೆ ಅಚ್ಚರಿಯ ಆಫರ್
ಸೋನಿ ಕಂಪೆನಿಯ ಡಿಜಿಟಲ್ ವ್ಲಾಗ್ ಸೋನಿ ಕ್ಯಾಮೆರಾ ZV 1 ಕ್ಯಾಮೆರಾವನ್ನು ನೀವು ಅಮೆಜಾನ್‌ನಲ್ಲಿ ವಿಶೇಷ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಈ ಕ್ಯಾಮೆರಾ ಪ್ರಸ್ತುತ ಅಮೆಜಾನ್ ಸೇಲ್‌ನಲ್ಲಿ ಕೇವಲ 69,490 ರೂ. ಬೆಲೆಯಲ್ಲಿ ಲಭ್ಯವಿದೆ. ಇನ್ನು ಈ ಕ್ಯಾಮೆರಾ ಫ್ಲಿಪ್-ಔಟ್,ಟೆಲ್ಟೆಬಲ್ ಎಲ್‌ಸಿಡಿ ಸ್ಕ್ರೀನ್ ಹೊಂದಿರುವ ಸೋನಿಯ ಮೊದಲ ಕಾಂಪ್ಯಾಕ್ಟ್ ಕ್ಯಾಮೆರಾ ಇದಾಗಿದೆ. ನೀವು ಮೌಂಟಿಂಗ್ ಮಾಡುವಾಗ ಬ್ರಾಕೆಟ್ ಬಳಸದೆ ಬಾಹ್ಯ ಮೈಕ್ರೊಫೋನ್‌ಗಳನ್ನು ಲಗತ್ತಿಸಲು ಇದರಲ್ಲಿ ನೀವು ಎಂಐ (ಮಲ್ಟಿ ಇಂಟರ್ಫೇಸ್) ಶೂ ಅನ್ನು ಪಡೆಯಬಹುದಾಗಿದೆ. ಇದಲ್ಲದೆ ಎಚ್‌ಡಿ (ಆಕ್ಟಿವ್ ಮೋಡ್) ಯಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡುವಾಗ, ಕ್ಯಾಮೆರಾ 11 ಪಟ್ಟು ಹೆಚ್ಚು ಸ್ಥಿರವಾದ ವೀಡಿಯೊವನ್ನು ತಲುಪಿಸಲು ಆಪ್ಟಿಕಲ್ ಮತ್ತು ಎಲೆಕ್ಟ್ರಾನಿಕ್ ಸ್ಥಿರೀಕರಣ ವಿಧಾನಗಳನ್ನು ಹೊಂದಿದೆ.


Click it and Unblock the Notifications








