ಅಮೆಜಾನ್‌ ಮೆಗಾ ಸ್ಯಾಲರಿ ಡೇ ಸೇಲ್‌: ಸ್ಮಾರ್ಟ್‌ಟಿವಿಗಳಿಗೆ 30% ರಿಯಾಯಿತಿ!

|

ವಿಶೇಷ ದಿನಗಳಲ್ಲಿ ಇ-ಕಾಮರ್ಸ್‌ ತಾಣಗಳು ಆನ್‌ಲೈನ್‌ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸೇಲ್‌ಗಳನ್ನ ಆಯೋಜಿಸುತ್ತಲೇ ಬಂದಿವೆ. ಗ್ರಾಹಕರಿಗೆ ಆಕರ್ಷಕ ಆಫರ್‌ಗಳ ಜೊತೆಗೆ ಭರ್ಜರಿ ಡಿಸ್ಕೌಂಟ್‌ ಅನ್ನು ಈ ಸೇಲ್‌ಗಳಲ್ಲಿ ನೀಡಲಾಗುತ್ತೆ. ಸದ್ಯ ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ ತನ್ನ ಗ್ರಾಹಕರಿಗಾಗಿ ಅಮೆಜಾನ್‌ ಮೆಗಾ ಸ್ಯಾಲರಿ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳು, ಎಲೆಕ್ಟ್ರಾನಿಕ್ಸ್‌ ಮತ್ತು ಇತರ ಗ್ಯಾಜೆಡ್ಸ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

ಅಮೆಜಾನ್‌

ಹೌದು, ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆನ್‌ಲೈನ್‌ ಗ್ರಾಹಕರಿಗಾಗಿ ಅಮೆಜಾನ್‌ ಮೆಗಾ ಸ್ಯಾಲರಿ ಡೇ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್, ಗ್ಯಾಜೆಟ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ಮೇಲೆ ರಿಯಾಯಿತಿ ಮತ್ತು ಬೆಲೆ ಕಡಿತವನ್ನು ನೀಡಿದೆ. ಅಲ್ಲದೆ ಅಮೆಜಾನ್ ಹೆಚ್ಚಿನ ಗ್ಯಾಜೆಟ್ಸ್‌ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಕೆಲವು ಉತ್ಪನ್ನಗಳಿಗೆ ವಿಶೇಷ ರಿಯಾಯಿತಿಯನ್ನು ನೀಡುವ ಸಾಧ್ಯತೆಯಿದೆ. ಸದ್ಯ ಅಮೆಜಾನ್‌ ಮೆಆ ಸ್ಯಾಲರಿ ಡೇ ಸೇಲ್‌ನಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳಿಗೆ ರಿಯಾಯಿತಿ ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್ ಟಿವಿಗಳ ಮೇಲೆ 30% ವರೆಗೆ ರಿಯಾಯಿತಿ

ಸ್ಮಾರ್ಟ್ ಟಿವಿಗಳ ಮೇಲೆ 30% ವರೆಗೆ ರಿಯಾಯಿತಿ

ಅಮೆಜಾನ್‌ ಮೆಗಾ ಸ್ಯಾಲರಿ ನಡೇ ಸೇಲ್‌ನಲ್ಲಿ ಸ್ಮಾರ್ಟ್ ಟಿವಿ ಖರೀದಿಸುವವರಿಗೆ ಭರ್ಜರಿ ರಿಯಾಯಿತಿ ದೊರೆಯಲಿದೆ. ನೀವು ಸ್ಮಾರ್ಟ್‌ಟಿವಿ ಖರೀದಿಸುವುದಾದರೆ ಅಮೆಜಾನ್‌ ಸೇಲ್‌ನಲ್ಲಿ 4K ರೆಸಲ್ಯೂಶನ್ ಮತ್ತು HDR 10 ಸಾಮರ್ಥ್ಯದಂತಹ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್ ಟಿವಿಗಳ ಮೇಲೆ ಅಮೆಜಾನ್ 30% ರಿಯಾಯಿತಿಯನ್ನು ನೀಡುತ್ತಿದೆ.

