ಬೆಂಗಳೂರಿನಲ್ಲಿ ಆಹಾರ ವಿತರಣೆಗೆ ಅಮೆಜಾನ್ ಎಂಟ್ರಿ!..ಸ್ವಿಗ್ಗಿ, ಝೊಮ್ಯಾಟೊಗೆ ಹೊಡೆತ!
ಚಿಲ್ಲರೆ ವ್ಯಾಪಾರ ಮತ್ತು ಆಹಾರ ವಿತರಣೆಯ ವಿಷಯದಲ್ಲಿ ಭಾರತದ ಬೆಳವಣಿಗೆಯನ್ನು ಕಂಡಿರುವ ಅಮೆಜಾನ್ ಸಂಸ್ಥೆ ಆಹಾರ ವಿತರಣಾ ಸೇವೆಗೆ ಕೈಹಾಕುತ್ತಿದೆ. ಇದೇ ದೀಪಾವಳಿ ಹಬ್ಬದ ಸಮಯದಲ್ಲಿ ಅಮೆಜಾನ್ ಆಹಾರ ಪೂರೈಸುವ ಆಪ್ ಅನ್ನು ಆರಂಭಿಸುವ ಯೋಜನೆಯಲ್ಲಿದ್ದು, ತನ್ನ ವಿಸ್ತಾರವಾದ ಚಿಲ್ಲರೆ ಆಹಾರ ಪೂರೈಕೆ ಸಂಪರ್ಕ ಜಾಲವನ್ನು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಇತರ ನಗರಗಳಿಗೂ ಸಹ ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಖಚಿತ ಮೂಲಗಳು ಹೇಳಿವೆ.

ಹೌದು, ಈ ದೀಪಾವಳಿಗೆ ಅಮೆಜಾನ್ ಆಹಾರ ವಿತರಣಾ ಸೇವೆಯ ಬಗ್ಗೆ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಅಮೆಜಾನ್ ಹೊಟೇಲ್ ಮಾಲಿಕರು ಮತ್ತು ಅಮೆಜಾನ್ ಮಧ್ಯೆ ಮಾತುಕತೆ ನಡೆಯುತ್ತಿದೆ. ಅಮೆಜಾನ್ ಮೂಲಕ ರೆಸ್ಟೋರೆಂಟ್ ಮಾಲಿಕರು ಶೇಕಡಾ 6ರಿಂದ 10ರಷ್ಟು ಕಮಿಷನ್ ಪಡೆಯುವ ಸಾಧ್ಯತೆಯಿದೆ. ಪ್ರಸ್ತುತ ಸ್ವಿಗ್ಗಿ, ಝೊಮ್ಯಾಟೊ ಮತ್ತು ಉಬರ್ ಈಟ್ಸ್ ಗಳು ಶೇಕಡಾ 20ರಿಂದ 30ರಷ್ಟು ಕಮಿಷನ್ ಹೇರುತ್ತಿದ್ದು ಅಮೆಜಾನ್ ನಲ್ಲಿ ಗ್ರಾಹಕರ ಮೇಲೆ ದರ ಕಡಿಮೆಯಾಗಲಿದೆ ಎಂದು ಅಮೆಜಾನ್‌ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆಜಾನ್ ಮೂಲಗಳ ಪ್ರಕಾರ, ಶೀಘ್ರದಲ್ಲೇ ಬೆಂಗಳೂರಿನಲ್ಲಿ ಪ್ರಾಯೋಗಿಕ ಯೋಜನೆಯ ಆಧಾರದ ಮೇಲೆ ಆಹಾರ ವಿತರಣಾ ಉದ್ದೇಶಗಳಿಗಾಗಿ ತನ್ನ ವಿಶಾಲವಾದ ಚಿಲ್ಲರೆ ವಿತರಣಾ ಜಾಲವನ್ನು ಹತೋಟಿಗೆ ತರಲಿದೆ.ಚಿಲ್ಲರೆ ವ್ಯಾಪಾರ ಮತ್ತು ಆಹಾರ ವಿತರಣೆಯ ವಿಷಯದಲ್ಲಿ ಅಮೆಜಾನ್ ಭಾರತವನ್ನು ಒಂದು ದೊಡ್ಡ ಮಾರುಕಟ್ಟೆಯೆಂದು ಪರಿಗಣಿಸುತ್ತದೆ. ಹಬ್ಬದ ಋತುವಿನಲ್ಲಿ ಯಾವುದೇ ಪ್ರಮುಖ ಘೋಷಣೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅಮೆಜಾನ್ ಉನ್ನತ ಕಾರ್ಯನಿರ್ವಾಹಕರೋರ್ವರು ತಿಳಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಭಾರತದಲ್ಲಿ ಆನ್‌ಲೈನ್ ಆಹಾರ ವಿತರಣಾ ವ್ಯವಹಾರವು ಶೇಕಡಾ 16 ರಷ್ಟು ಬೆಳವಣಿಗೆ ಸಾಧಿಸುತ್ತಿದೆ ಎಂದು ಸಿಎಜಿಆರ್ ವರದಿ ತಿಳಿಸಿದೆ. 2023ರ ವೇಳೆಗೆ ದೇಶದಲ್ಲಿ ಆನ್‌ಲೈನ್ ಆಹಾರ ವಿತರಣಾ ವ್ಯವಹಾರವು 17.02 ಬಿಲಿಯನ್ ಡಾಲರ್ ತಲುಪಲಿದೆ ಎಂದು ವ್ಯಾಪಾರ ಸಲಹಾ ಸಂಸ್ಥೆಯ ಮಾರ್ಕೆಟ್ ರಿಸರ್ಚ್ ಫ್ಯೂಚರ್ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಹಾಗಾಗಿ, ಅಮೆಜಾನ್ ಸಂಸ್ಥೆ ಕೂಡ ತನ್ನ ಆಹಾರ ವಿತರಣಾ ಅಪ್ಲಿಕೇಶನ್ ಅನ್ನು ಈ ದೀಪಾವಳಿಯಲ್ಲಿ ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಮಾಧ್ಯಮ ವರದಿಗಳಲ್ಲಿ ಅಭಿಪ್ರಾಯಪಡಲಾಗಿದೆ.

