ಅಮೆಜಾನ್ ಸೇವಿಂಗ್ಸ್ ಡೇಸ್ ಸೇಲ್: ಸ್ಮಾರ್ಟ್‌ಫೋನ್ ಖರೀದಿಸಲು ಇದುವೇ ಬೆಸ್ಟ್ ಟೈಂ!
ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ವಿಶೇಷ ಸೇಲ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಆನ್‌ಲೈನ್ ಶಾಪಿಂಗ್ ಪ್ರಿಯರನ್ನು ಸೆಳೆಯುವುದಕ್ಕಾಗಿ ವಿಶೇಷ ಡಿಸ್ಕೌಂಟ್ ಮೇಳಗಳನ್ನು ನಡೆಸುತ್ತಾ ಬಂದಿದೆ. ಸದ್ಯ ಇದೀಗ ಹೊಸ ವರ್ಷ, ಕ್ರಿಸ್‌ಮಸ್ ಹಬ್ಬ ಸಮೀಪಿಸುತ್ತಿರುವ ಸಮಯದಲ್ಲಿ ಹೊಸ ಸೇಲ್ ಅನ್ನು ಹೊತ್ತು ತಂದಿದೆ. ಸದ್ಯ ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೊಬೈಲ್ ಮತ್ತು ಟಿವಿ ಸೇವಿಂಗ್ ಡೇಸ್ ಸೇಲ್ ಅನ್ನು ನಡೆಸುತ್ತಿದೆ. ಈ ಸೇಲ್ ಇಂದು ಲೈವ್ ಆಗಿದ್ದು, ಡಿಸೆಂಬರ್ 22, 2021 ರವರೆಗೆ ಮುಂದುವರಿಯಲಿದೆ.

ಹೌದು, ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್ ಅನ್ನು ನಡೆಸುತ್ತಿದೆ. ಈ ಸೇಲ್‌ನಲ್ಲಿ ಶಿಯೋಮಿ, ಸ್ಯಾಮ್‌ಸಂಗ್, ಐಕ್ಯೂ, ಒಪ್ಪೋ, ಟೆಕ್ನೋ ಮತ್ತು ವಿವೋ ಸೇರಿದಂತೆ ಅನೇಕ ಬ್ರ್ಯಾಂಡ್‌ಗಳಲ್ಲಿ ರಿಯಾಯಿತಿಯನ್ನು ನೀಡುತ್ತಿದೆ. ಅದರಲ್ಲೂ ರೆಡ್ಮಿ ನೋಟ್ 11T 5G, ಸ್ಯಾಮ್‌ಸಂಗ್ ಗ್ಯಾಲಕ್ಸಿ M ಸರಣಿ, ಐಕ್ಯೂ Z ಸರಣಿ, ಐಕ್ಯೂ 7, ಒಪ್ಪೋ A ಸರಣಿ, ಟೆಕ್ನೋ ಸ್ಪಾರ್ಕ್ 8T, ವಿವೋ X60 ಸರಣಿ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ದೊರೆಯಲಿದೆ. ಹಾಗಾದ್ರೆ ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್‌ನಲ್ಲಿ ತನ್ನ ಗ್ರಾಹಕರಿಗೆ ಬ್ಯಾಂಕ್ ಆಫರ್ ಅನ್ನು ಘೋಷಿಸಿದೆ. ಇದರಿಂದ ಸ್ಮಾರ್ಟ್‌ಫೋನ್‌ಗಳು ಮತ್ತು ಟಿವಿಗಳನ್ನು ಹೆಚ್ಚುವರಿ ರಿಯಾಯಿತಿಯನ್ನು ಖರೀದಿಸಲು ಸಹಾಯವಾಗಲಿದೆ. ಅಲ್ಲದೆ ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್‌ಗಳು ಅಥವಾ EMI ಪಾವತಿಗಳನ್ನು ಬಳಸಿಕೊಂಡು ಖರೀದಿದಾರರು 1500ರೂ. ವರೆಗೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಖರೀದಿದಾರರು ತಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ 12 ತಿಂಗಳವರೆಗೆ ಎಕ್ಸ್‌ಚೇಂಜ್ ಆಫರ್ ಮತ್ತು ನೋ ಕಾಸ್ಟ್ EMI ಅನ್ನು ಸಹ ಪಡೆಯಬಹುದಾಗಿದೆ. ಜೊತೆಗೆ ಅಮೆಜಾನ್ ಪ್ರೈಮ್ ಸದಸ್ಯರು 20,000ರೂ. ವರೆಗೆ ಹಣವನ್ನು ಉಳಿತಾಯ ಮಾಡಬಹುದು ಎಂದು ಅಮೆಜಾನ್ ಕಂಪನಿ ಹೇಳಿದೆ.