ಹೆಡ್‌ಫೋನ್‌ಗಳ ಮೇಲೆ 50% ವರೆಗೆ ಆಫರ್‌

ಹೆಡ್‌ಫೋನ್‌ಗಳ ಮೇಲೆ 50% ವರೆಗೆ ಆಫರ್‌

ಹೆಡ್‌ಫೋನ್ ಎಂಬುದು ಬಹುತೇಕ ಎಲ್ಲರೂ ಬಯಸುವ ಪ್ರಾಡಕ್ಟ್‌ ಆಗಿದೆ. ಗುಣಮಟ್ಟದ ಹೆಡ್‌ಫೋನ್‌ ಇದ್ದರೆ ಸಕಾ ಮ್ಯೂಸಿಕ್‌ ಕೇಳುತ್ತಾ ಗುನುಗುವ ಯುವಜನತೆಯನ್ನು ನಾವಿಂದು ಕಾಣಬಹುದು. ಇನ್ನ೮ಉ ನೀವು ಹೆಡ್‌ಫೊನ್‌ ಖರೀದಿಸಬೇಕೆಂದು ಕೊಂಡಿದ್ದರೆ, ಅಮೆಜಾನ್‌ ಮೆಗಾ ಸ್ಯಾಲರಿ ಡೇ ಸೇಲ್‌ ಉತ್ತಮ ಆಯ್ಕೆಯಾಗಿದೆ. ಈ ಸೇಲ್‌ನಲ್ಲಿ ಅಮೆಜಾನ್‌ ಹೆಡ್‌ಫೋನ್‌ಗಳ ಮೇಲೆ 50% ರಿಯಾಯಿತಿಯನ್ನು ನೀಡುತ್ತಿದೆ.

ಟ್ಯಾಬ್ಲೆಟ್‌ ಗಳಿಗೆ 30% ಡಿಸ್ಕೌಂಟ್‌

ಟ್ಯಾಬ್ಲೆಟ್‌ ಗಳಿಗೆ 30% ಡಿಸ್ಕೌಂಟ್‌

ಟ್ಯಾಬ್ಲೆಟ್‌ಗಳು ಇಂದು ಎಲ್ಲರಿಗೂ ಅವಶ್ಯ ಎನಿಸಿದೆ. ಅದರಲ್ಲೂ ಆನ್‌ಲೈನ್‌ ಕ್ಲಾಸ್‌ ಶುರುವಾದ ನಂತರ ಲ್ಯಾಪ್‌ಟಾಪ್‌ ಇಲ್ಲವೇ ಟ್ಯಾಬ್‌ ಇರಲೇಬೇಕಾದ ಅನಿವಾರ್ಯತೆ ಇದೆ. ಇನ್ನು ನೀವು ನಿಮ್ಮ ಮಕ್ಕಳಿಎ ಅಥವಾ ನಿಮಗೆ ಟ್ಯಾಬ್ಲೆಟ್‌ ಖರೀದಿಸಬೇಕಾದರೆ ಅಮೆಜಾನ್‌ ಮೆಗಾ ಸ್ಯಾಲರಿ ಡೇ ಸೇಲ್‌ನಲ್ಲಿ 30% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಸ್ಪೀಕರ್‌ಗಳಿಗೆ 50% ವರೆಗೆ ರಿಯಾಯಿತಿ

ಸ್ಪೀಕರ್‌ಗಳಿಗೆ 50% ವರೆಗೆ ರಿಯಾಯಿತಿ

ಗುಣಮಟ್ಟದ ಸ್ಪೀಕರ್‌ ಮನೆಯಲ್ಲಿ ಇದ್ದರೆ ಸಾಕು ಪಾರ್ಟಿ ಮೋಡ್‌ಗಳಲ್ಲಿ ಸಂಭ್ರಮವನ್ನ ಆಚರಿಸಬಹುದಾಗಿದೆ. ಇನ್ನು ಸ್ಪೀಕರ್ ವಿಷಯ ಬಳಕೆ ಅನುಭವವನ್ನು ಸಂಪೂರ್ಣವಾಗಿ ಸುಧಾರಿಸಬಹುದು. ಅಮೆಜಾನ್‌ನಲ್ಲಿ ಹೆಚ್ಚು ಮಾರಾಟವಾಗುವ ಕೆಲವು ಸ್ಪೀಕರ್‌ಗಳು ಈಗ 50% ರಿಯಾಯಿತಿಯಲ್ಲಿ ಲಭ್ಯವಿವೆ. ಇನ್ನು ಈ ಕೆಲವು ಸ್ಪೀಕರ್‌ಗಳು ವಾಯರ್‌ಲೆಸ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಡಿವೈಸ್‌ಗಳೊಂದಿಗೆ ಸಹ ಬಳಸಬಹುದಾಗಿದೆ.

Most Read Articles
Best Mobiles in India

English summary
Amazon Mega Salary Day Sale: offering discounts and price cuts on electronics, gadgets, and smart TVs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X