ಅಮೆಜಾನ್ ಈಗಾಗಲೇ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಇನ್ನು ಆಹಾರ ವಿತರಣಾ ವಿಭಾಗಕ್ಕೆ ನೂರಾರು ಮಿಲಿಯನ್ ಡಾಲರ್ಗಳನ್ನು ನಿಗದಿಪಡಿಸಲಾಗಿದೆ.ಇ-ಕಾಮರ್ಸ್ ವಲಯದಲ್ಲಿ ದೊಡ್ಡ ವಿತರಣಾ ಜಾಲವನ್ನು ಹೊಂದಿರುವ ಅಮೆಜಾನ್ ಆನ್‌ಲೈನ್ ಆಹಾರ ವಿತರಣಾ ವಿಭಾಗಕ್ಕೆ ಕಾಲಿಟ್ಟಿರುವುದು ಆಶ್ಚರ್ಯವೇನಲ್ಲ. ಪ್ರಮುಖ ಹೋಟೆಲ್ ಮಾಲೀಕರು ಮತ್ತು ಅಮೆಜಾನ್ ನಡುವಿನ ಚರ್ಚೆಗಳು ನಡೆಯಲಿವೆ. ಇತರರು ವಿಧಿಸುವ ಶೇ 20-30 ಕಮಿಷನ್ ಹೋಲಿಸಿದರೆ ಶೇ 6-10 ಶೇಕಡಾ ಕಮಿಷನ್ ದರದಲ್ಲಿ ಅಮೆಜಾನ್ ಸೇವೆ ನೀಡಬಹುದು ಎಂದು ಹೇಳಲಾಗಿದೆ.


Click it and Unblock the Notifications