ಇನ್ನು ಅಮೆಜಾನ್ ಮೊಬೈಲ್ ಮತ್ತು ಟಿವಿ ಸೇವಿಂಗ್ಸ್ ಡೇಸ್ ಸೇಲ್‌ನಲ್ಲಿ ರೆಡ್‌ಮಿ ನೋಟ್11T 5G, ಶಿಯೋಮಿ 11 ಲೈಟ್ NE 5G ಮತ್ತು ರೆಡ್‌ಮಿ ನೋಟ್ 10 ಪ್ರೊ ಡಾರ್ಕ್ ನೆಬುಲಾ ಸೇರಿದಂತೆ ಹೊಸದಾಗಿ ಬಿಡುಗಡೆಯಾದ ಶಿಯೋಮಿ ಫೋನ್‌ಗಳು ರಿಯಾಯಿತಿ ಪಡೆದುಕೊಂಡಿವೆ. ಇದಲ್ಲದೆ ಈ ಸೇಲ್‌ನಲ್ಲಿ ಐಕ್ಯೂ Z3, ಐಕ್ಯೂ Z5 ಮತ್ತು ಐಕ್ಯೂ 7 ಸ್ಮಾರ್ಟ್‌ಫೋನ್ ಗಳ ಮೇಲೆ 1,500ರೂ. ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಟೆಕ್ನೋ ಸ್ಮಾರ್ಟ್‌ಫೋನ್‌ಗಳಲ್ಲಿ ಖರೀದಿದಾರರು 10% ರಷ್ಟು ರಿಯಾಯಿತಿ ಪಡೆಯಬಹುದು. ಜೊತೆಗೆ ಹೊಸದಾಗಿ ಬಿಡುಗಡೆಯಾದ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ ಮೇಲೂ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಇದರ ನಡುವೆ ಫ್ಲಿಪ್‌ಕಾರ್ಟ್ ಕೂಡ ಬಿಗ್ ಸೇವಿಂಗ್ ಡೇಸ್ ಸೇಲ್ ಅಯೋಜಿಸಿದೆ. ಈ ಸೇಲ್ ಈಗಾಗಲೇ ಲೈವ್ ಆಗಿದ್ದು,ಡಿಸೆಂಬರ್ 21 ರವರೆಗೆ ಮುಂದುವರಿಯುತ್ತದೆ. ಇನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್‌ನಲ್ಲಿ ಎಲ್ಲಾ ಉತ್ಪನ್ನಗಳ ಮೇಲೆ ಫ್ರೀ ಡೆಲಿವರಿಯ್ನು ನೀಡುತ್ತಿದೆ. ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು SBI ಕ್ರೆಡಿಟ್ ಮತ್ತು EMI ವಹಿವಾಟಿನ ಮೇಲೆ 10% ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಅದರಲ್ಲೂ ಐಫೋನ್ 12 ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಐಫೋನ್ 12 ಅನ್ನು ಕೇವಲ 53,999ರೂ.ಗಳಿಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 65,900ರೂ. ಆಗಿದೆ ಅನ್ನೊದನ್ನ ಗಮನಿಸಬೇಕು. ಇದಲ್ಲದೆ ಈ ರಿಯಾಯಿತಿಯ ಮೇಲೆ, ನೀವು SBI ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ 3,000ರೂ.ವರೆಗಿನ ರಿಯಾಯಿತಿ ಕೂಡ ಪಡೆದುಕೊಳ್ಳಬಹುದಾಗಿದೆ. ಇದೆಲ್ಲಾ ರಿಯಾಯಿತಿಯನ್ನು ಪರಿಗಣಿಸಿದರೆ ಐಫೋನ್ 12 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ನಿಮಗೆ 50,999ರೂ.ಗಳಿಗೆ ದೊರೆಯಲಿದೆ.

ಇನ್ನು ಈ ಸೇಲ್‌ನಲ್ಲಿ ಮೋಟೋ G60 ಸ್ಮಾರ್ಟ್‌ಫೋನ್ 15,999ರೂ.ಗಳಿಗೆ ಲಭ್ಯವಾಗಲಿದೆ. ಸೇಲ್‌ನಲ್ಲಿ 1500ರೂ.ಗಳ ತನಕ ಫ್ಲಾಟ್ ರಿಯಾಯಿತಿಯನ್ನು ಒಳಗೊಂಡಿದೆ. ಜೊತೆಗೆ ಖರೀದಿದಾರರು ಹೆಚ್ಚುವರಿಯಾಗಿ ಕೆಲವು ಬ್ಯಾಂಕ್ ಕೊಡುಗೆಗಳನ್ನು ಪಡೆಯಬಹುದು.


Click it and Unblock the Notifications








